Home Archive by category Fresh News (Page 173)

ಬಿಸಿ ರೋಡ್: ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ: ರಿಕ್ಷಾ ಚಾಲಕನಿಗೆ ಗಂಭೀರ ಗಾಯ

ಕಾರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿಯಾದ ಘಟನೆ ಬಿ.ಸಿ ರೋಡ್‍ನ ರೈಲು ನಿಲ್ದಾಣದ ಬಳಿ ನಡೆದಿದೆ. ಅಪಘಾತದ ಪರಿಣಾಮ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಸ್ಕಾನ್ ಮಂಗಳೂರು || ಸೆ.6 ಮತ್ತು 7ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಗರದ ಕೊಡಿಯಾಲ್‍ಬೈಲ್‍ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ತಿಳಿಸಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 2 ಮತ್ತು 3ರಂದು ದೇವಾಲಯದ

ಬೆಳ್ತಂಗಡಿ || ರಾಜ್ಯ ಸರ್ಕಾರದ ಜನಪರ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು : ಸಚಿವ ಶರಣಬಸಪ್ಪ ದರ್ಶನಾಪೂರ

ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಸಿ ಮಾತನಾಡಿದರು. ಬಳಿಕ ಸಚಿವರು ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು.

ಪಡುಬಿದ್ರಿ: ಟ್ಯಾಂಕರ್- ಸ್ಕೂಟರ್ ಅಪಘಾತ -ಗಂಭೀರ ಗಾಯಗೊಂಡಿದ್ದ ಸಹ ಸವಾರ ಮೃತ್ಯು

 ಹೆಜಮಾಡಿ ಸಮೀಪದ ಕನ್ನಂಗಾರಿನಲ್ಲಿ ನಡೆದ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಕೂಟರ್‌ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಯುವಕ ಜಾರ್ಕಾಂಡ್ ಮೂಲದ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಕೋಣೆಯ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ(20). ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.ತಮ್ಮ ವಾಸದ ಮನೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದು, ಹೆಜಮಾಡಿ ಒಳ

ಬೆಂಗಳೂರು|| ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಡಿಸಿಎಂ ಒಪ್ಪಿಗೆ: ಡಿಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಗಲ್ಫ್ ಕನ್ನಡಿಗರು

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ಅಯ್ಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕಲೀಲ್ ಹೇಳಿದರು. ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕೆಎನ್‍ಆರ್‍ಐಗೆ ಕಳೆದ ಕೆಲವು ವರ್ಷಗಳಿಂದ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿರಲ್ಲಿಲ್ಲ. ಈ

ಮಂಗಳೂರು || ನಾಗುರಿಯಲ್ಲಿ ಗ್ಯಾರೇಜ್ ಕೆಫೆ ಉದ್ಘಾಟನೆ

ಗ್ಯಾರೇಜ್, ಕೆಫೆ, ಮತ್ತು ಆಟೋ ಪಾರ್ಟ್ಸ್ ಈ ಮೂರನ್ನೂ ಒಳಗೊಂಡ ಗ್ಯಾರೇಜ್ ಕೆಫೆ ಮಂಗಳೂರಿನ ನಾಗುರಿಯಲ್ಲಿ ಉದ್ಘಾಟನೆಗೊಂಡಿತು.ಎಲ್ಲವೂ ಒಂದೇ ಸೂರಿನಡಿಯಲ್ಲಿರುವ ಈ ನೂತನ ಸಂಸ್ಥೆಯನ್ನು ಅತಿಥಿಗಳು ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಹುಲಿನಲಿಕೆ ಆಕರ್ಷಣೀಯವಾಗಿತ್ತು. ನಾಗುರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮೋಟೋ ಕ್ಲೌನ್ಝ್, ಸ್ಲೈಸ್ ಆಫ್ ಹೆವೆನ್ ಮತ್ತು ಐಕ್ಯಂ ಆಟೋ ಸ್ಪಾ ಆಂಡ್ ಡಿಟೈಲಿಂಗ್ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುತ್ತದೆ.

ಧರ್ಮಸ್ಥಳ: ನೇತ್ರಾವತಿ ನದಿಯ ಅಂಬ್ಯ ದಡದಲ್ಲಿ ವ್ಯಕ್ತಿಯ ಶವ ಪತ್ತೆ

ಧರ್ಮಸ್ಥಳದ ನೇತ್ರಾವತಿ ನದಿಯ ತೀರದಲ್ಲಿ ಅನಾಥ ಶವ ಪತ್ತೆಯಾದ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ನದಿಯಲ್ಲಿ ಮೃತದೇಹ ಕಂಡು ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಬಂದ ತಂಡದವರು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಧರ್ಮಸ್ಥಳ, ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲ್ಯಾಡಿ: ಬೈಕ್ ಮತ್ತು ಕಾರುಗಳ ಮಧ್ಯೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ತಾ.ಪಂ ಮಾಜಿ ಸದಸ್ಯ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ನೆಲ್ಯಾಡಿ ಎಚ್‍ಪಿ ಪೆಟ್ರೋಲ್ ಬಂಕ್ ನ ಬಳಿ ಆಲ್ಟೊ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲ್ಯಾಡಿಯಿಂದ ಮಂಗಳೂರಿಗೆ ತೆರಳುತ್ತಿರುವ ಆಲ್ಟೊ ಕಾರು ಹಾಗೂ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಅನ್ನು

ವಿಟ್ಲ: ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯವಾಗಬೇಕು- ಅವಧೂತ ಶ್ರೀವಿನಯ ಗುರೂಜಿ

ವಿಟ್ಲ: ಸಂಸ್ಕಾರ, ಸಂಸ್ಕೃತಿ ಹಳ್ಳಿಯಲ್ಲಿ ದೃಢವಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ವ್ಯತ್ಯಾಸವಾಗದಂತೆ ತಡೆಯುವ ಕಾರ್ಯವಾಗಬೇಕು. ಹಳ್ಳಿಯಲ್ಲಿ ಸಂಸ್ಕಾರದಲ್ಲಿ ವ್ಯತ್ಯಾಸವಾದ ಭಾರತ ಹಾಳಾಗುತ್ತದೆ. ಭಾವನೆಯಿಂದ ಕೂಡಿದ ರಥ ಭಾರತವಾಗಿದ್ದು, ಸನಾತನ ಧರ್ಮದ ರಕ್ಷಣೆಯ ಭಾವವನ್ನು ಎಲ್ಲರೂ ಹೊಂದಿದ್ದಾರೆ. ಹಬ್ಬಗಳ ಆಚರಣೆಯಿಂದ ಸಂಘಟನೆ ಬಲವಾಗುತ್ತದೆ ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾವುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು. ಅವರು ಮಾಣಿಲ ಶ್ರೀಧಾಮ ಶ್ರೀ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ, ಪೂಜೆ ಸಲ್ಲಿಕೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಭೇಟಿ ನೀಡಿದರು. ಶ್ರೀ ಮಂಜುನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಶ್ರಾವಣ ಮಾಸದ ಶುಭ ಸೋಮವಾರದಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಶ್ರೀ ಮಂಜುನಾಥ ದೇವರು ರಾಜ್ಯದ ಜನರಿಗೆ ಸುಭೀಕ್ಷೆಯನ್ನು ತರಲಿ ಎಂದರು.