ಪುತ್ತೂರು:ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬಿ ಪ್ರಯುಕ್ತ ದೇಶದ್ಯಾಂತ ಬಿ.ಜೆ.ಪಿ ವತಿಯಿಂದ ಅಟಲ್ ವಿರಾಸತ್ ವಿಶೇಷ ಕಾರ್ಯಕ್ರಮವನ್ನು ಪಕ್ಷ ಆಯೋಜಿಸಿದ್ದು, ದ.ಕ ಜಿಲ್ಲಾ ಬಿ.ಜೆ.ಪಿ ವತಿಯಿಂದ ಪುತ್ತೂರು ವೆಂಕಟರಮಣ ದೇವಸ್ಥಾನದ ಮೈದಾನದಲ್ಲಿ ನಡೆಯುವ ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ
ಹಿರಿಯಡ್ಕ: ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಇಂದು ದಿನಾಂಕ 19-11-2025 ರಂದು ಕೊಡಿಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮಕ್ಕಳಿಗೆ ಟಿ.ವಿ, ಮಕ್ಕಳ ಆಟಿಕೆ ಕಿಟ್ ಹಾಗೂ ಪಂಚಾಯತ್ ವರ್ಗ ಅನುದಾನ ಹಾಗೂ ಶೇಖರ 25ರ ನಿಧಿ ಮತ್ತು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ (ರಿ.) ಪುತ್ತೂರುಇವರ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರುಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರ ದಿನಾಚರಣೆ” ಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ಮನೀಷಾ ಸಭಾಂಗಣ, ಪುತ್ತೂರು, ಇಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು
ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿ – ರಚನಾದ 26ನೇ ಸಾಮಾನ್ಯ ಸಭೆ 16.11.25ರಂದು ಬೆಂದೂರ್ ಹಾಲ್‌ನಲ್ಲಿ ನಡೆಯಿತು. ಕಥೊಲಿಕ್ ಮುಖಂಡ ಮತ್ತು ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಂಸ್ಥೆಯ ನೇತೃತ್ವದಲ್ಲಿ ಇದು ಒಂದು ಪ್ರಮುಖ ಬದಲಾವಣೆ ಆಗಿದ್ದು, ಕ್ಯಾಥೋಲಿಕ್ ಸಮುದಾಯದ
“ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವನ್ನು 2025ರ ನವೆಂಬರ್ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ CODP®️ ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಶ್ರೀ ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ – ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
ಕುಂದಾಪುರ:ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರನ್ನು ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನ ಪರಿಷತ್‌ನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4)ರ ಮೇರೆಗೆ ಸಭಾಪತಿಯವರು ನೇಮಕ ಮಾಡಿ ಆದೇಶಿಸಿದ್ದಾರೆ. ಸದಸ್ಯರಾಗಿ ಭಾರತಿ ಶೆಟ್ಟಿ, ಎಸ್.ವಿ. ಸಂಕನೂರ, ನಿರಾಣಿ ಹಣಮಂತ್ ರುದ್ರಪ್ಪ, ಶರವಣ ಟಿ.ಎ., ಡಾ. ಚಂದ್ರಶೇಖರ್ ಬಸವರಾಜ ಪಾಟೀಲ, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ, ರಾಮೋಜಿಗೌಡ ಅವರನ್ನು ನೇಮಿಸಲಾಗಿದೆ. ವಿಧಾನ
ಯಕ್ಷಾಂಗಣದಿಂದ ಕನ್ನಡದ ನುಡಿ ಹಬ್ಬ ಆಚರಣೆ: ಕೆ.ಕೆ.ಶೆಟ್ಟಿ ಮಂಗಳೂರು: ‘ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾರವಿಡೀ ಯಕ್ಷಗಾನ ತಾಳಮದ್ದಳೆಗಳನ್ನು ನಡೆಸುವ ಮೂಲಕ ಯಕ್ಷಾಂಗಣ ಸಂಸ್ಥೆ ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವನ್ನು ಆಚರಿಸುತ್ತಿದೆ. ಸುಲಲಿತವಾದ ಕನ್ನಡ ಭಾಷೆಯನ್ನು ಯಕ್ಷಗಾನದಂತೆ ಸಶಕ್ತವಾಗಿ ಬಳಸಿಕೊಳ್ಳುವ ಕಲಾ ಮಾಧ್ಯಮ ಬೇರೊಂದಿಲ್ಲ’ ಎಂದು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ
ಮೂಡುಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ದ್ವೈಮಾಸಿಕ ಪತ್ರಿಕೆ “ವಾಯ್ಸ್ ಆಫ್ ವೈಬ್ರೆಂಟ್”ನ ಬಿಡುಗಡೆ ಸಮಾರಂಭವು ಸೋಮವಾರ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಾಯ್ಸ್ ಆಫ್ ವೈಬ್ರೆಂಟ್ ಪತ್ರಿಕೆಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಕೌಶಲವನ್ನು ಬರವಣಿಗೆಯ ರೂಪದಲ್ಲಿ ಈ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಸಂಸ್ಥೆಯು ತಮಗೆ
ಮೂಡುಬಿದಿರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನ.16ರಂದು ನಡೆದ ರಾಜ್ಯ ಮಟ್ಟದ ಮಿಸ್ ಮಲೆನಾಡು ಬ್ಯೂಟಿ ಕಾಂಟೆಸ್ಟ್ ನಲ್ಲಿ ಮೂಡುಬಿದಿರೆಯ ರಹಿನಿ ಪೂಜಾರಿ ವಿನ್ನರ್ ಆಗಿದ್ದಾರೆ. ಮೂಡುಬಿದಿರೆ ಆಳ್ವಾಸ್ ಸೆಂಟ್ರಲ್ ಶಾಲೆಯ 7 ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಈಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮೂಡುಬಿದಿರೆ ಸಂಪಿಗೆ ನಿವಾಸಿ ಪ್ರಕಾಶ್ ಪೂಜಾರಿ- ಗೃಹಿಣಿ ಸೌಮ್ಯ ದಂಪತಿಯ ಪುತ್ರಿ.
ಮೂಡುಬಿದಿರೆ: 12 ಸ್ಪಧಿ೯ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ ನಾಗಮಂಗಲದಲ್ಲಿ ನಡೆದ ರಾಜ್ಯ ಮಟ್ಟದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಆಳ್ವಾಸ್ ಶಾಲೆಯ 12 ಯೋಗ ಕೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ




























