Home Archive by category Fresh News (Page 15)

ನ.28ರಂದು ಪ್ರಧಾನಿ ಮೋದಿ ಉಡುಪಿ ಕೃಷ್ಣಮಠಕ್ಕೆ ಭೇಟಿ- ಪೂರ್ವಭಾವಿ ಸಭೆ

ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನವೆಂಬರ್ 28 ರಂದು ನಡೆಯುವ “ಲಕ್ಷ ಕಂಠ ಗೀತಾ ಪಾರಾಯಣ – ಬ್ರಹತ್ ಗೀತೋತ್ಸವ” ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು ಇದರ ಪೂರ್ವಭಾವಿಯಾಗಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ

ಮಣಿಪಾಲ: ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರ

ಉಡುಪಿ: ಅಪ್ರಾಪ್ತ ಬಾಲಕಿಯ ಜೊತೆ ಯುವಕನೋರ್ವ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಘಟನೆ ಮಣಿಪಾಲದಲ್ಲಿ ನಡೆದಿದೆ. ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ. ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (೨೦) ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದರ

ಪಡುಮಾನಾ೯ಡು ಗ್ರಾ. ಪಂ ಸದಸ್ಯ ನೇ*ಣಿಗೆ ಶರಣು

ಮೂಡುಬಿದಿರೆ : ಸಮಾಜ ಸೇವಕ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಮೂಡುಮಾನಾ೯ಡಿನ ನಿವಾಸಿ ಶ್ರೀನಾಥ್ ಸುವಣ೯ ಅವರ ಮೃತದೇಹವು ಶ್ಮಶಾನಕ್ಕಾಗಿ ಮೀಸಲಿಟ್ಟ ಪಡ್ಡೇಲು ಎಂಬ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಕಳೆದ ಹಲವು ವಷ೯ಗಳಿಂದ ಬಿಜೆಪಿ ಕಾಯ೯ಕತ೯ರಾಗಿದ್ದ ಶ್ರೀನಾಥ್ ಸುವರ್ಣ ಅವರು ನಂತರ ಪಡುಮಾನಾ೯ಡು ಗ್ರಾ. ಪಂ.ನಲ್ಲಿ ಸ್ಪಧಿ೯ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ

ಇಂದಿರಾ ಹೆಗ್ಗಡೆ ಅವರ ಕ್ಷೇತ್ರ ಕಾರ್ಯ ದಾಖಲೀಕರಣ ತುಳುವಿಗೆ ಮಾರ್ಗದರ್ಶಿ ಕೃತಿ: ಡಾ.ಆಶಾಲತಾ ಸುವರ್ಣ

ಮಂಗಳೂರು: ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ, ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಆಶಾಲತಾ ಸುವರ್ಣ ಅವರು ಹೇಳಿದರು. ಅವರು ತುಳು ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಡಾ.ಇಂದಿರಾ ಹೆಗ್ಗಡೆ ಅವರ ‘ಬಾರಗೆರೆ

ಎನ್ನೆಂಸಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ ಪ್ರಯುಕ್ತ ನಾಲ್ಕನೇ ದಿನದ ಕಾರ್ಯಕ್ರಮ

ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಕಾಲೇಜುಗಳಲ್ಲಾಗಬೇಕು ಲೀಲಾ ದಾಮೋದರ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಾಗೂ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ನವೆಂಬರ್ 4 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯದ ಸಾಹಿತಿ ಲೀಲಾ ದಾಮೋದರ್ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ – ಕಾಲೇಜುಗಳಲ್ಲಾಗಬೇಕು. ಆ

ಪುತ್ತೂರು: ದೇವದಾಸ್ ಗೌಡ ನಿಧನ

ಪುತ್ತೂರು ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ ನಿಧನ. ಪುತ್ತೂರು: ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ(74ವ) ನ.4ರಂದು ನಿಧನರಾದರು. ದೇವದಾಸ್ ಗೌಡ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ.4ರಂದು ಅವರು ನಿಧನರಾದರು. ಮೃತರು

ನಂದಿತಾ ಎಸ್. ಭಟ್ ಐಸಿಎಐ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಉತ್ತೀರ್ಣ

ಕಡಬ: ಪೆರ್ಲದಕೆರೆ ಕಡಬದ ಶ್ರೀ ಎಸ್. ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಭಟ್ ಇವರ ಪುತ್ರಿ ನಂದಿತಾ ಎಸ್. ಭಟ್ ಇವರು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ (ICAI) ನಡೆಸಿದ ಲೆಕ್ಕಪರಿಶೋಧಕರ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈoಟ್ ಆನ್ಸ್ ಶಾಲೆ, ಕಡಬದಲ್ಲಿ, ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪಿ.ಯು. ಕಾಲೇಜು, ರಾಮಕುಂಜದಲ್ಲಿ, ಹಾಗೂ ಪದವಿ

ಬೆಳ್ತಂಗಡಿ–ಕಡಬದಲ್ಲಿ ಕಾಡಾನೆಗಳ ಅಟ್ಟಹಾಸ! ನಿಡ್ಲೆ ಗ್ರಾಮದಲ್ಲಿ ತೋಟಕ್ಕೆ ನುಗ್ಗಿ ಬಾಳೆ–ಅಡಿಕೆ ಕೃಷಿ ಹಾನಿ

ಕೊಕ್ಕಡ: ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ದಾಳಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ರೈತರ ಶ್ರಮದ ಫಲವನ್ನು ಕ್ಷಣಾರ್ಧದಲ್ಲಿ ನಾಶಮಾಡುತ್ತಿರುವ ಘಟನೆಗಳು ಅತಿಯಾಗಿ ಹೆಚ್ಚಾಗಿವೆ. ಇತ್ತೀಚಿನ ಘಟನೆಯಾಗಿ ಶನಿವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬಾರೆಗುಡ್ಡೆ ಪ್ರದೇಶದಲ್ಲಿ ಕುಶಾಲಪ್ಪ ಗೌಡ ಎಂಬ ರೈತರ ತೋಟಕ್ಕೆ ಕಾಡಾನೆ ದಾಳಿ ನಡೆಸಿ, ಅಪಾರ ಪ್ರಮಾಣದ ಬಾಳೆ, ತೆಂಗು, ಅಡಿಕೆ ತೋಟವನ್ನು

ವಿಟ್ಲ:ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಯುವಕ ಮೃತಪಟ್ಟ ಘಟನೆ ಅಳಿಕೆಯಲ್ಲಿ ನಡೆದಿದೆ. ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್(37) ಮೃತಪಟ್ಟ ಯುವಕ. ತೆಂಗಿನ ಮರದಿಂದ ಕಬ್ಬಿಣದ ದೋಟಿ ಬಳಸಿ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕರೆಂಟ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಬದುಕಿ ಉಳಿಯಲಿಲ್ಲ. ಮೃತರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.

ಜಾಗತಿಕ ಹಳೆಯ ವಿದ್ಯಾರ್ಥಿಗಳ ಕೂಟ – ನಿಟ್ಟೆ ನೆಕ್ಸಸ್ 2025 ಆಹ್ವಾನ ಪತ್ರ ಬಿಡುಗಡೆ

ಜಾಗತಿಕ ಹಳೆಯ ವಿದ್ಯಾರ್ಥಿಗಳ ಕೂಟ – ನಿಟ್ಟೆ ನೆಕ್ಸಸ್ 2025 ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರವನ್ನು ಇಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ಕಚೇರಿ, ರಾಂಭವನ್, ಕೊಡಿಯಾಲ್‌ಬೈಲ್, ಮಂಗಳೂರು ಇಲ್ಲಿ ಬಿಡುಗಡೆ ಮಾಡಲಾಯಿತು. ಈ ಆಹ್ವಾನ ಪತ್ರವನ್ನು ಶ್ರೀ ವಿಷಾಲ್ ಹೆಗ್ಡೆ, ಕಾರ್ಯದರ್ಶಿ, ನಿಟ್ಟೆ ಎಜುಕೇಶನ್ ಟ್ರಸ್ಟ್ ಅವರಿಂದ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾಣಿಕ್‌ ‌ ಶ್ರೀ ಮುಲ್ಕಿ ಜೀವನ್ ಕೆ. ಶೆಟ್ಟಿ (ಅಧ್ಯಕ್ಷರು, WENAMITAA –