Home Archive by category ರಾಜ್ಯ (Page 24)

ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಇಂದು ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಧಾನಿಯವರಿಗೆ ವಿವರಿಸಿದ ಮುಖ್ಯಮಂತ್ರಿಗಳು ರೂ. 18,177.44 ಕೋಟಿ ರೂಪಾಯಿ ತಕ್ಷಣದ ಪರಿಹಾರಕ್ಕೆ ಮನವಿ ಮಾಡಿದರು. ಇನ್ಪುಟ್ ಸಬ್ಸಿಡಿ ರೂ. 4,663.12 ಕೋಟಿ ತುರ್ತು ಪರಿಹಾರ ರೂ. 12,577.86 ಕೋಟಿ,

ಸಂಸದರ ಅಮಾನತು 141ಕ್ಕೆ ಏರಿಕೆ

ಸಂಸತ್ ಭದ್ರತಾ ಲೋಪದ ಬಗೆಗೆ ಗೃಹ ಮಂತ್ರಿ ಅಮಿತ್ ಶಾರಿಂದ ವಿವರಣೆ ಬಯಸುತ್ತಿರುವ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸದ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ 49 ಲೋಕ ಸಭಾ ಸದಸ್ಯರನ್ನು ಅಮಾನತು ಮಾಡಿದರು. ಇದರಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 141ಕ್ಕೆ ಏರಿದೆ. ಉಕ್ಕಿನ ಮನುಷ್ಯನೋ ಸೊಕ್ಕಿನ ಮನುಷ್ಯನೋ ಎಂದು ಅಮಾನತುಗೊಂಡವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳನ್ನು ಟೀಕಿಸಿದ್ದಾಗಿಯೂ ಹೇಳಲಾಗಿದೆ. ಸಂಸತ್ತಿನ ಹೊರಗೆ ಅಮಾನತುಗೊಂಡ ಸರ್ವ

ಅಳ್ನಾವರ ದಾಂಡೇಲಿ ರೈಲು ಓಡುವುದು ಯಾವಾಗ?

ದಟ್ಟ ಕಾಡಿನ ನಡುವಿನ ಬ್ರಿಟಿಷರ ಕಾಲದ ಉತ್ತರ ಕನ್ನಡ ಜಿಲ್ಲೆಯ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ದಾಂಡೇಲಿ ಎಂದು ಬದಲಿಸಲಾಗಿದೆ. ಬ್ರಿಟಿಷರು ಮರದ ದಿಮ್ಮಿಗಳನ್ನು ಸಾಗಿಸಲು ಈ ರೈಲು ಹಾದಿ ನಿರ್ಮಿಸಿದ್ದರು. ಮೀಟರ್ ಗೇಜ್, ಬ್ರಾಡ್ ಗೇಜ್ ಕಂಡರೂ ಇದರಲ್ಲಿ ಜನ ರೈಲು ಓಡಾಟ ಇಲ್ಲ. ಕೆಲ ಕಾಲ ಮಾತ್ರ ಅಳ್ನಾವರ ಅಂಬೇವಾಡಿ ನಡುವೆ ಒಂದು ಪ್ಯಾಸೆಂಜರ್ ರೈಲು ಓಡಿದ್ದಿದೆ. ಮಾಜೀ ಮಂತ್ರಿ ಆರ್. ವಿ. ದೇಶಪಾಂಡೆಯವರು ಈ ನಿಲ್ದಾಣದ ಹೆಸರನ್ನು ಅಂಬೇವಾಡಿಯಿಂದ

ನಾಗ್ಪುರ ಪಂಚಾಯತ್ ಸಮಿತಿ ಚುನಾವಣೆ : ಬಿಜೆಪಿಗೆ ಭಾರೀ ಮುಖಭಂಗ

ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ

ಸಂಸತ್ ದಾಳಿಯ ಆರೋಪಿ ಮನೋರಂಜನ್ ಓದುವ ಪುಸ್ತಕಗಳ ಕ್ರಾಂತಿ

ಸಂಸತ್ ದಾಳಿಯ ಆರೋಪಿ ಮನೋರಂಜನ್ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರ ಪುಸ್ತಕ ಹೆಚ್ಚು ಓದುತ್ತಿದ್ದ ಎಂದೂ, ಮನೆಯಲ್ಲಿ ಸಾಕಷ್ಟು ಕ್ರಾಂತಿಕಾರಿಗಳ ಎಡ ಬಲ ವಾದದ ಪುಸ್ತಕಗಳು ದೊರೆತಿರುವುದಾಗಿ ವರದಿಯಾಗಿದೆ. ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ದೇವರಾಜೇಗೌಡ, ಶೈಲಜಾ ದಂಪತಿಯ ಮಗ ಮನೋರಂಜನ್. ವಿಕ್ರಾಂತ್ ಉದ್ಯೋಗದ ಬಳಿಕ ದೇವರಾಜೇಗೌಡರು ಕೃಷಿ ಮಾಡುತ್ತಿದ್ದರು. ಮೈಸೂರಿನ ವಿಜಯನಗರದಲ್ಲಿ ಸ್ವಂತ ಕಟ್ಟಿದ ಮನೆಯಲ್ಲಿ ವಾಸವಿದ್ದರು.

ಅಟ್ಟಣಿಗೆಯಿಂದ ಸಂಸತ್ತಿನ ಒಳಕ್ಕೆ ದಾಳಿ : ಒಟ್ಟು ಆರು ಮಂದಿಯ ಬಣ್ಣದ ಹೊಗೆಯ ಮುಸುಕು

ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು

ರಾಜಭವನಕ್ಕೆ ಬಾಂಬ್ ಕರೆ: ಪರಿಶೀಲಿಸಿ ಸುಳ್ಳು ಎಂದ ಪೋಲೀಸರು

ದೊಮ್ಮಲೂರು ಎನ್‍ಐಎ ಕೊಠಡಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವ ರಾಜ ಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿರುವುದು ಹುಸಿ ಕರೆ ಎಂದು ಪೋಲೀಸರು ತಿಳಿಸಿದರು.ಕರೆಯ ಸತ್ಯಾಸತ್ಯತೆ ಅರಿಯಲು ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ರಾಜ ಭವನಕ್ಕೆ ಧಾವಿಸಿದರು. ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ; ಬಕೆಟ್ ಜನತಾ ಪಾರ್ಟಿ ಬಿಜೆಪಿ – ಕಾಂಗ್ರೆಸ್ ಪಕ್ಷದಿಂದ ಲೇವಡಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಿಶ್ವನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಶೋಕ್‍ರನ್ನು ಬಕೆಟ್ ಹಿಡಿದುಕೊಂಡೇ ರಾಜಕೀಯ ಮಾಡುವವರು ಎಂದು ಟೀಕಿಸಿರುವುದು ಬಿಜೆಪಿಯ ಬಕೆಟ್ ರಾಜಕೀಯವನ್ನು ಬಹಿರಂಗಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಗೇಲಿ ಮಾಡಿದೆ. ಬಿಜೆಪಿಯ ಎಸ್. ಆರ್. ವಿಶ್ವನಾಥ್ ಹೇಳಿಕೆಯನ್ನು ಪ್ರಸ್ತಾಪಿಸಿ, ಅಶೋಕ್ ಅವರೆ ಪ್ರತಿಪಕ್ಷದ ನಾಯಕ ಸ್ಥಾನ ಹಿಡಿಯಲು ಯಾರಿಗೆ ಬಕೆಟ್ ಹಿಡಿದಿರಿ

ಯತ್ನಾಳರಿಂದ ದೂರ ತಂತ್ರ ; ಪ್ರಧಾನಿ ಬಾಯಿ ತೆರೆಸಲು ಕೆರಳಿಸುವ ಹೇಳಿಕೆಗಳು

ಮಾಜೀ ಬಿಜಾಪುರ ಬದಲಾದ ವಿಜಯಪುರದ ಮೌಲ್ವಿ ಹಾಶ್ಮಿ ಅವರು ಪ್ರಧಾನಿ ಮೋದಿಯವರ ಜೊತೆಗೆ ಇರುವ ಫೆÇೀಟೋ ಹೊರ ಬೀಳುವುದರೊಂದಿಗೆ ಶಾಸಕ ಯತ್ನಾಳರ ಐಸಿಸ್ ಆರೋಪ ನೆಲನಡುಕ ತರುತ್ತಿದೆ. ಕೆಲವರ ಪ್ರಕಾರ ಬಿಜೆಪಿ ಶಾಸಕ ಯತ್ನಾಳರ ಮೂಲಕವೇ ಹಾಶ್ಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ. ಹಾಶ್ಮಿಯವರ ಕುಟುಂಬ ಮತ್ತು ಯತ್ನಾಳರ ಕುಟುಂಬಗಳು ವಿಜಯಪುರದಲ್ಲಿ ಬಿಡದಿ ಹೋಟೆಲಿನಿಂದ ಹಿಡಿದು ನಾನಾ ಉದ್ಯಮ ಪಾಲುದಾರಿಕೆ ಹೊಂದಿವೆ. ಅಧಿಕಾರದಲ್ಲಿ ಯಾರು ಇದ್ದರೂ ಹೋಗುವ

ಬೆಂಗಳೂರು ; ಆನ್‍ಲೈನ್‍ನಲ್ಲಿ ಮಹಿಳೆಗೆ 80,000 ರೂಪಾಯಿ ಟೋಪಿ

ಬೆಂಗಳೂರಿನ ಮಹಿಳೆ ಒಬ್ಬರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಆನ್‍ಲೈನ್ ಮೂಲಕ ವಂಚಿಸಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ವಿಶೇಷ ಪೂಜೆಗೆ ಹುಡುಕುವಾಗ ಆನ್‍ಲೈನ್‍ನಲ್ಲಿ ಶರಣ್ ಭಟ್ ಎಂಬ ಪೂಜಾರಿಯ ಫೋನ್ ನಂಬರ್ ಯಾರೋ ಕೊಟ್ಟರು. ನನ್ನ ಖಾತೆಗೆ 50,000 ರೂಪಾಯಿ ಹಾಕಿ. ದೇವರ ಮುಂದೆ ಪೂಜೆ ಸಲ್ಲಿಸಿ ಮನೆಗೆ ಬಂದು ವಿಶೇಷ ಪೂಜೆ ಮಾಡುವೆ ಎಂದು ಶರಣ್ ಭಟ್ ತಿಳಿಸಿದಂತೆ ಹಣ