Home Archive by category Fresh News (Page 320)

ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿ : ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡಿನ ಬದಿಯಡ್ಕದ ವಿದ್ಯಾಗಿರಿಯ ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿಯಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕದ ಗ್ರಾಮ ಪಂಚಾಯತ್ ಮೆಂಬರ್ ಶ್ರೀ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು, ಇವರು ತಮ್ಮ ಭಾಷಣದಲ್ಲಿ ತುಳು ಬಾಷೆಯು ಶೀಘ್ರದಲ್ಲಿ 8ನೇ ಪರಿಚ್ಚೆದಕ್ಕೆ ಸೇರುವಂತಾಗಲಿ

ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಿಗೆ ಗೌರವಾಭಿನಂದನೆ

  “ಸಾಧನೆ ಮಾಡಬೇಕೆಂದರೆ ಸಾಮರ್ಥ್ಯ ಮುಖ್ಯ. ಎನ್.ಸಿ.ಸಿ ಕೆಡೇಟ್ ಗಳು ನಿಜಕ್ಕೂ ಭಾಗ್ಯಶಾಲಿಗಳು. ನಿಮ್ಮ ಸಾಧನೆ ನಮ್ಮ ಕಾಲೇಜಿಗೆ ಗೌರವವನ್ನು ತಂದುಕೊಟ್ಟಿದೆ” ಎಂದು ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಾದ ಡಾ ಎ. ಜಯಕುಮಾರ್ ಶೆಟ್ಟಿ ಹೇಳಿದರು.         ಕಾಲೇಜಿನ 2/18 ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಹಾಗು 5 ಕಾರ್ ನೇವಲ್ ಸಬ್ ಯುನಿಟ್ ನೇವಿ ವಿಂಗ್ ಕೆಡೇಟ್ ಗಳು ಶುಕ್ರವಾರ ಪೂರ್ವಾಹ್ನ ನಿವೃತ್ತ ಜೀವನಕ್ಕೆ

ಬಂಟ್ವಾಳ : 170ಕ್ಕೂ ಹೆಚ್ಚು ಗಡಿಯಾರಗಳಿರುವ ಮನೆ

ಮನುಷ್ಯನ ಜೀವನದಲ್ಲಿ ಸಮಯಕ್ಕೆ ಎಷ್ಟು ಮಹತ್ವವಿದೆಯೋ, ಸಮಯವನ್ನು ಸೂಚಿಸುವ ಗಡಿಯಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇಂದಿನ ಯುಗದಲ್ಲಿ ಕನಿಷ್ಟ ಒಂದಾದರೂ ಗಡಿಯಾರ ಇಲ್ಲದ ಮನೆ ಇರೋದು ಅಪರೂಪವೇ ಅಲ್ಲವೇ. ಆದರೆ ಈ ಮನೆಯಲ್ಲಿ ಮಾತ್ರ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರ. 170 ಕ್ಕಿಂತಲೂ ಹೆಚ್ಚು ಗಡಿಯಾರಗಳಿರುವ ಈ ಮನೆ ಒಂದು ಗಡಿಯಾರಗಳ ಮ್ಯೂಸಿಯಂ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರಿಗೆ ಸೇರಿದ ಮನೆ.

ಮತದಾನ ಜಾಗೃತಿಯ ವ್ಯಂಗ್ಯ ಚಿತ್ರಗಳ ಪ್ರದರ್ಶನ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರರೂ ಮತ ಚಲಾಯಿಸುವ ಮೂಲಕ ಶೇ.100ರಷ್ಟು ಮತದಾನಕ್ಕೆ ನೆರವಾಗುವಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಕರೆ ನೀಡಿದ್ದಾರೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ಮತದಾನ ಜಾಗೃತಿಯ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು

ಕಾಂತು ಅಜಿಲರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಆರ್ಥಿಕ ನೆರವು

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದೈವಾರಾಧನೆ ಕುರಿತು ಅಪಾರ ಜ್ಞಾನ ಹೊಂದಿದ್ದ ಕಾಂತು ಅಜಿಲರು ಹಲವರಿಗೆ ಸಂಶೋಧನೆ ಕುರಿತು ಮಾಹಿತಿ ನೀಡುತ್ತಿದ್ದರು. ಎಡಮಂಗಲದ ಪ್ರಮುಖ ದೈವಸ್ಥಾನದಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿದ್ದರು. ಅವರು 45 ವರ್ಷಗಳಿಂದ ದೈವ ನರ್ತಕರಾಗಿ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ

ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ : 11ನೇ ಸಾಲೆತ್ತೂರು ಶಾಖೆಯ ಶುಭಾರಂಭ

ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 11ನೇ ಸಾಲೆತ್ತೂರು ಶಾಖೆ ಸಾಲೆತ್ತೂರಿನ ರಥನ್ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮೂರ್ತೆದಾರಿಕೆ ಕಡಿಮೆಯಾಗುತ್ತ ಬರುತ್ತಿದ್ದಂತೆಯೇ ಮೂರ್ತೆದಾರರ ಸಹಕಾರಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಪರಿಣಾಮ ಇಂದು

ಬಂಟ್ವಾಳ: ದ.ಕ. ಗ್ಯಾರೇಜ್ ಮಾಲಕರ ಸಂಘದ ಮಹಾಸಭೆ

ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಜಿಲ್ಲಾ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಸುಧಾಕರ್ ಆಚಾರ್ಯ ಉದ್ಘಾಟಿಸಿದರು. ಅವರು ಮಾತನಾಡಿ ನಾವು ಶಕ್ತಿಯುತರಾದಾಗ ಸಂಘಟನೆಯು ಬಲಯುತವಾಗಿರುತ್ತದೆ. ಸಂಘಟನೆಯಲ್ಲಿ ಇರುವ ಜೊತೆಗೆ ಸಮಾಜದ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿ

ಉಚ್ಚಿಲ ಅಪಾಯಕಾರಿ ಡೈವರ್ಷನ್ ಮುಚ್ಚುಗಡೆ : ಬೆಂಬಲ ವ್ಯಕ್ತ ಪಡಿಸಿದ ಸಾರ್ವಜನಿಕರು

ಬಹಳಷ್ಟು ಅಮಾಯಕರು ಪ್ರಾಣ ಕಳೆದುಕೊಂಡ ಉಚ್ಚಿಲದ ಪಣಿಯೂರು ತಿರುವು ಬಳಿಯ ಡೈವರ್ಷನ್ ಮುಚ್ಚುವ ಮೂಲಕ ನವಯುಗ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕೆಲ ವರ್ಷಗಳ ಹಿಂದೆ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಮುಂದಿರಿಸಿದ ಸಾರ್ವಜನಿಕರು, ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ವರಗೆ ಪಣಿಯೂರು ಕ್ರಾಸ್ ಬಳಿ ಡೈವರ್ಷನ್ ತೆರೆಯುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅನಧಿಕೃತ ಡೈವರ್ಷನ್ ತೆರೆದುಕೊಂಡಿದ್ದು, ಆ ಬಳಿಕ ಆ ಡೈವರ್ಷನ್ ನಲ್ಲಿ ನಡೆದ ದುರಂತ ಒಂದೆರಡಲ್ಲ. ಕೆಲವರು

ಗುಂಡ್ಯ ಹಿಟ್ ಅಂಡ್ ರನ್; ವ್ಯಕ್ತಿ ಸಾವು

ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಗುಂಡ್ಯ ಎಂಬಲ್ಲಿ ಎ.2ರ ಬೆಳಗ್ಗೆ ರಸ್ತೆಯ ಬದಿಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಲಾರಿಯೊಂದು ಚಲಾಯಿಸಿ ಸಾರಿ ಸಮೇತ ಚಾಲಕ ಪರಾರಿಯಾದ ಕೆಲವೇ ಕ್ಷಣದಲ್ಲಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕೇರಳದ ಪೊನ್ನಪ್ಪನ್(ವ.50) ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿಯು ಮೂಲತಃ ಕೇರಳದವನಾಗಿದ್ದು, ಕಳೆದ 15 ವರ್ಷದಿಂದ

ಹರೇಕಳ : ಆಕಸ್ಮಿಕ ಬೆಂಕಿ ಅವಘಡ, ಮನೆ ಸಂಪೂರ್ಣ ಭಸ್ಮ

ಉಳ್ಳಾಲ : ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ರ ಮನೆಯಲ್ಲಿ ಇಂದು ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಮನೆಯು ಸಂಪೂರ್ಣವಾಗಿ ಕರಕಲವಾಗಿದ್ದು, ಯಾವುದೇ ಪ್ರಾಣ ಹಾನಿ ನೋವು ಸಂಭವಿಸಿರುವುದಿಲ್ಲ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿರುವುದಿಲ್ಲ, ಆದರೆ ಮನೆಯು ಸಂಪೂರ್ಣವಾಗಿ