Home Archive by category ಕರಾವಳಿ (Page 49)

ಬಿಪಿಎಲ್ ಕುಟುಂಬಗಳಿಗೆ ಡಿಸೆಂಬರ್‌ನಲ್ಲಿ 17.68 ಕೋಟಿ ರೂ. ನಗದು ಜಮಾ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಕಾರದಿಂದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತೀ ತಿಂಗಳು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ

ಪುತ್ತೂರು: ಫೆ.18ರಂದು ದ್ವಾರಕೋತ್ಸವ

ಪುತ್ತೂರು: ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ವತಿಯಿಂದ ದ್ವಾರಕೋತ್ಸವ-2024 ಎಂಬ ವಿಶಿಷ್ಟ ಕಾರ್ಯಕ್ರಮ ಫೆ.18ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶ್ರೀಪತಿ ಕಲ್ಲೂರಾಯ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ

ಮಂಗಳೂರು : ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ವೈಷ್ಣವಿಗೆ ಸನ್ಮಾನ

ಕುಲಶೇಖರದ ಕಟ್ಟೆ ಫ್ರೆಂಡ್ಸ್ ವತಿಯಿಂದ 26ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಊರ ಹತ್ತು ಸಮಸ್ತರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ವೀರನಾರಾಯಣ ಅಶ್ವಥ ಕಟ್ಟೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕುಮಾರಿ ವೈಷ್ಣವಿ ಯವರಿಗೆ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ

ಅಕ್ಷತೆ ಅಕ್ಕಿ ಪಡಿತರ ಅಕ್ಕಿ ಕಾಳಗ

ಅಕ್ಷತೆಗೆ ಮತ ಹಾಕುತ್ತೀರಾ, ಅನ್ನದ ಅಕ್ಕಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದ ಮಾಗಡಿ ಶಾಸಕ ಬಾಲಕೃಷ್ಣ ಅವರು ಅಕ್ಷತೆಯ ಅಕ್ಕಿಗೆ ಮತ ಹಾಕುವುದಾದರೆ ನಿಮಗೆ ಅನ್ನದ ಅಕ್ಕಿ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ವಾರಣಾಸಿ ಜ್ಞಾನವಾಪಿ ಮಸೀದಿಯ ಬೀಗ ಹಾಕಿದ ಭಾಗದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಈಗ ಕೋರ್ಟು ಆದೇಶ ನೀಡಿದೆ. ಲೋಕ ಸಭೆ ಚುನಾವಣೆಗೆ ಮೊದಲು ತಾತ್ಕಾಲಿಕ ಆಯವ್ಯಯ ಆಗುವುದಕ್ಕೆ ಮೊದಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್

ಭ್ರಷ್ಟ ಭಾರತ ಸ್ಪಷ್ಟ

2023ರ ಲೆಕ್ಕಾಚಾರದ ಮೇಲೆ 2024ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಹೊರಬಿದ್ದಿದೆ. ಭಾರತವು 40 ಅಂಕದೊಡನೆ 93ನೇ ಸ್ಥಾನದಲ್ಲಿ ಇದೆ. ಕಳೆದ ವರುಷ 39 ಅಂಕದೊಡನೆ 85ನೇ ಸ್ಥಾನದಲ್ಲಿ ಇದ್ದ ಭಾರತ ಮತ್ತಷ್ಟು ಭ್ರಷ್ಟ ಕೂಪಕ್ಕೆ ಜಾರಿದೆ. ಪಾರದರ್ಶಕ ಅಂತರರಾಷ್ಟ್ರೀಯ ಸಂಸ್ಥೆ ಅರ್ಥಾತ್ ಟ್ರಾನ್ಸ್‍ಫರೆನ್ಸಿ ಇಂಟರ್‍ನ್ಯಾಶನಲ್ ಸಂಸ್ಥೆ ಈ ಸೂಚ್ಯಂಕ ಪಟ್ಟಿ ಹೊರಗಿಟ್ಟಿದೆ. ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಭ್ರಮಾ ವಲಯ ತುಂಬ ವಿಸ್ತಾರವಾಗಿದೆ ಎಂದೂ ವರದಿ ಹೇಳಿದೆ.

ಹೆಮ್ಮುಂಜೆ ಸ.ಹಿ.ಪ್ರಾ.ಶಾಲೆಗೆ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿ ಪರಿಕರಗಳ ಕೊಡುಗೆ

ಬೈಂದೂರು: ಹೆಮ್ಮುಂಜೆ ಸ, ಹಿ, ಪ್ರಾ, ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಪರಿಕರಗಳನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ನೀಡಲಾಯಿತು. ವಿದ್ಯಾರ್ಥಿ ಪರಿಕರಗಳನ್ನು ನೀಡಿ ಮಾತನಾಡಿದ ಅಧ್ಯಕ್ಷರಾದ ರಾಘವೇಂದ್ರ ಸಿ ನಾವುಡರು ಶಾಲೆಗೆ ಇನ್ನೂ ಹೆಚ್ಚಿನ ಸವಲತ್ತನ್ನು ಒದಗಿಸುವ ಮೂಲಕ ಮಕ್ಕಳ ಬರುವಿಕೆ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸುತ್ತೇನೆ ಎಂದರು. ಶಾಲಾ ಸ್ಥಾಪಕ ಕುಟುಂಬದ ಸದಸ್ಯರು, ಹಿರಿಯ ವಿದ್ಯಾರ್ಥಿಯು ಹಾಗೂ ಅತ್ಯುತ್ತಮ ಜಿಲ್ಲಾ ಶಿಕ್ಷಕ

ಕುಂದಾಪುರ: ಸಮಾನ ಮನಸ್ಕ ಸಂಘಟನೆಗಳಿಂದ ಮಾನವ ಸರಪಳಿ ಸಮಾರೋಪ

ಕುಂದಾಪುರ: ಎಲ್ಲಿಯವರೆಗೆ ಬ್ರಿಟನ್ ದೇಶದ ಪಾರ್ಲಿಮೆಂಟ್ ಕಟ್ಟಡದ ಮಧ್ಯೆ ಗಾಂಧಿ ಪ್ರತಿಮೆ ಇರುತ್ತದೆಯೋ ಅಲ್ಲಿಯ ತನಕ ಗಾಂಧೀಜಿಯವರ ಚಿಂತನೆಗಳಿಗೆ ಸೋಲಿಲ್ಲ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ದಿನೇಶ್ ಹೆಗ್ಡೆ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿಜೀಯವರ ಹುತಾತ್ಮ ದಿನದ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳಿಂದ, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಅವರ

ಸೌತಡ್ಕ : ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ‘ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ’

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ, ತಾಯಂದಿರ ಹಾಲುಣಿಸುವ ಕೊಠಡಿಯ ಲೋಕಾರ್ಪಣೆ ಹಾಗೂ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ ನಡೆಯಿತು.ರಾಜ್ಯ ಧಾರ್ಮಿಕ ಇಲಾಖೆಯ ವತಿಯಿಂದ ನಿರ್ಮಿಸಲಾದ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನು ರಾಜ್ಯ

ಕಲ್ಲಡ್ಕ : ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ

ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅವಧೂತ ವಿನಯ ಗುರೂಜಿ, ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಬೈಲೂರು : ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ವರ್ಧಂತಿ ಮಹೋತ್ಸವ

ಕಾರ್ಕಳ ತಾಲೂಕಿನ ಬೈಲೂರು ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಅಧ್ಯಕ್ಷರಾದ ಸುರೇಂದ್ರ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ತುಳು ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರ್,ಮಹಾಮಂಡಲದ ಕೋಶಾಧಿಕಾರಿ ಗಣೇಶ್ ಪೂಜಾರಿ,ಸತೀಶ್ ಪೂಜಾರಿ ಹಾಗೂ ಬೈಲೂರಿನ ಸಮಾಜ ಬಂದವರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಮಾರ್ಚ್ 10ರಂದು ಮುಲ್ಕಿಯಲ್ಲಿ