Home ಕರಾವಳಿ Archive by category ಮೂಡಬಿದರೆ (Page 41)

ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮೂಡುಬಿದಿರೆಯಲ್ಲಿ ಮತಯಾಚನೆ

ಮೂಡುಬಿದಿರೆ: ಮುಲ್ಕಿ -ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಅವರು ಕಾರ್ಯಕರ್ತರೊಂದಿಗೆ ತನ್ನ ವಾಡ್ ೯64ರಲ್ಲಿ ಮತಯಾಚಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಮತ್ತಿತರರಿದ್ದರು.

ಮೂಲ್ಕಿ ,ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ : ಉಮಾನಾಥ ಕೋಟ್ಯಾನ್ ಗೆ ಗ್ರಾಮಸ್ಥರ ಬೆಂಬಲ

ಚುನಾವಣೆ ಪ್ರಚಾರ ಇಂದು ಕೊನೆಯ ದಿನವಾಗಿದ್ದು, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಇರುವೈಲು ಗ್ರಾಮದ ಜನರು ಒಕ್ಕೊರಲಿನಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 20 ವರ್ಷಗಳಲ್ಲಿ ಆಗದ ಕೆಲಸ ಕಾರ್ಯಗಳು ಕೇವಲ 5 ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಇರುವೈಲು ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ 7 ಕೋಟಿಗೂ ಅಧಿಕ ವೆಚ್ಚದ ಅನುದಾನ ಬಿಡುಗಡೆಗೊಂಡು ಉತ್ತಮ ರೀತಿಯಲ್ಲಿ

ಮೂಡಬಿದಿರೆ ವಿಧಾನಸಭಾ ಕ್ಷೇತ್ರ – ಉಮಾನಾಥ ಕೋಟ್ಯಾನ್ ರೋಡ್ ಶೋ

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮೂಡುಬಿದಿರೆಯ ವಿವಿಧೆಡೆ ರೋಡ್ ಶೋ ನಡೆಸಿ ಗಮನಸೆಳೆದರು. ಉಮಾನಾಥ ಕೋಟ್ಯಾನ್ ಅವರು ನೀರುಡೆ ಚರ್ಚ್ ಬಳಿಯಿಂದ ಮತಯಾಚನೆ ಆರಂಭಿಸಿದರು. ನೀರುಡೆಯಲ್ಲಿ ಕೃಷಿಕರೇ ಹೆಚ್ಚಿದ್ದು ಈ ಭಾಗದಲ್ಲಿ ತೀವ್ರ ನೀರಿನ ಸಮಸ್ಯೆ ಇತ್ತು. ಇಲ್ಲಿ ಹರಿಯುವ ನೀರಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದು, ಈ ಭಾಗದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಂದಿನ

ಇಂದು ಸಂಜೆ ಹೆಚ್‌ಡಿಕೆ ನೇತೃತ್ವದಲ್ಲಿ ಕೃಷ್ಣಾಪುರದಲ್ಲಿ ಜೆಡಿಎಸ್ ಸಾರ್ವಜನಿಕ ಸಭೆ

ಮೂಡುಬಿದಿರೆ : ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಇಂದು ಸಂಜೆ 6 ಗಂಟೆಗೆ ಕೃಷ್ಣಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಾ. ಅಮರಶ್ರೀ ಶೆಟ್ಟಿ ಹೇಳಿದರು. ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದು ಈಗಾಗಲೇ ೩೫ ಸಾವಿರ ಮನೆಗಳನ್ನು ಭೇಟಿಯಾಗಿದ್ದೇನೆ. ಯಾವುದೇ ರಾಜಕೀಯ

ಚುನಾವಣೆಗೆ ಮೂಡುಬಿದಿರೆ ಕ್ಷೇತ್ರದಲ್ಲಿ ಸಿದ್ಧತೆ ಪೂರ್ಣ: ಚುನಾವಣಾಧಿಕಾರಿ ಮಹೇಶ್ಚಂದ್ರ

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮೇ.10ರಂದು ನಡೆಯುವ ವಿಧಾನಸಭೆಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 221 ಮತಗಟ್ಟೆಗಳಲ್ಲಿ 103 ಮತಗಟ್ಟೆಗಳಿಗೆ ವೆಬ್‌ಕಾಸ್ಟ್ ಅಳವಡಿಸಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ಸಹಿತ 62 ವಾಹನಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಮಹೇಶ್ಚಂದ್ರ ಹೇಳಿದರು. ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಕ್ಷೇತ್ರದಲ್ಲಿ ಮತಗಟ್ಟೆ 166ರ ಪೆರ್ಮುದೆ

ಉಮಾನಾಥ ಕೋಟ್ಯಾನ್ ಬಗ್ಗೆ ಕಾಂಗ್ರೆಸ್‍ನಿಂದ ಅಪಪ್ರಚಾರ : ಉಮೇಶ್ ಪೈ ಹೇಳಿಕೆ UMANATH KOTIAN

ಮೂಡುಬಿದಿರೆ : ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಎಲ್ಲಾ ಸಮುದಾಯಗಳಿಗೂ ಸಮಾನ ಆದ್ಯತೆ ನೀಡಿದ್ದು ಊರಿನ ಪ್ರಗತಿಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿಮತ ಬೇಧವಿಲ್ಲದೆ ಸ್ಪಂದಿಸಿದ್ದಾರೆ. ಈಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡದೆ ಆತ್ಮಸಾಕ್ಷಿಯಾಗಿ ಮತಚಲಾಯಿಸಬೇಕು ಎಂದು ಹುನುಮಂತ, ವೆಂಕಟರಮಣ ದೇವಳಗಳ ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ಹೇಳಿದರು.

ಮೂಡಬಿದ್ರೆ : ಮಿಥುನ್ ರೈ ವಿವಿಧೆಡೆ ಮತಯಾಚನೆ

ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಮಿಥುನ್ ರೈ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿ, ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪಿ ಹಾಗೂ ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರ ಬಾಂಧವರನ್ನು ಭೇಟಿ ಮಾಡಿ ಮತಯಾಚನೆಯನ್ನು ನಡೆಸಿದರು.

ಹಿಂದೂ ಸಂಘಟನೆಗಳ ನಿಷೇಧ ವಿರೋಧಿಸಿ ಮೂಡುಬಿದಿರೆಯಲ್ಲಿ ಹನುಮನ್ ಚಾಲೀಸ್ ಪಠಣ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಲ್ಲಿ ರಾಷ್ಟ್ರೀಯ ಹಿಂದೂ ಸಂಘಟನೆಯಾದ ವಿಶ್ವಹಿಂದೂ ಪರಿಷತ್ ಬಜರಂಗದಳ, ಮಾತ್ರಶಕ್ತಿ ದುರ್ಗಾವಾಹಿನಿ ಸಂಘಟನೆಯನ್ನು ನಿಷೇಧಗೊಳಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮೂಡುಬಿದಿರೆ ವೆಂಕಟರಮಣ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಮಂತ್ರ ಪಠಣ ಜಪಿಸುವ ಮೂಲಕ ರಾಷ್ಟ್ರ ಸೇವೆ ಮಾಡುವ ಸಂಘಟನೆಯನ್ನು ನಿಷೇದಿಸಬಾರದು ಹಾಗೂ

ಶಿರ್ತಾಡಿ : ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮತಯಾಚನೆ

ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗುರುವಾರದಂದು ಶಿರ್ತಾಡಿ ಜಿ.ಪಂ.ಕ್ಷೇತ್ರದ ಬೆಳುವಾಯಿ, ದರೆಗುಡ್ಡೆ ಮತ್ತು ಅಳಿಯೂರು ಪೇಟೆಗಳಲ್ಲಿ ಮತಯಾಚಿಸಿದರು. ಮಂಡಲ ಅಧ್ಯಕ್ಷರಾದ ಸುನೀಲ್ ಆಳ್ವ, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರಾದ ಸುಕೇಶ್ ಶೆಟ್ಟಿ, ಅಶ್ವತ್ಥ್ ಪಣಪಿಲ, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ತೋಡಾರು ಗ್ರಾಮದಲ್ಲಿ ಉಮಾನಾಥ ಕೋಟ್ಯಾನ್ ಮತಪ್ರಚಾರ : ಕಾಂಗ್ರೆಸ್ ಮುಖಂಡ ಸಚಿನ್ ಶೆಟ್ಟಿ ಬಿಜೆಪಿಗೆ ಸೇರ್ಪಡೆ

ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಡಾರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಮತ ಪ್ರಚಾರ ನಡೆಸಿದರು.ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸಚಿನ್ ಶೆಟ್ಟಿ ಅವರು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯ ಶೈಲಿಯನ್ನು ಮೆಚ್ಚಿ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಡೆ,ಪಂಚಾಯತ್ ಸದಸ್ಯರುಗಳಾದ