ಮೂಡುಬಿದಿರೆ : ಗಣೇಶನ ಹಬ್ಬ ಹಾಗೂ ತೆನೆ ಹಬ್ಬದ ಸಂದರ್ಭಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಬ್ಬಿಗೆ ಸಕತ್ ಬೇಡಿಕೆ ಇರುತ್ತದೆ. ಕಳೆದ ಎರಡು ವರ್ಷ ಕೋರೋನಾ ಕಾರಣದಿಂದ ಚೌತಿ ಮತ್ತು ತೆನೆ ಹಬ್ಬ ಸರಳವಾಗಿ ಆಚರಿಸಿದ ಕಾರಣ ಕಬ್ಬಿಗೆ ಬೇಡಿಕೆ ಇರಲಿಲ್ಲ. ಕೊರೋನಾ ಕಾರಣದಿಂದ ಸಂಕಷ್ಟಕೊಳಗಾದ ಕಬ್ಬು ಬೆಳೆದ ರೈತರ ಮೊಗದಲ್ಲಿ ಇದೀಗ ಈ ಬಾರಿ ಮಂದಹಾಸ ಮೂಡಿದೆ.
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ 400/220 ಕೆ.ವಿ ವಿದ್ಯುತ್ ಸ್ಥಾಪನೆಯ ಕುರಿತು ಈಗಾಗಲೇ ಪಂಚಾಯತ್‍ಗೆ ಮಾಹಿ ತಿಯನ್ನು ನೀಡಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಯಾರ ಗಮನಕ್ಕೂ ಬಾರದೇ ಜನ ವಾಸ್ತವ್ಯವಿರುವ ಪ್ರದೇಶ, ಕೃಷಿ ಭೂಮಿಯಲ್ಲಿ ವಿದ್ಯುತ್ ಸಬ್ ಸ್ಟೇಶನ್ ಅನುಷ್ಠಾನಗೊಳಿಸಲು ಕೆ.ಪಿ.ಟಿ.ಸಿ.ಎಲ್‍ನ
ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಮತ್ತು ಸರಕಾರಿ ಪ್ರೌಢಶಾಲೆ ನೀರ್ಕರೆ ಇವುಗಳ ಸಹಯೋಗದಲ್ಲಿ ಪ್ರೌಢ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವು ನೀರ್ಕೆರೆಯ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯಿತು.ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಸರಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ
ಮೂಡುಬಿದಿರೆ: ಯಕ್ಷಗಾನ ಶೈಲಿಯ ಕೃಷ್ಣ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಶುಕ್ರವಾರ ನಡೆಯಿತು. ಪೇಟೆಯ ಬೀದಿಯುದ್ದಕ್ಕೂ ನೂರಾರು ಮಡಿಕೆಗಳು ಕಟ್ಟಿ, ಅವುಗಳನ್ನು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ ಅವರು ಒಡೆಯುವ ಸಂಭ್ರಮಕ್ಕೆ ಊರ ಪರವೂರಿನ ಸಾವಿರಾರು ಮಂದಿ ಭಕ್ತಾಧಿಗಳು ಸಾಕ್ಷಿಯಾದರು. ಪೇಟೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಮಿ, ಮೊಸರು ಕುಡಿಕೆ ಉತ್ಸವಕ್ಕೆ
ಶ್ರೀ ಹನುಮಾನ್ ಮಂದಿರ (ರಿ) ಎಡಪದವು ಇದರ ಮುಂದಾಳುತ್ವದಲ್ಲಿ ಸ್ಥಳೀಯ ಶಾಲಾ- ಕಾಲೇಜುಗಳ ಸಹಭಾಗಿತ್ವದಲ್ಲಿ ಭಾರತದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಅತ್ಯಂತ ವೈಭವೋಪೇತ ವಾಗಿ ಎಡಪದವಿನಲ್ಲಿ ಆಚರಿಸಲಾಯಿತು. ಎಡಪದವು ಗ್ರಾಮದ ಕಣ್ಣೋರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೇಲ್ ಹಿರಿಯ ಪ್ರಾಥಮಿಕ ಶಾಲೆ, ಎಡಪದವು ಹಿರಿಯ ಪ್ರಾಥಮಿಕ ಶಾಲೆ, ಬೋರುಗುಡ್ಡೆ ಹಿರಿಯ ಪ್ರಾಥಮಿಕ ಶಾಲೆ, ಸ್ವಾಮೀ ವಿವೇಕಾನಂದ ಪ್ರೌಡ ಶಾಲೆ, ಸ್ವಾಮೀ ವಿವೇಕಾನಂದ ಪದವಿ ಪೂರ್ವ
ಮೂಡುಬಿದಿರೆ : ತುಳು ಲಿಪಿ, ಭಾಷೆ ಕಲಿಕೆಗೆ ಪಿಯು ಅಂತದಲ್ಲೂ ಅವಕಾಶ ಕಲ್ಪಿಸಲು ಸತತ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಈ ಹಂತದಲ್ಲೂ ನಾವು ಯಶಸ್ವಿಯಾಗಲು ಸಾಧ್ಯ ಕರ್ನಾಟಕ ಸರ್ಕಾರದ ಪ್ರಯತ್ನದಿಂದಾಗಿ ರಾಜ್ಯ, ರಾಷ್ಟ್ರ ಮನ್ನಣೆ ಲಭಿಸಿದೆ. ತುಳು ಭವನ ನಿರ್ಮಾಣಕ್ಕಾಗಿ ಯಡಿಯೂರಪ್ಪ ಸರ್ಕಾರ 2 ಕೋಟಿ ನೀಡಿದ್ದರೆ ಬೊಮ್ಮಾಯಿ ಸರ್ಕಾರ 4,4 ಕೋಟಿ ಒದಗಿಸಿದ್ದು, ಅಕ್ಟೋಬರ್ 8ರಂದು ಬಹುನಿರೀಕ್ಷೆಯ ಹುಳು ಹುಳುವನ ಉದ್ಘಾಟನೆಗೊಳ್ಳಲಿದೆ’
75 ನೇ ಸ್ವಾತಂತ್ರ್ಯದ ಅಮ್ರತಮಹೋತ್ಸವದ ಶುಭ ದಿನದಂದು ನಮ್ಮ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ಮೂಡಬಿದ್ರಿಯ ಪ್ರಖ್ಯಾತ ವಕೀಲರಾದ ಪ್ರವೀಣ್ ಲೋಬೊ ಹಾಗೂ ವಿಜೇತ ಡೇಸಾ ದಂಪತಿಗಳ ಸುಪುತ್ರಿಯಾದ ಇವಾ ಕ್ರಿಶೆಲ್ ಲೋಬೊ ಇವರ ಪ್ರಥಮ ಪರಮ ಪ್ರಸಾದ ಸ್ವೀಕಾರದ ಸವಿನೆನಪಿಗಾಗಿ ನಮ್ಮ ಸಂಸ್ಥೆಯ ಆಟಿಸಂ ಮಕ್ಕಳಿಗಾಗಿ ಕೊಡುಗೆಯಾಗಿ ನೀಡಿದ ಎಲ್ಲಾ ಸೌಕರ್ಯಗಳನ್ನೊಳಗೊಂಡ ಆಟಿಸಂ ಥೆರಪಿ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ಗಣ್ಯರ
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 19 ಲಕ್ಷ ರೂಪಾಯಿಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನ ನಡೆಸಲಾಗುತ್ತಿದೆ.ಸಂಚಾರಿದಳದ ಉಪ ಅರಣ್ಯ
ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ದ.ಕ.ಜಿ.ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಇನ್ನರ್‍ವೀಲ್ ಕ್ಲಬ್ ಮೂಡುಜದಿರೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ನಡೆಯಿತು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳತ ವೈದ್ಯಾಧಿಕಾರಿ ಡಾ.ಚಿತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ,
ಮೂಡುಬಿದಿರೆ: ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನಗಳನ್ನು ಮತ್ತು ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ವಿದ್ಯಾಗಿರಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ದನ ಸಾಗಾಟ ವನ್ನು ತಡೆದಿದ್ದಾರೆ. ತೋಡಾರಿನ ಅದ್ದಕ್ಕ ಎಂಬವರಿಗೆ ದನಗಳನ್ನು ನೀಡಲು ಕೊಂಡೋಯ್ಯಲಾಗುತ್ತಿತ್ತೆಂದು ಹೇಳಲಾಗಿದೆ.