Home ಕರಾವಳಿ Archive by category ಸುಳ್ಯ (Page 10)

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗಿನ ಉಪಾಹಾರ ಪ್ರಸಾದ ಯೋಜನೆಗೆ ಚಾಲನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗಿನ ಉಪಾಹಾರ ಪ್ರಸಾದದ ವ್ಯವಸ್ಥೆ ಯೋಜನೆ ಇಂದಿನಿಂದ ವಿದ್ಯುಕ್ತವಾಗಿ ಆರಂಭವಾಯಿತು. ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಡಾl ವಿದ್ಯಾಪ್ರಸನ್ನ ಶ್ರೀಗಳು ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, . ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,

ಕಡಬ: ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ

ಕಡಬ: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್ ಮತ್ತು ಸೈಂಟ್ ಜೋಕಿಮ್ಸ್ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿಯಾದ ಸಿ| ಗ್ರೇಟಾ ಮಸ್ಕರೇನಸ್ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿದ ವಂದನೀಯ ಸುನಿಲ್ ಪ್ರವೀಣ್ ಪಿಂಟೋ ರವರಿಗೆ ಪದಗ್ರಹಣ ಕಾರ್ಯಕ್ರಮವು ಸೈಂಟ್ ಜೋಕಿಮ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ್ ಸರ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ಸರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ತಿನ ಧ್ಯೆಯೋದ್ದೇಶಗಳು ಮತ್ತು ಸುಳ್ಯ ತಾಲೂಕು ಪರಿಷತ್ತಿನ ಕಾರ್ಯ ಚಟುವಟಿಕೆಗಳ

ಬೆಳ್ಳಾರೆ : ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮತ್ತು ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಹಕಾರಿ

ಸುಳ್ಯ :ಮಾಜಿ ಸೈನಿಕರ ಸಂಘದಿಂದ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ ಯಂತ್ರ ಹಸ್ತಾಂತರ

ಸುಳ್ಯ ತಾಲೂಕಿನ ಮಾಜಿ ಸೈನಿಕರ ಸಂಘ(Ex Servicemen Association Sullia) ದ ವತಿಯಿಂದ ಪಶು ಸಂಗೋಪನ ಇಲಾಖೆಯ ಸುಳ್ಯ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ (Electric Autoclave) ಯಂತ್ರವನ್ನು 2024 25 ನೇ ಸಾಲಿನ ಕೊಡುಗೆಯಾಗಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ನಿತಿನ್ ಪ್ರಭು ಕೆ ಇವರಿಗೆ ಹಸ್ತಾಂತರಿಸಿದರು. ಈ ಉಪಕರಣವನ್ನು ದಿನನಿತ್ಯ ನಡೆಯುವ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಶುದ್ಧೀಕರಣ ಮತ್ತು ನಂಜು ಮುಕ್ತಗೊಳಿಸುವುದಕ್ಕಾಗಿ

ಕಡಬ :ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ

ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ವತಿಯಿಂದ ಇಂದು ಒಕ್ಕಲಿಗ ಗೌಡ ಸಮುದಾಯ ಭವನ ಹೊಸಮಠ ಇಲ್ಲಿ, ಕಡಬ ತಾಲೂಕಿನ ಎಲ್ಲಾ ಸಮುದಾಯದ ೯ನೇ, ೧೦ನೇ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ, ಉದ್ಯೋಗವಕಾಶಗಳು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃಧ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಾಗಾರವು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ

ಬೆಳ್ಳಾರೆ : ಮೇ.20ರಂದು ’ಸುಸ್ಥಿರ ಕೃಷಿಗಾಗಿ’ ರೈತ ಸಂಗೋಷ್ಟಿ ಕಾರ್ಯಕ್ರಮ

ಬೆಳ್ಳಾರೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ’ಸುಸ್ಥಿರ ಕೃಷಿಗಾಗಿ’ ರೈತ ಸಂಗೋಷ್ಟಿ ಎಂಬ ಕಾರ್ಯಕ್ರಮವು ಮೇ.20ರಂದು ಬೆಳಿಗ್ಗೆ 9.30ಕ್ಕೆ ಬೆಳ್ಳಾರೆಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಂದೋರ್‌ನ ಶ್ರೀ ಸಿದ್ಧಿ ಅಗ್ರಿ ಕೋ ಪ್ರೈವೇಟ್ ಲಿಮಿಟೆಡ್‌ನ ಪೆರುವೋಡಿ ನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ.ಡಿ

ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50ನೇ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು, ಈ ವರ್ಷದ ‘ಆರ್ಯಭಟ’ ಪ್ರಶಸ್ತಿಯನ್ನು ಘೋಷಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ವರ್ಷ ಆರ್ಯಭಟ ಸುವರ್ಣ ಸಂಭ್ರಮ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದರಾಗಿ, ನಿರ್ದೇಶಕರಾಗಿ, ವಸ್ತ್ರ ವಿನ್ಯಾಸ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ರಂಗಸೇವೆ ಸಲ್ಲಿಸಿತ್ತಾ ಬಂದಿರುವ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ

ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಇಂದು ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ನಾಟಕೀಯ ತಿರುವು ಪಡೆದು ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಕಾಂಗ್ರೆಸ್ ಜಿಲ್ಲಾ