Home Archive by category ರಾಜ್ಯ (Page 14)

ಮೋದಿ ಪ್ರಮಾಣ ವಚನಕ್ಕೆ ಕ್ಷಣಗಣನೆ: ಗಾಂಧಿ, ವಾಜಪೇಯಿ ಸ್ಮಾರಕಗಳಿಗೆ ಭೇಟಿ, ನಮನ

ಮೂರನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ರಾಜ್ ಘಾಟ್ ಗೆ ತೆರಳಿದ ಅವರು ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿ, ನಂತರ ದಿಲ್ಲಿಯಲ್ಲಿನ ಸದೈವ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಮಿಸಿದರು. ತದನಂತರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ

ಹಲವು ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ

ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ,  ಗ್ರಾಮ ಪಂಚಾಯತ್ ಪಡುಪಣಂಬೂರು, ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಜಂಟಿ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ, ವಿಶ್ವ ಪರಿಸರ ದಿನಾಚರಣೆಯನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.ಸಂಸ್ಥೆಯ

ಪರಿಶಿಷ್ಟ ಜಾತಿ ಮುಂಡಾಳ ಸಮಾಜದ ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸದಾಶಿವ ಕುಂದರ್ ಆಯ್ಕೆ

ಪರಿಶಿಷ್ಟ ಜಾತಿ ಮುಂಡಾಳ ಸಮಾಜ ಬಾಂಧವರ ಸಾಮಾಜಿಕ,ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರಧಾರೆಗಳಿಗೆ ಸಹಕಾರಿಯಾಗುವಂತೆ ಆಸುಪಾಸಿನ ಗ್ರಾಮಗಳ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ನೂತನ ಕಟ್ಟಡ ಸಮಿತಿಯನ್ನು ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಅಧ್ಯಕ್ಷರಾದ ಶ್ರೀ ಸದಾಶಿವ ಕುಂದರ್ ರವರ ಅಧ್ಯಕ್ಷತೆಯಲ್ಲಿ  ನೆರವೇರಿಸಲಾಯಿತು.ಕಟ್ಟಡ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಸದಾಶಿವ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀ ಶ್ರೀಧರ ಕೆಮ್ರಾಲ್,

ಹೋರಾಟ ಸಮಿತಿ ಸದಸ್ಯರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ

ಮಂಜೇಶ್ವರ: ಅಂಡರ್‌ಪಾಸ್ ನಿರ್ಮಿಸಬೇಕೆಂಬ ಜನರ ಬೇಡಿಕೆ ಈಡೇರದಿರುವುದನ್ನು ವಿರೋಧಿಸಿ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 100ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಸದಸ್ಯರು ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನ್ಯಾಯವಾದ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾಗಿ

ಐವರು ಸಂಸದರಿಗೆ ಮೂವರು ಮಂತ್ರಿ ಎಂದ ಪಾಸ್ವಾನ್

ಎನ್‌ಡಿಎ ನಾಯಕರಾಗಿ ಮೋದಿಯವರು ಆಯ್ಕೆಯಾಗಿದ್ದು ಮೂರನೆಯ ಬಾರಿ ಪ್ರಧಾನಿಯಾಗಲಿದ್ದಾರೆ. ಆದರೆ ಮಿತ್ರ ಪಕ್ಷಗಳ ಬೇಡಿಕೆ ನಡುವೆ ಮುದುರಿದ್ದಾರೆ. ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ. 16 ಸಂಸದರ ತೆಲುಗು ದೇಶಂ ಸ್ಪೀಕರ್ ಹುದ್ದೆ ಮತ್ತು ನಾಲ್ಕು ಪ್ರಮುಖ ಮಂತ್ರಿ ಖಾತೆಗಳಿಗೆ ಬೇಡಿಕೆ ಇಟ್ಟಿದೆ. ನಟ ಪವನ್ ಕಲ್ಯಾಣ್ ಕೂಡ ಒಂದು ಮಂತ್ರಿ ಸ್ಥಾನ ಕೇಳಿದ್ದಾರೆ. 12 ಸಂಸದರ ಜೆಡಿಯು ನಾಲ್ಕು ಪ್ರಮುಖ ಮಂತ್ರಿಗಿರಿ ಕೇಳಿದೆ. ಅಲ್ಲದೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮೊದಲು

ಇಳಿದ ಮಹಿಳಾ ಸಂಸದೆಯರ ಸಂಖ್ಯೆ

2019ರ 17ನೇ ಲೋಕಸಭೆಯಲ್ಲಿ ಅತಿ ಹೆಚ್ಚು 78 ಮಹಿಳಾ ಸಂಸದೆಯರು ಇದ್ದರು. ಈ ಬಾರಿ ಸಂಸದೆಯರಾಗಿ ಗೆದ್ದವರ ಸಂಖ್ಯೆಯು 73ಕ್ಕೆ ಇಳಿದಿದೆ.ಶೇಕಡಾವಾರು 14 ಇದ್ದುದು ಈ ಸಲ 13 ಶೇಕಡಾಕ್ಕೆ ಇಳಿಕೆಯಾಗಿದೆ. ಒಟ್ಟು 797 ಮಂದಿ ಮಹಿಳೆಯರು ಸ್ಪರ್ಧೆಯಲ್ಲಿ ಇದ್ದರು; ಗೆದ್ದವರು 73 ಮಹಿಳೆಯರು. 2014ರಲ್ಲಿ ಬರೇ 64 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು. ಬಿಜೆಪಿಯಿಂದ 69 ಮಂದಿ ಸ್ಪರ್ಧಿಸಿ 30 ಮಂದಿ ಮತ್ತು ಕಾಂಗ್ರೆಸ್ಸಿನಿಂದ 41 ಸ್ಪರ್ಧಿಸಿ 14 ಮಂದಿ ಮಹಿಳೆಯರು

ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯದ ಕಿಟ್ ವಿತರಣೆ

ಬಂಟ್ವಾಳ: ನಿಕ್ಷಯ್ ಮಿತ್ರ ಕಾರ್ಯಕ್ರಮದ ಮೂಲಕ ಹಂತ ಹಂತವಾಗಿ ಕ್ಷಯ ರೋಗಿಗಳ ಸಂಖ್ಯೆ ಕಡಿಮೆಯಾಗುವುದರ ಜತೆಗೆ ರೋಗಿಗಳು ಸಂಪೂರ್ಣವಾಗಿ ರೋಗಮುಕ್ತರಾಗಿ ಮತ್ತೆ ಈ ಕಾರ್ಯಕ್ರಮವನ್ನು ಆಯೋಜಿಸುವ ಪರಿಸ್ಥಿತಿ ನಿರ್ಮಾಣವಾಗ ಬಾರದು ಎಂದು ಬಂಟ್ವಾಳದ ಸ್ವಣೋದ್ಯಮಿ, ವಿಎನ್‌ಆರ್ ಗೋಲ್ಡ್ ಮಾಲಕ ನಾಗೇಂದ್ರ ವಿ. ಬಾಳಿಗ ಹೇಳಿದರು.ಕ್ಷಯ ಮುಕ್ತ ಭಾರತ ನಿರ್ಮಾಣದ ಅಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ

ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ

ಚಾಲನೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ಶಾಲಾ ಬಸ್ಸೊಂದರ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪೆರಂಪಳ್ಳಿ ಎಂಬಲ್ಲಿ ಸಂಭವಿಸಿದೆ. ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು. ಪೆರಪಂಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಮಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತೆನ್ನಲಾಗಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆಯ ಬದಿಯ

ಮುಂಬಯಿ ಟ್ರಾಫಿಕ್, ದಿಲ್ಲಿ ಮಾಲಿನ್ಯ ಕಷ್ಟ ಕಷ್ಟ:ಉಸಿರಾಡಲಾಗದೆ ರಸ್ತೆಯಲ್ಲಿ ಸಿಕ್ಕು ಒದ್ದಾಡುವ ಸ್ಥಿತಿ

ಭಾರತದ ಆರ್ಥಿಕ ರಾಜಧಾನಿ ಎನ್ನಲಾದ ಮುಂಬಯಿ ಜಗತ್ತಿನ ಅತಿ ಟ್ರಾಫಿಕ್ ಒತ್ತಡದ ನಗರವಾಗಿ ಮೊದಲ ಸ್ಥಾನದಲ್ಲಿದೆ. ಆ ಕಾರಣಕ್ಕೆ ಜನರು, ಕೆಲಸದ ಮಾನಸಿಕ ಒತ್ತಡಕ್ಕೆ ಒಳಗಾಗುವುದಾಗಿಯೂ ಹೇಳಲಾಗಿದೆ. ಅತಿ ಟ್ರಾಫಿಕ್‌ನ ಎಲ್ಲ ನಗರಗಳವರು ಹೆಚ್ಚು ಕಲುಷಿತ ಗಾಳಿ ಸೇವಿಸಬೇಕಾದ ಸ್ಥಿತಿ ಎದುರಿಸುತ್ತಿರುವುದಾಗಿ ಹೇಳಲಾಗಿದೆ.ಈ ನಿಟ್ಟಿನಲ್ಲಿ ನೈಜೀರಿಯಾದ ಲಾಗೋಸ್, ಪಿಲಿಪ್ಪೀನ್ಸ್ ರಾಜಧಾನಿ ಮನಿಲಾ, ಭಾರತದ ರಾಜಧಾನಿ ದಿಲ್ಲಿ, ಇರಾಕ್ ರಾಜಧಾನಿ ಬಾಗ್ದಾದ್, ಅಫಘಾನಿಸ್ತಾನದ

ದೇಶಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕ ಹೆಚ್ಚಳ

ದೇಶಾದ್ಯಂತ ಹೆದ್ದಾರಿಗಳನ್ನು ಬಳಕೆ ಮಾಡುವ ವಾಹನ ಚಾಲಕರು ಸೋಮವಾರದಿಂದ ಟೋಲ್‌ಗಳಲ್ಲಿ ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ. ದೇಶಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕವನ್ನು ಸರಾಸರಿ ಶೇ. 5ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ. ಸಾಮಾನ್ಯವಾಗಿ ಟೋಲ್ ಶುಲ್ಕ ಪ್ರತಿವರ್ಷ ಹೆಚ್ಚಾಗುತ್ತದೆ. ಇದರಂತೆ ಎಪ್ರಿಲ್ 1 ರಿಂದ ಪರಿಷ್ಕ್ರತ ಶುಲ್ಕ ಜಾರಿಯಾಗಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ