Home Archive by category ರಾಷ್ಟ್ರೀಯ (Page 5)

ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್

ಭಾರತದ ಅತಿ ಹಳೆಯ ಬ್ಯಾಂಕು ಯಾವುದು?

ಮದ್ರಾಸ್ ಬ್ಯಾಂಕ್ ಭಾರತದ ಅತಿ ಹಳೆಯ ಬ್ಯಾಂಕಾಗಿದೆ. ಅತಿ ಹಳೆಯ ಬ್ಯಾಂಕುಗಳಲ್ಲಿ ದಿವಾಳಿ ಆದುದು ಬ್ಯಾಂಕ್ ಆಫ್ ಹಿಂದೂಸ್ತಾನ್.1683ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು ಬ್ರಿಟಿಷ್ ವ್ಯಾಪಾರಿಗಳಿಗಾಗಿ ಮದ್ರಾಸ್ ಬ್ಯಾಂಕ್ ಸ್ಥಾಪಿಸಿದರು. ಇದು 1843 ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಆಗಿ, ಅನಂತರ ಇಂಪೀರಿಯಲ್ ಬ್ಯಾಂಕ್ ಆಗಿ, ಬ್ರಿಟಿಷರ ಬಳಿಕ ಎಸ್‌ಬಿಐ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿತು.ಭಾರತದ ಇತರ ಹಳೆಯ ಬ್ಯಾಂಕುಗಳು. ಬ್ಯಾಂಕ್ ಆಫ್ ಬಾಂಬೆ 1720ರಲ್ಲಿ

ಅತಿ ಕಡಿಮೆ ಹಣ ಮೌಲ್ಯ ಹೊಂದಿರುವ ಐದು ದೇಶಗಳು

ಕೆಲವು ದೇಶಗಳ ಹಣ ಮೌಲ್ಯ ಜಾಗತಿಕವಾಗಿ ತಳಮಟ್ಟದಲ್ಲಿ ಇವೆ. ನಮ್ಮ ಒಂದು ಕಟ್ಟು ನೋಟಿಗೆ ಇಲ್ಲಿ ನೂರಾರು ಕಟ್ಟು ನೋಟು ಸಿಗುತ್ತದೆ.ಭಾರತೀಯ ಮಧ್ಯಮ ವರ್ಗದ ಬಡವರು ಈ ದೇಶಗಳ ತಾರಾ ಹೋಟೆಲುಗಳಲ್ಲಿ ತಂಗಬಹುದು. ಭಾರತದ ಒಂದು ರೂಪಾಯಿಗೆ ಆ ದೇಶಗಳ ಹಣ ಎಷ್ಟು ಸಿಗುತ್ತದೆ ಎಂದರೆ ಕಟ್ಟು ಕಟ್ಟು. ಇರಾನಿನ ರಿಯಲ್ ನಮ್ಮ ಒಂದು ರೂಪಾಯಿಗೆ 490; ವಿಯೆಟ್ನಾಮಿನ ಡಾಂಗ್ ನಮ್ಮ ಒಂದು ರೂಪಾಯಿಗೆ 300; ಲಾವೋಸ್‌ನ ಕಿಪ್ ನಮ್ಮ ಒಂದು ರೂಪಾಯಿಗೆ 250,ಇಂಡೋನೇಶಿಯಾದ ರುಪೈಯ ನಮ್ಮ

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ

ಜಮ್ಮು-ಕಾಶ್ಮೀರದ: ಕಥುವಾ ಜಿಲ್ಲೆಯ ಮೇಘಸ್ಫೋಟ: ನಾಲ್ವರು ಸಾವು, ಹಲವರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜೋಡ್ ಘಾಟಿ ಎಂಬ ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ

ಅತಿ ಹೆಚ್ಚು ಬ್ಲೂ ಬೆರಿ ರಫ್ತು ಮಾಡುವ ದೇಶ ಯಾವುದು?

ಅತಿ ಹೆಚ್ಚು ಬ್ಲೂ ಬೆರಿ ರಫ್ತು ಮಾಡುವ ದೇಶ ಪೆರು; ಆಮದು ಮಾಡಿಕೊಂಡು ರಫ್ತು ಮಾಡುವ ದೇಶಗಳು ಯುಎಸ್‍ಎ ಹಾಗೂ ನೆದರ್‍ಲ್ಯಾಂಡ್ಸ್. ಜಾಗತಿಕವಾಗಿ 10 ಲಕ್ಷ ಟನ್ ಬ್ಲೂ ಬೆರಿ ಪ್ರತಿ ವರುಷ ರಫ್ತು ಆಗುತ್ತದೆ. ಜಾಗತಿಕ ರಫ್ತು ಪ್ರಮಾಣದಲ್ಲಿ ಪೆರು ಪಾಲು 31 ಶೇಕಡಾ. ಚಿಲಿ, ಸ್ಪೆಯಿನ್, ಮೊರಾಕೊಗಳ ರಫ್ತು ಪಾಲು ತಲಾ 8 ಶೇಕಡಾ, ಯುಎಸ್‍ಎ ಲೋಕ ರಫ್ತು ಪ್ರಮಾಣ 7 ಶೇಕಡಾ. 2010ರವರೆಗೆ ಪೆರು ದೇಶದಲ್ಲಿ ನೀಲಿ ಬೆರಿ ಬೆಳೆ ರಫ್ತು ಪ್ರಮಾಣ […]

ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ನಿರಾಕರಣೆ:ಸಂಸದ ಕ್ಯಾ. ಚೌಟ ಕಳವಳ

ನವದೆಹಲಿ: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್‌ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಯಮ 377ರ ಅಡಿಯಲ್ಲಿ ಲೋಕಸಭೆಯಲ್ಲಿಈ ಗಂಭೀರ ವಿಷಯವನ್ನು

ಮಂಗಳೂರು:ಎಸ್ ಸಿಡಿಸಿಸಿ ಬ್ಯಾಂಕ್ ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್  ಪ್ರಥಮ ಪ್ರಶಸ್ತಿ

ಮಂಗಳೂರು *  ಸಹಕಾರಿ ರಂಗದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್)ಗೆ  ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನ ಪ್ರಥಮ ಪ್ರಶಸ್ತಿ ಲಭಿಸಿದೆ. ಅಪೆಕ್ಸ್ ಬ್ಯಾಂಕ್ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ  ಪ್ರಥಮ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಪ್ರತಿಷ್ಠಿತ

ಮೆಟ್ರೊ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಹಬ್‌ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಈ ಮಾರ್ಗವು ಬೊಮ್ಮಸಂದ್ರದಿಂದ ಆರ್‌.ವಿ. ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ರಾಗಿಗುಡ್ಡ ನಿಲ್ದಾಣದಲ್ಲಿ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಮೋದಿ. ಎಲೆಕ್ಟ್ರಾನಿಕ್ ಸಿಟಿ ವರೆಗೆ ಪ್ರಯಾಣ ನಡೆಸಿದರು. ಅವರೊಂದಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ,