ಸುಳ್ಯ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ.ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪೂಜಾಶ್ರೀ ವಿತೇಶ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಜೊತೆ
ಸುಳ್ಯ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ನಂದನ ದಿನ” ಅಗಸ್ಟ್ 30ನೇ ಶನಿವಾರದಂದು ನಡೆಯಿತು. ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಶೈಕ್ಷಣಿಕ ಸಾಧನೆ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಸುಳ್ಯ: ದೂರವಾಣಿ ಸಂಪರ್ಕವಿಲ್ಲದ ಗ್ರಾಮೀಣ ಭಾಗದಿಂದ ಸುಮಾರು 10 ಕಿಲೋಮೀಟರ್ ದೂರದ ಹಳ್ಳಿಯ ಪ್ರತಿಭೆ ಇಂದು ತಾಲೂಕಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ. ಹೌದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ದಿ.ನಾಗಪ್ಪ ಎಂ ಎ ಹಾಗೂ ಜಾನಕಿ ದಂಪತಿಗಳ ಹಿರಿಯ ಪುತ್ರಿ ಶುಶ್ಮಿತ ಇದೀಗ ಎಸ್ ಎಸ್ ಸಿ ಜಿ ಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹೆಮ್ಮೆಯಾಗಿದ್ದಾಳೆ. ಈಕೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಲಾಗಿ
ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ವತಿಯಿಂದ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ.22ರಿಂದ ಆರಂಭಗೊಂಡ ಸಾರಿಗಳ ಪ್ರದರ್ಶನ ಎರಡು ದಿನ ಮುಗಿದಿದ್ದು ಇನ್ನು ಒಂದು ದಿನ ಮಾತ್ರ ಲಭ್ಯವಿದೆ.ಆ.24 ರಂದು ಭಾನುವಾರ ರಾತ್ರಿ 8 ಗಂಟೆಯ ತನಕ ಪ್ರದರ್ಶನ ಮತ್ತು
ಸುಳ್ಯ:ಸುಳ್ಯದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಖರೀದಿ ಹಬ್ಬ’ ಗ್ರಾಹಕರ ಮನಮೆಚ್ಚಿದ ಚಿನ್ನಾಭರಣ ಮಳಿಗೆಯಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಹೆಚ್ಚಿನ ಗ್ರಾಹಕರ ಅಪೇಕ್ಷೆಯ ಮೇರೆಗೆ ‘ಕರಿಮಣಿ ಖರೀದಿ’ ಹಬ್ಬವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ.ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರುಜ್ಯುವೆಲ್ಸ್‌ಗೆ ಭೇಟಿ ನೀಡಿ ಕರಿಮಣಿಯನ್ನು ಖರೀದಿಸಿ
ಸುಳ್ಯ: ಸುಳ್ಯ ನ್ಯಾಯಾಲಯದಲ್ಲಿ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನ ಜುಲೈಯಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 7ರ ವರೆಗೆ ಈ ಅಭಿಯಾನ ನಡೆಯಲಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ಮತ್ತು ಸೇವಾ ಪ್ರಕರಣಗಳು,ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕರ ವ್ಯಾಜ್ಯ
ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡುಗಳಿಗೆ ನಾಳೆ (ಆ.17) ಚುನಾವಣೆ ನಡೆಯಲಿದ್ದು, ಇದರ ಅಂಗವಾಗಿ ಆ.16ರಂದು ತಾಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು ಮಸ್ಟರಿಂಗ್ ಕಾರ್ಯ ನಡೆಯಿತು. ಪ್ರತಿ ಮತಗಟ್ಟೆಯಲ್ಲಿ ಪಿ.ಆರ್.ಒ. ಜೊತೆಗೆ ಮೂವರು ಸಿಬ್ಬಂದಿಗಳು ಹಾಗೂ ಓರ್ವ ಡಿ-ಗ್ರೂಪ್ ನೌಕರ ನಿಯೋಜನೆಯಾಗಿದ್ದು, ಮತಗಟ್ಟೆ ಸಿಬ್ಬಂದಿಗಳು ತಾಲೂಕು ಆಡಳಿತ ಸೌಧದಲ್ಲಿ ಹಾಜರಾಗಿ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಸಂಜೆ ವೇಳೆಗೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿಂತಿಕಲ್ಲು ವಲಯದ ಕುಕ್ಕಯ್ಯಕೇಡಿ ಎಂಬಲ್ಲಿ ವಾಸವಾಗಿರುವ ತೀರ ಬಡತನದಲ್ಲಿರುವ ಸದಸ್ಯರಾದ ಬಾಬು ರೈ ಮತ್ತು ದೈಯಕ್ಕು ದಂಪತಿಗಳಿಗೆ ಶ್ರೀ ಕ್ಷೇತ್ರದಿಂದ ತಿಂಗಳಿಗೆ 2000/- ಮಾಸಾಶನ ಮೊತ್ತ ಮಂಜೂರಾಗಿದ್ದು, ಇವರಿಗೆ ಮಂಜೂರಾತಿ ಪತ್ರವನ್ನು ಊರಿನ ಗಣ್ಯರಾದ ಶ್ರೀಯುತ ಸುಧೀರ್ ಕುಮಾರ್ ಶೆಟ್ಟಿ ಕುಕ್ಕಯ್ಯಕೇಡಿ ಇವರು ವಿತರಿಸಿದರು.ಈ
ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ 2025 -26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ಕೆವಿಜಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಅಧ್ಯಕ್ಷತೆ ವಹಿಸಿ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಲೆಕ್ಕ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ ಉಪಸ್ಥಿತರಿದ್ದು
ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೆಳ್ಳಾರೆ ಗ್ರಾಮದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಾಳೆ(ಆ.15) ಪೂ. 08.30ಕ್ಕೆ ನಡೆಯಲಿದೆ. ಗ್ರಾಮಸ್ಥರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ಳಾರೆ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ. 1837ರಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟಗಾರರು ಬ್ರಿಟೀಷರ ಖಜಾನೆಯಾಗಿದ್ದ




























