ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು, ಅತಿಕಾರಿಬೆಟ್ಟು, ಕವತ್ತಾರು, ಬಜ್ಪೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಯೋಗ್ಯವಾದ ಸುಮಾರು ಒಂದು ಸಾವಿರ ಎಕರೆಗೂ ಮಿಕ್ಕಿ ಭೂಮಿಯಿದ್ದು, ಜನರು ಸರಕಾರಕ್ಕೆ ಕೊಡಲು ಉತ್ಸುಕರಾಗಿದ್ದು, ತಾವು ದಯವಿಟ್ಟು ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಭೂ ಪ್ರದೇಶವನ್ನು
ಮೂಡಬಿದ್ರಿ ತಾಲೂಕಿನ ಹೊಸಬೆಟ್ಟು ಗ್ರಾಮದ ಬೊಗ್ರುಗುಡ್ಡೆ ನಿವಾಸಿಯಾದ ಅವಿನಾಶ್ ಇವರ ತಾಯಿ ಕಳೆದ ಕೆಲವು ದಿನಗಳಿಂದ ಬೊನ್ ಮ್ಯಾರೋ ಕಾಯಿಲೆಯಿಂದ ಬಳಲುತ್ತಿದ್ದು ಇವರ ಕುಟುಂಬ ತೀವ್ರವಾಗಿ ಬಡತನದಲ್ಲಿ ಹಿಂದುಳಿದಿದ್ದು ಇಲ್ಲಿಯವರೆಗೆ ಅನೇಕ ಹಣದ ಖರ್ಚು ಆಗಿದ್ದು ಇನ್ನು ಈ ಚಿಕಿತ್ಸೆಯ ವೆಚ್ಚ 10 ಲಕ್ಷ ಖರ್ಚು ಆಗಳಿದ್ದು ಇವರ ಮನವಿಗೆ ಸ್ಪಂದಿಸಿ ಇಂದು ನಮ್ಮ ತಂಡ 15000/- ರೂಪಾಯಿ ಹಣವನ್ನು ರೋಗಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ತಂಡದ ಸರ್ವ
ಮೂಡುಬಿದಿರೆ: ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಅಭಿವೃದ್ಧಿಯಾಗದಿರುವ ಹಲವಾರು ಯೋಜನೆಗಳಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ, ವಸತಿ, ಆರೋಗ್ಯ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಪರಿಹಾರ ಕಾಣದೆ ಹಾಗೇ ಉಳಿದುಕೊಂಡಿದೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಪುತ್ರಿ ಡಾ.ಅಮರಶ್ರೀ
ಮೂಡುಬಿದಿರೆ: ಮುಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಎ. ಕೋಟ್ಯಾನ್ ಅವರು ಸಹಸ್ರಾರು ಸಂಖ್ಯೆಯ ಕೇಸರಿಪಡೆಯೊಂದಿಗೆ ಮೆರವಣಿಗೆಯಲ್ಲಿ ಆಡಳಿತ ಸೌಧಕ್ಕೆ ಆಗಮಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಅವರು ಕಳೆದ ಐದು ವರ್ಷಗಳಲ್ಲಿ ಎರಡು ವರ್ಷ ಕೊರೋನಾದಿಂದಾಗಿ ಸಮಸ್ಯೆಯಾಗಿತ್ತು. ಆದರೆ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ.
ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಆಲ್ಫೋನ್ಸ್ ಫ್ರಾಂಕೋ ಅವರು ಸೋಮವಾರ ಮೂಡುಬಿದಿರೆ ಚುನಾವಣಾಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರ್, ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯ ಮಹಿಳಾ ಮಲಿಕ್ ಸೂರಿಂಜೆ, ಮಹಿಳಾ ರಾಷ್ಟ್ರೀಯ ಮುಖಂಡೆ ಆಯೇಷಾ ಬಜ್ಪೆ ಈ ಸಂದರ್ಭದಲ್ಲಿದ್ದರು.
ಮೂಡುಬಿದಿರೆ : ಇಲ್ಲಿನ ಮೆ. ಜಿ ನಾಗೇಶ್ ಪೈ ಅಂಡ್ ಕೋಸಂಸ್ಥೆಯ ಸ್ಥಾಪಕ ಪಾಲುದಾರ ,ಹಿರಿಯ ವರ್ತಕ ಬಿ ಶ್ರೀನಿವಾಸ ಬಾಳಿಗಾ (89 )ಏಪ್ರಿಲ್ 16ರಂದು ಸ್ವರಾಜ್ಯ ಮೈದಾನ ಬಳಿ ಇರುವ ಗುರುಕೃಪಾ ನಿವಾಸದಲ್ಲಿ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪ್ರಸ್ತುತ ವ್ಯವಹಾರವನ್ನು ಪಾಲುದಾರರಾಗಿ ಮುನ್ನಡೆಸುತ್ತಿರುವ ಬಿ ಗಣೇಶ್ ಬಾಳಿಗಾ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾತ್ವಿಕ ಮತ್ತು ಧಾರ್ಮಿಕ ಮನೋಭಾವದವರಾಗಿದ್ದ ಬಾಳಿಗ ಕ್ರಿಕೆಟ್ ಮತ್ತು
ಮೂಡುಬಿದಿರೆ: ಕವಿ, ಶಿಕ್ಷಕಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ `ಕೃಷ್ಣ ಸಿಗಲಿಲ್ಲ’ ಕೃತಿಯನ್ನು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಕೃತಿ ಪ್ರಕಟಿಸಿರುವ ಅಜೆಕಾರಿನ ಶ್ರೀ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯ ಮುಖ್ಯಸ್ಥ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಮಹಾವೀರ ಜಯಂತಿಯನ್ನು ಭಾನುವಾರ ಕೃಷಿ ಸಿರಿ ವೇದಿಕೆಯಲ್ಲಿ ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಅವರು ಮಾತನಾಡಿ ಜೈನ ಧರ್ಮದಲ್ಲಿ ಸಂಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬದುಕಿನಲ್ಲಿ ತಾಳ್ಮೆ ಬಹು ಮುಖ್ಯ. ಇಲ್ಲವಾದರೆ ವ್ಯಕ್ತಿಯ ಜೀವನ ಅಸ್ತವ್ಯಸ್ತವಾಗುತ್ತದೆ. ಬದಲಾಗುತ್ತಿರುವ ಸಮಾಜದಲ್ಲಿ ಸರಳತೆಯನ್ನು ದೌರ್ಬಲ್ಯವೆಂದು
ಮೂಡುಬಿದಿರೆ: ಕವಿ, ಶಿಕ್ಷಕಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ `ಕೃಷ್ಣ ಸಿಗಲಿಲ್ಲ‘ ಕೃತಿಯನ್ನು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು. ಕೃತಿ ಪ್ರಕಟಿಸಿರುವ ಅಜೆಕಾರಿನ ಶ್ರೀ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯ ಮುಖ್ಯಸ್ಥ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ
ಮೂಡುಬಿದಿರೆ:ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಿಥುನ್ ರೈ ಸೋಮವಾರ ಬೆಳಿಗ್ಗೆ 10 ಗಂಟೆಗೆ ಆಡಳಿತ ಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲ್ಲಿದ್ದಾರೆ. ಇದಕ್ಕು ಮೊದಲು ಅವರು ಸ್ವರಾಜ್ಯ ಮೈದಾನದಿಂದ ತಾಲ್ಲೂಕು ಕಚೇರಿವರೆಗೆ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಸ್ವರಾಜ್ಯ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಆಮ್