Home ಕರಾವಳಿ Archive by category ಮಂಗಳೂರು (Page 92)

ಮಂಗಳೂರಿನಲ್ಲಿ ದಸರಾ ನೈಟ್ ಮ್ಯಾರಥಾನ್ ಸ್ಪರ್ಧೆ

ಮಂಗಳೂರು ದಸರಾ ಮಹೋತ್ಸವ ಪ್ರಯುಕ್ತ ಝೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ಕುದ್ರೋಳಿ ಕ್ಷೇತ್ರದ ಸಹಯೋಗದಲ್ಲಿ ಆಯೋಜಿಸಲಾದ ನೈಟ್ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಸ್ಪರ್ಧೆಗೆ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್ ಅವರು ಚಾಲನೆ ನೀಡಿದರು. ಕುದ್ರೋಳಿ ಕ್ಷೇತ್ರ ದ ಪ್ರಧಾನ ದ್ವಾರದಿಂದ ಮಣ್ಣಗುಡ್ಡ, ನಾರಾಯಣಗುರು ಸರ್ಕಲ್, ಎಂ.ಜಿ. ರಸ್ತೆ, ಪಿವಿಎಸ್,

ಮಂಗಳೂರು: ಕುಡ್ಲದ ಪಿಲಿಪರ್ಬ-2023ರ ಚಪ್ಪರ ಮುಹೂರ್ತ ಕಾರ್ಯಕ್ರಮ

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ನಡೆಯಲಿರುವ ದ್ವಿತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2023” ದ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಜರುಗಿತು. ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, “ಕರಾವಳಿ ಭಾಗದಲ್ಲಿ ದಸರಾ ಎಂದರೆ ಅಲ್ಲಿ ಹುಲಿವೇಷ ಇದ್ದೇ ಇರುತ್ತದೆ. ಈಗ ಈ ಕಲೆ ಕರಾವಳಿ

ನವರಾತ್ರಿ ಹಬ್ಬದ ವಿಶೇಷ…ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಜಿ.ಎಲ್ ಸ್ವರ್ಣ ಹಬ್ಬ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

ನವರಾತ್ರಿಯ ಪ್ರಯುಕ್ತ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್ ವಿಶೇಷ ಕೊಡುಗೆ ನೀಡ್ತಾ ಇದೆ. ಅ.15ರಿಂದ 24ರವರೆಗೆ ಜಿಲ್ ಸ್ವರ್ಣ ಹಬ್ಬ ನಡೆಯಲಿದ್ದು, ಈ ಸ್ವರ್ಣ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ನೀಡ್ತಾ ಇದೆ.. ಬಂಗಾರದ ಚೈನ್‌‌ ಖರೀದಿಗೆ VA 6%ನಿಂದ ಆರಂಭ, ಜಂಟ್ಸ್ ಕಡ ಖರೀದಿಗೆ VA 6%ನಿಂದ‌ ಆರಂಭ, ಆ್ಯಂಟಿಕ್ ಜ್ಯುವೆಲ್ಲರ್ಸ್ ಖರೀದಿಗೆ VA 15% ನಿಂದ ಆರಂಭ, ಬ್ಯಾಂಗಲ್ಸ್ ಖರೀದಿಗೆ VA 8%ನಿಂದ

ಮಂಗಳೂರು – ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿ, ಸಂಸದ ನಳಿನ್ ಕುಮಾರ್ ಕಟೀಲ್ ವೀಕ್ಷಣೆ

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾಮಗಾರಿಗಳಿಗೆ ಪರಿಶೀಲನೆ ನಡೆಸಿದರು. ಮಂಗಳೂರಿನ ನಗರದ ಪಂಪ್‍ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಸ್ಮಾರ್ಟ್ ಸಿಟಿಯಡಿಯಲ್ಲಿ ವೆನ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ ವೀಕ್ಷಣೆಯನ್ನು ಮಾಡಿದರು. ಬೋಳಾರದಲ್ಲಿ ನಿರ್ಮಾಣವಾದ ಈಜುಕೊಳ ಕಾಮಗಾರಿ ಪರಿಶೀಲನೆ ನಡೆಸಿದರು.

ರಾಜ್ಯದಲ್ಲಿರುವುದು ಭ್ರಷ್ಟಾಚಾರದ ಹಾಗೂ ಪರ್ಸಂಟೇಜ್ ಸರ್ಕಾರ : ನಳಿನ್ ಕುಮಾರ್ ಕಟೀಲ್

ಮಂಗಳೂರು : `ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ 42 ಕೋಟಿ ರೂ. ಕಮಿಷನ್ ಹಣ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ.ಬಾಕಿ ಹಣ ಸರ್ಕಾರ ಬಿಡುಗಡೆ

ಮಂಗಳೂರು: ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್

ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರದ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್ ನಡೆಸಲಾಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ನೇತೃತ್ವದಲ್ಲಿ ನಡೆದ ಪರೇಡ್‍ನಲ್ಲಿ 262 ಸಕ್ರೀಯ ರೌಡಿಗಳನ್ನು ಸಂಬಂಧಪಟ್ಟ ಎಸಿಪಿರವರು ಪೆÇಲೀಸ್ ಆಯುಕ್ತರ ಮುಂದೆ ಹಾಜರುಪಡಿಸಿದರು. ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕೆಂದು ಪೆÇಲೀಸ್

ಮಂಗಳೂರು: ರಾಜ್ಯಾದ್ಯಂತ “ಕುದ್ರು” ಸಿನಿಮಾ ಬಿಡುಗಡೆ

ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿತು. ನಗರದ ಭಾರತ್ ಮಾಲ್‍ನ ಬಿಗ್ ಸಿನಿಮಾಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ನಟ ಡಾ. ದೇವದಾಸ್ ಕಾಪಿಕಾಡ್ ಅವರು ದೀಪ ಬೆಳಗಿಸುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಸಿನಿಮಾ

ಮಂಗಳೂರು: ಅಕ್ಷಯ್ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ, ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ

ತುಡರ್ ಪ್ರಕಾಶನದಿಂದ ಪ್ರಕಟಿಸಲಾದ ಅಕ್ಷಯ್ ಆರ್. ಶೆಟ್ಟಿ ಅವರ ‘ಪೆರ್ಗ’ ತುಳು ನಾಟಕ ಹಾಗೂ ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು. ಪೆರ್ಗ ತುಳು ನಾಟಕ ಕೃತಿಯನ್ನು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಅನಾವರಣಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಲೇಖಕಿ ಅಕ್ಷಯ ಶೆಟ್ಟಿ ಅವರ ಗಮನ ಇರುವುದು ಸಂಸ್ಕøತಿಯನ್ನು

ಮಂಗಳೂರು: ಮಂಗಳೂರಿನಲ್ಲಿ ಅ.17ರಿಂದ 21ರ ತನಕ ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಮತ್ತು ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿಯು ಅಕ್ಟೋಬರ್ 17ರಿಂದ 21ರ ತನಕ ಮಂಗಳೂರಿನ ಟೌನ್ ಹಾಲ್‍ನಲ್ಲಿ 9 ರೌಂಡ್‍ಗಳ ಸ್ಪರ್ಧೆ ನಡೆಯಲಿದೆ ಎಂದು ಚೆಸ್ ಅಸೋಸಿಯೇಶನ್‍ನ ಅಧ್ಯಕ್ಷರಾದ ರಮೇಶ್ ಕೋಟೆ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈ ಪಂದ್ಯಾಟಕ್ಕೆ ಬೇರೆ ಬೇರೆ ರಾಜ್ಯಗಳ ಆಟಗಾರರು, ಅಂತರಾಷ್ಟ್ರೀಯ ಮಟ್ಟದ ಆಟಗಾರರು ಸಹಿತ ಸುಮಾರು 400

ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

ಮಂಗಳೂರು: ಎಜೆ ಆಸ್ಪತ್ರೆ ಮುಂಭಾಗ ಆಸ್ಪತ್ರೆ ಕಡೆಯಿಂದ ಹೊರ ಬರುತ್ತಿದ್ದಂತೆ ಆಕ್ಟೀವ ಸ್ಕೂಟರ್ ಆಟೋ ರಿಕ್ಷಾಕ್ಕೆ ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಂತೆ ಮುಂಭಾಗದದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಮೈಮೇಲೆ ಹರಿದು ಕಾವುರು ನಿವಾಸಿ ಕೌಶಿಕ್ (21) ಮೃತಪಟ್ಟಿರುತ್ತಾರೆ . ಮಂಗಳೂರು ಸಂಚಾರ ಪೂರ್ವ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ