Home Archive by category ವಿಟ್ಲ (Page 8)

ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲುಗಣಿಗಾರಿಕೆ, ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ : ಮಾಲೀಕ ರಂಜಿತ್ ಕುಮಾರ್

ವಿಟ್ಲ: ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಂಪೂರ್ಣ ಸಕ್ರಮವಾಗಿದ್ದು, ಗಣಿಗಾರಿಕೆ ನಡೆಸುವ ಜಾಗ ಸಂಪೂರ್ಣ ವರ್ಗ ಜಮೀನಾಗಿದೆ. ಅದನ್ನು ಲೀಸ್ ಗೆ ಪಡೆದು ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ. ಈ ಭಾಗದಲ್ಲಿ ಪಾಂಡವರ ಕೋಟೆಯಿಲ್ಲ, ಪಾಂಡವರ ಒಲೆಯ ಕುರುಹು ಇದ್ದು ಆ ಸ್ಥಳವನ್ನು ಸಂರಕ್ಷಣೆ

ವಿಟ್ಲ : ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆ

ವಿಟ್ಲ: ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆಯಾದ ಘಟನೆ ನಡೆದಿದೆ. ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸಿ ಅಕ್ಕಪಕ್ಕದ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ

ಇಂಡಿಯ HIP HOP ಚಾಂಪಿಯನ್ ಶಿಪ್ 2023 ಗೆ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಸೆಮಿಫೈನಲ್ ಗೆ ಆಯ್ಕೆ

ವಿಟ್ಲ: ಇಂಡಿಯ HIP HOP ಚಾಂಪಿಯನ್ ಶಿಪ್ 2023 ಗೆ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಸೆಮಿಫೈನಲ್ ಗೆ ಆಯ್ಕೆಯಾಗಿದೆ. ರಾಕೇಶ್ ವಿಟ್ಲ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಜನವರಿ 5 ರಂದು ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ ನಲ್ಲಿ ಭಾಗವಹಿಸಲಿದೆ.

ವಿಟ್ಲ ಚಂದಳಿಕೆ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ಶನಿವಾರ ನಡೆಯಿತು. ಎಸ್ ಎಲ್ ವಿ ಬುಕ್ ಕಂಪೆನಿಯ ದಿವಾಕರದಾಸ್ ನೇರ್ಲಾಜೆ ಮಾತನಾಡಿ ಹಿರಿಯ ಶಿಕ್ಷಕರು ಭದ್ರ ಅಡಿಪಾಯ ಇಟ್ಟುಕೊಟ್ಟ ಕಾರಣದಿಂದ ಶಾಲೆಯೂ ಇಂದು ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಿಕ್ಷಕರ,  ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ  ಅವರನ್ನು

ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು

ವಿಟ್ಲ: ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕದ ಸಾಯ ಎಂಬಲ್ಲಿ ನಡೆದಿದೆ. ನಾರಾಯಣ ನಾಯ್ಕ ಅವರ ಪುತ್ರ ಜತೇಶ್ (7 ವ) ಮೃತ ಬಾಲಕ. ವ್ಯಕ್ತಿಯೋರ್ವರು ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಘಟನೆಗೆ ಕಾರಣವೆಂದು ಆರೋಪಿಸಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೆÇಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು

ವಿಟ್ಲದಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಕಾಲ್ನಡಿಗೆ ಜಾಥಾ

ವಿಟ್ಲ: ಪುತ್ತೂರು ಹಾಗೂ ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಮಂಜೂರಾದ ನಿವೇಶನದಲ್ಲಿ ಅಂಬೇಡ್ಕರ್ ಭವನಕ್ಕೆ ಕೂಡಲೇ ಶಂಕುಸ್ಥಾಪನೆ ನೆರವೇರಿಸಬೇಕು ಹಾಗೂ 2 ಭವನಗಳಿಗೂ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ವಿಟ್ಲ ಕಚೇರಿಯಿಂದ ಬಳಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಶಾಸಕರ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಮನವಿ ಸಲ್ಲಿಸಿದರು. ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ

ಮಕ್ಕಳನ್ನುಶಾಲೆಗೆ ಕರೆದೊಯ್ಯುವ ವೇಳೆ ರಿಕ್ಷಾ ಚಾಲಕನಿಗೆ ಹೃದಯಾಘಾತ

ವಿಟ್ಲ: ಆಟೋ ರಿಕ್ಷಾ ಚಾಲಕರೋರ್ವರು ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ನ.9 ರಂದು ಬಂಟ್ವಾಳ ತಾಲೂಕಿನ ಮಾಣಿ ಸಮೀಪ ನಡೆದಿದೆ. ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45) ಮೃತರು. ಜಯಕರ ಪೂಜಾರಿ ರವರು ಆಟೋ ರಿಕ್ಷಾ ಚಾಲಕರಾಗಿದ್ದು, ಪ್ರತಿದಿನ ಬೆಳಗ್ಗೆ ಕೆಲ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಎಂದಿನಂತೆ ಇಂದು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ

ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಎಗರಿಸಿದ ಖದೀಮರು -ವಿಟ್ಲ ಠಾಣೆಯ ಪೊಲೀಸರು ಭೇಟಿ, ತನಿಖೆ

ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲೊಂದಾದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಯಾರೋ ಖದೀಮರು ಎಗರಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.ಕೆಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆಗೆ ಅಪಾರ ಮಹಿಮೆ ಇದೆ. ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಇಲ್ಲಿನ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು

ಸಮಸ್ಯೆಗಳ ಕೂಪವಾಗಿ ಮಾರ್ಪಟ್ಟ ವಿಟ್ಲ ಪಟ್ಟಣ

ವಿಟ್ಲ: ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಮಾರ್ಪಾಡಾಗಿದೆ. ಸಮಸ್ಯೆಯಿಂದ ಕಂಗಾಲಾದ ಜನಅವರ ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಅದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಅವರು ವಿಟ್ಲ ಪಟ್ಟಣ ಪಂಚಾಯತ್ ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಪಂಚಾಯತ್ ವತಿಯಿಂದ

ವಿಟ್ಲ: ಪೆಟ್ರೋಲ್ ಸುರಿದು ಯುವಕನ ಹತ್ಯೆ

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಟ್ವಾಳ-ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ (ಸಮಾದ್) (19) ಮೃತ ಯುವಕ. ಅದ್ರಾಮ ಸಲಿಂಗಕಾಮಿಯಾಗಿದ್ದು, ಮಂಚಿ-ಇರಾ-ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ