ಸುಳ್ಯ:ಪ್ರಾಕೃತಿಕ ವಿಕೋಪದಲ್ಲಿ ನಷ್ಟ ಆದವರಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 76.84 ಲಕ್ಷ ರೂ ಪರಿಹಾರ ಬಿಡುಗಡೆಯಾಗಿದೆ. ಪ್ರಾಕೃತಿಕ ವಿಕೋಪದ ಹೆಸರಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸುಳ್ಯ: ಸುಳ್ಯದ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಸುಳ್ಯ ತಾಲೂಕು ದಸರ ಉತ್ಸವ ಸಮಿತಿಯ ಆಶ್ರಯದಲ್ಲಿ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಅ. 2ರಿಂದ ಅ. 10ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ
ಕಡಬ,: ಕಾಂಗ್ರೆಸ್ ಪಕ್ಷದ ಬಿಳಿನೆಲೆ ವಲಯದ ಮಾಜಿ ಅಧ್ಯಕ್ಷ, ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್ ಗೋಳ್ಯಾಡಿ ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪಕ್ಷ ವಿರೋದಿ ಚಟುವಟಿಕೆಯ ನಡೆಸಿದ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಬಿಳಿನೆಲೆ ಅವರು ತಿಳಿಸಿದ್ದಾರೆ. ಅವರು ಕಡಬ ಬ್ಲಾಕ್ ಕಾಂಗ್ರೆಸ್
ಕುಕ್ಕೆ ದೇಗುಲ ಪದ್ಧತಿ ವಿರುದ್ಧ ಆಕ್ಷೇಪಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲಅಂಗಿ, ಬನಿಯನ್ ತೆಗೆಯುವ ಪದ್ಧತಿಗೆ ವಿರೋಧಪರಿಸರ ಸಂರಕ್ಷಣಾ ಒಕ್ಕೂಟದಿಂದ ದೂರುಧಾರ್ಮಿಕ ದತ್ತಿ ಇಲಾಖೆಗೆ ಒಕ್ಕೂಟದಿಂದ ದೂರುಅಂಗಿ-ಬನಿಯನ್ ಕಳಚಿಟ್ಟು ದೇವರ ದರ್ಶನದೇವರ ದರ್ಶನ ಪಡೆಯುವ ಪದ್ಧರಿ ಸರಿಯಲ್ಲಹಿಂದೂ ಸಂಪ್ರದಾಯದಲ್ಲಿ ಈ ಪದ್ದತಿ ಇಲ್ಲಚರ್ಮ ರೋಗವಿದ್ದವರಿಂದ ರೋಗ ಹರಡುವ ಸಾಧ್ಯತೆಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ
ಸುಳ್ಯ ತಾಲೂಕಿನ ಜಯನಗರ ಮಿಲಿಟರಿ ಜಾಗಕ್ಕೆ ಸಂಬಂಧಿಸಿದ ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಸ್ಥಳೀಯರೊಬ್ಬರು ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರವುದನ್ನು ಖಂಡಿಸಿ, ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.ನೀ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ
ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರು ಮಯವಾಗಿರುವ ಈ ರಸ್ತೆ ಶೇಣಿಯಿಂದ ಹೊಸಮಜಲು ಎಂಬಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಅಮರ ಪಡ್ನೂರು ಗ್ರಾಮದ ಅತೀ ಪುರಾತನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೆ 25 ಕ್ಕಿಂತ ಹೆಚ್ಚು ಮನೆಯವರು ಈ ರಸ್ತೆಯನ್ನೆ ಅವಲಂಬಸಿರುತ್ತಾರೆ. 1954 ನೇ ಇಸವಿಯಲ್ಲಿ ಪುನರ್ಜಿತ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು
ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ : ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಇಲ್ಲಿ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮ "ಬ್ಯಾಗ್ ಆಫ್ ಜಾಯ್" ಜರಗಿತು. ಸುಮಾರು 100 ವರ್ಷಗಳ ಅನುಭವ ಹೊಂದಿರುವ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಮುತ್ತೂಟ್ ಮಿನಿ ಕೂಡ ಒಂದು.
ಸುಳ್ಯದ ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ಮದ್ರಸದಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿಯಾಗಿ ಬಾಲಕಿ ಮೃತಪಟ್ಟ ಘಟನೆ ವರದಿಯಾಗಿದೆ. ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (7 ವರ್ಷ) ಇಂದು ಬೆಳಿಗ್ಗೆ 8.45ರ ಸುಮಾರಿಗೆ ಅರಂಬೂರು ಮದ್ರಸಾದಿಂದ ಹಿಂತಿರುಗಿ ಪಾಲಡ್ಕದಲ್ಲಿ ಮನೆ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತದ್ದ ಬೈಕ್ ಡಿಕ್ಕಿ ಹೊಡೆಯಿತು. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ
ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಂದಾಳು ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು ಮತ್ತು ಸುಳ್ಯದಲ್ಲಿ 32 ಕಡೆ ಮನೆ, ಕಟ್ಟಡಗಳಿಗೆ ದಾಳಿ ನಡೆಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಎನ್.ಐ.ಎ.ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡಿದ್ದಾರೆ.
ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ನಿರಂತರ ಎರಡನೇ ದಿನವೂ ರಾತ್ರಿ ವೇಳೆ ಮಹಾಮಳೆ ಮುಂದುವರಿದಿತ್ತು. ರಾತ್ರಿ ಸುರಿದ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ರಾತ್ರೋರಾತ್ರಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಕೊಯನಾಡಿನಲ್ಲಿ ಕೂಡ ನಿರಂತರ ಮಳೆಯಿಂದ




























