ಮೂಡುಬಿದಿರೆ: ಇಲ್ಲಿನ ಪುರಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಕಾರದಿಂದ ರೂ 1 ಕೋಟಿ ಅನುದಾನ ಬಂದಿದ್ದು ಈ ಕಾಮಗಾರಿಯಲ್ಲಿ ಶೇ. 20ರಷ್ಟು ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಪಕ್ಷೀಯ ಸದಸ್ಯ ಸುರೇಶ್ ಕೋಟ್ಯಾನ್, ಶಂಕ ವ್ಯಕ್ತಪಡಿಸಿ, ಆರೋಪಿಸಿದ ಘಟನೆ ನಡೆದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಆರೋಪಕ್ಕೆ ಸಾಕ್ಷಿ
ಮೂಡುಬಿದಿರೆಯ ತಾಲೂಕು ಆಡಳಿತ ಸೌಧದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಯಿತು. ನಂತರ ಲೋಕಾಯುಕ್ತ ಡಿವೈಎಸ್‍ಪಿ ಕಲಾವತಿ ಮಾಧ್ಯಮದವರಿಗೆ ಮಾಹಿತಿ ನೀಡಿ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 8 ದೂರುಗಳು ಸಾರ್ವಜನಿಕರಿಂದ ಬಂದಿದ್ದು, ಆರ್ ಟಿಸಿ ಸಂಬಂಧಪಟ್ಟಂತೆ ಒಂದು ಪ್ರಕರಣವನ್ನು ಮಂಗಳವಾರ ಇತ್ಯರ್ಥ ಮಾಡಲಾಗಿದೆ. ಮೂರು ದೂರುಗಳಿಗೆ ಸೂಕ್ತ ನಮೂನೆ `ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಲಾಗಿದೆ,
ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ವತಿಯಿಂದ ಸಮಾಜ ಮಂದಿರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಲಾಪಗಳೊಂದಿಗೆ ನಡೆಯಲಿರುವ 75ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾನು ಇಂದು ಏನಾಗಿದ್ದೇನೆ ಅದು ಸಾಹಿತ್ಯ ಇರಬಹುದು ಸಾಂಸ್ಕೃತಿಕ ವ್ಯಕ್ತಿ ಇರಬಹುದು ಅಥವಾ ರಾಜಕೀಯದಲ್ಲಿ ಒಂದು ಸ್ಥಾನ ಪಡೆಯಲು ಗಂಗಾಮೂಲ ಯಾವುದೆಂದರೆ ಅದು ಈ ಸಮಾಜ ಮಂದಿರ ಸಭಾ ಮತ್ತು ಸರಸ್ವತಿ
ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ, ದೇಶವಿರೋಧಿ ಆಡಳಿತವನ್ನು ವಿರೋಧಿಸಿ ಮತ್ತು ವಿಪರೀತ ಬೆಲೆ ಏರಿಕೆಯನ್ನು ಖಂಡಿಸಿ ಸಿ.ಪಿ.ಐ.ಎಂನ ತಾಲೂಕು ಸಮಿತಿ ವತಿಯಿಂದ ಸೋಮವಾರ ಆಡಳಿತ ಸೌಧದ ಮುಂಭಾಗದಲ್ಲಿ ಪ್ರಚಾರಾಂದೋಲನ ನಡೆಯಿತು.ಸಿ.ಪಿ.ಐ.ಎಂನ ರಾಜ್ಯ ಸಮಿತಿಯ ಸದಸ್ಯ ಜಿ.ಎನ್ ನಾಗರಾಜ್ ಅವರು ಪ್ರಚಾರಾಂದೋಲನವನ್ನು ಉದ್ದೇಶಿಸಿ ಮಾತನಾಡಿ ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರದಲ್ಲಿ ತನ್ನನ್ನು
ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಡುಬಿದಿರೆಯನ್ನು ತ್ಯಾಜ್ಯ ಮುಕ್ತ ಸ್ವಚ್ಛ -ಸುಂದರ ನಗರವನ್ನಾಗಿಸಲು ಹೊರಟಿರುವ ನೇತಾಜಿ ಬಿಗ್ರೇಡ್ (ರಿ) ಸಂಘಟನೆಯು ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಸ್ವರಾಜ್ಯ ಮೈದಾನದಲ್ಲಿರುವ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಯ ಕೈಂಕರ್ಯವನ್ನು ಕೈಗೊಂಡು ಸಂಚುರಿ (100) ವಾರವನ್ನು ಪೂರೈಸಿದೆ. ನೇತಾಜಿ
ಮೂಡುಬಿದಿರೆ : ಮಾದಕ ದ್ರವ್ಯ ಸೇವನೆ, ಮಾದಕ ವ್ಯಸನ ಈ ಸಮಾಜಕ್ಕೆ ಅಂಟಿಕೊಂಡಿರುವ ಕೆಟ್ಟ ರೋಗ. ಈ ದುಶ್ಚಟಕ್ಕೆ ದೊಡ್ಡ ದೊಡ್ಡ ನಗರಗಳಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅತೀ ವೃದ್ಧರು ಕೂಡ ಬಲಿಯಾಗುವ ಮೂಲಕ ಇದು ರಾಷ್ಟ್ರೀಯ ಸಮಸ್ಯೆಯಾಗಿ ತಲೆದೂರಿದೆ. ಇಂತಹ ವ್ಯಸನಕ್ಕೆ ದಾಸರಾಗಿರುವ ವ್ಯಕ್ತಿಗಳಿಗೆ ಧೈರ್ಯ ತುಂಬಿ ಮನ ಪರಿವರ್ತನೆ ಮಾಡಬೇಕು ಎಂದು ಆಳ್ವಾಸ್‍ನ ಪ್ರಕೃತಿ – ಯೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಾ ಶೆಣೈ
ಮೂಡುಬಿದಿರೆ: 41 ಘಂಟೆಗಳಲ್ಲಿ 2,700ಕಿ.ಮೀ. ಚಾಲನೆ ಮಾಡಿ ಅಸ್ವಸ್ಥ ಬಡ ಕೂಲಿ ಕಾರ್ಮಿಕನ ಜೀವ ಉಳಿಸಿ ಮಾನವೀಯತೆಯ ಸಾಹಸ ಮೆರೆದ ಐರಾವತ ಅಂಬುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ, ಚಾಲಕ ಮೂಡುಬಿದಿರೆಯ ಲಾಡಿ ನಿವಾಸಿ ಅಶ್ವತ್ಥ್ ಅವರನ್ನು ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸೋಮವಾರ ಸಂಜೆ ಸಮ್ಮಿಲನ್ ಹಾಲ್ ನಲ್ಲಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿ ಮಂಗಳೂರು ಕೆ.ಎಂ.ಸಿಯ ಡಾ.ಮಧುಸೂಧನ್ ಉಪಾಧ್ಯ, ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರೀಫ್, ಕಾರ್ಯದರ್ಶಿ
ಮೂಡುಬಿದಿರೆ : ಸೇವಾ ದಿವಸದ ಅಂಗವಾಗಿ ಕೇಂದ್ರ ಸರಕಾರವು ಭಾರತ ಸ್ವಚ್ಛತಾ ಲೀಗ್ ‘ ಎಂಬ ಅಂತರ್ ನಗರ ಸ್ಪರ್ಧೆಯನ್ನು ಆಯೋಜಿಸಿದ್ದು ಮೂಡುಬಿದಿರೆಯ ಪುರಸಭೆಯು ವಿವಿಧ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸಮಗ್ರ ಸ್ವಚ್ಛತಾ ಆಂದೋಲನ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶ್ರೀ ಜೈನ ಮಠದ ಭಟ್ಟಾರಕ ಸ್ವಾಮೀಜಿ ಸಾವಿರ ಕಂಬದ ಬಸದಿಯ ಆವರಣದಲ್ಲಿ
ಮೂಡುಬಿದಿರೆ ತಾಲೂಕಿನ ಅಶ್ವಥಪುರದ ಬೇರಿಂಜೆ ಗುಡ್ಡ ಎಂಬಲ್ಲಿ ಒಂಟಿ ಮಹಿಳೆ ಕಮಲ ಅವರ ಮನೆಗೆ ಕಳೆದ 15 ದಿನಗಳ ಹಿಂದೆ ನುಗ್ಗಿ ಕುತ್ತಿಗೆ ಹಿಡಿದು ಚಿನ್ನಾಭರಣ ಕಳವು ಮಾಡಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಶ್ವತ್ಥಪುರದ ನಿವಾಸಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಹಾಗೂ ಹರೀಶ್ ಪೂಜಾರಿ ಬಂಧಿತ ಆರೋಪಿಗಳು. ಅಂಗನವಾಡಿ ಸಹಾಯಕಿಯಾಗಿ ದುಡಿಯುತ್ತಿದ್ದ ಕಮಲ ಒಂಟಿಯಾಗಿ ವಾಸವಿದ್ದು. ಇದರ ಮಾಹಿತಿ ಇದ್ದ ಆರೋಪಿಗಳು ಕಳೆದ ತಿಂಗಳು 2 ಜನ
ಮೂಡುಬಿದಿರೆ: ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ದ.ಕ.ಪ.ಪೂ ಕಾಲೇಜುಗಳ ಪ್ರಾಂಶುಪಾಲರುಗಳ ಸಂಘ ಹಾಗೂ ಮೂಡುಬಿದಿರೆಯ ಜೈನ್ ಪ.ಪೂ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಹೊಸ ಶಿಕ್ಷಣ ನೀತಿಯಲ್ಲಿ ರಾಜ್ಯಶಾಸ್ತ್ರದ ವ್ಯಾಪ್ತಿ ಮತ್ತು ಸ್ವರೂಪ’ದ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಗಾರ ಜೈನ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಗಾರವನ್ನು ಉದ್ಘಾಟಿಸಿ