Home Archive by category Fresh News (Page 324)

ಕಲಶ ಕಟ್ಟುತ್ತಿದ್ದಾಗ ರಥದಿಂದ ಜಾರಿ ಬಿದ್ದು ವ್ಯಕ್ತಿ ಸಾವು

ವಿಜಯಪುರದ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೊಲ್ಲಾಳೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಸಾಹೇಬಪಟೇಲ್ ಖಾಜಾಪಟೇಲ್ ಎಂಬವರು ರಥದ ತುತ್ತ ತುದಿಯಲ್ಲಿ ಕಲಶ ಕಟ್ಟುತ್ತಿದ್ದರು. ಈ ವೇಳೆ ಸಾಹೇಬಪಟೇಲ್ ಅವರು ಕಾಲು ಜಾರಿ ರಥದಿಂದ ಬಿದ್ದಿದ್ದಾರೆ

ಪುತ್ತೂರಿನಲ್ಲಿ ಪವಿತ್ರ ಗುರುವಾರ ಆಚರಣೆ

ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಏಪ್ರಿಲ್ 2 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 6 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ .ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್

ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4ರ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಎ.16ರಂದು ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ನಡೆಯಲಿರುವ ನಾಲ್ಕನೆ ಸೀಸನ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಆಮಂತ್ರಣ ಪತ್ರಿಕೆ

ಬೈಂದೂರು ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ: ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ

ಬೆಳಿಗ್ಗೆ ಗಂಟೆ 7-00ಕ್ಕೆ, ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ಶತರುದ್ರಾಭಿಷೇಕದ ಸೇವಾಕರ್ತರು : ಶ್ರೀಮತಿ ಶೀಲಾ & ಶ್ರೀ ಜಯಶೀಲ ಶೆಟ್ಟಿ ಮತ್ತು ಮಕ್ಕಳು, ಘಟಪ್ರಭಾ, ಹಾಗೂ ರಥಬಲಿ, ಕ್ಷೇತ್ರಪಾಲ ಬಲಿ ,ರಥಾರೋಹಣ, ಶ್ರೀ ಮನ್ಮಹಾರಥೋತ್ಸವಮಹಾಅನ್ನಸಂತರ್ಪಣೆ ಸೇವಾಕರ್ತರು ಶ್ರೀಮತಿ ಶಾಂತ ಮತ್ತು ಶ್ರೀ ಕೃಷ್ಣ ಗಾಣಿಗ ಮತ್ತು ಮಕ್ಕಳು ಅಡಿಗಳಹಿತ್ತು, ಹೇರಂಜಾಲು. ಮಧ್ಯಾಹ್ನ 3ಗಂಟೆಗೆ ವಾದ್ಯಗೋಷ್ಠಿ, ಚಂಡೆವಾದನ ಸಂಜೆ 5-30ಕ್ಕೆ

ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಳ : ಹನುಮ ಜಯಂತಿ

ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ ಮತ್ತು ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.30ರ ಶ್ರೀ ರಾಮನವಮಿಯಂದು ಪ್ರಾರಂಭಗೊಂಡು, ಏಪ್ರಿಲ್ 6ರ ವರೆಗೆ ಹನುಮಾನ್ ಜಯಂತಿ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರದಿಂದ ನಡೆಯಿತು. ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ

ಏ.8ರಂದು ಪಣಪಿಲದಲ್ಲಿ ಜಯ ವಿಜಯ ಜೋಡುಕರೆ ಕಂಬಳ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ಹದಿಮೂರನೇ ವರುಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಏಪ್ರಿಲ್ 8ರಂದು ಸಂಜೆ ನಡೆಯಲಿದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ್ ಪಣಪಿಲ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. 4 ಎಕರೆ ಜಾಗದಲ್ಲಿ ಕಂಬಳ ನಡೆಯಲಿದ್ದು, ನೂತನವಾಗಿ 133.5 ಮೀ ಉದ್ದದ ಕರೆ ನಿರ್ಮಾಣಗೊಂಡಿದೆ. ಕೋಣಗಳನ್ನು ಕಟ್ಟಲು ತಂಪಾದ ಜಾಗ, ಉತ್ತಮ ನೀರಿನ ವ್ಯವಸ್ಥೆ,

ಮೂಡುಬಿದಿರೆ : ಪೊಲೀಸರಿಂದ ಪಥ ಸಂಚಲನ

ಮೂಡುಬಿದಿರೆ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ಆಯುಕ್ತ ಮನೋಜ್ ಕುಮಾರ್ ಹಾಗೂ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಆಲಂಗಾರು ಬಡಗು ಮಹಾಲೀಂಗೇಶ್ವರ ದೇವಸ್ಥಾನದ ಬಳಿಯಿಂದ ಮೂಡುಬಿದಿರೆ ಕನ್ನಡ ಭವನದವರೆಗೆ ಗುರುವಾರ ಸಂಜೆ ಪೊಲೀಸ ರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 80 ಜನ ಅಧಿಕಾರಿಗಳು ಮತ್ತು ಮೂಡುಬಿದಿರೆ ಪೊಲೀಸ್ ಠಾಣೆಯ

ಹಿರಿಯ ದೈವ ಪಾತ್ರಿ ಲಾಡಿ ಅಣ್ಣು ಶೆಟ್ಟಿ ನಿಧನ

ಮೂಡುಬಿದಿರೆ: ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ (78ವ)ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲಾಡಿ ಹಜಂಕಾಲಬೆಟ್ಟು, ಮಾರ್ನಾಡು, ತೋಡಾರು ಸಹಿತ ಜಿಲ್ಲೆಯ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್,

ಪುತ್ತೂರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ ದೇವಪ್ಪ ನೋಂಡಾ ನಿಧನ

ಪುತ್ತೂರು: ಪುತ್ತೂರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ, ಒಡಿಯೂರು ಸೊಸೈಟಿ ನಿರ್ದೇಶಕ ದೇವಪ್ಪ ನೋಂಡಾ ಅವರು ಎ.7 ರಂದು ಸ್ವಗೃಹದಲ್ಲಿ ನಿಧನರಾದರು. ದೇವಪ್ಪ ನೋಂಡಾ(74ವರ್ಷ)ಅವರ ಆರೋಗ್ಯದಲ್ಲಿ ಏರುಪೇರಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ :ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಆಗ್ರಹ

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ವಿಪಕ್ಷ ಸದಸ್ಯರು ಪುರಸಭೆಯಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿ ಮುಖ್ಯಾಧಿಕಾರಿಯವರನ್ನು ಆಗ್ರಹಿಸಿದರು, ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯನ್ನು ಗುರುತಿಸಿ ಸಮರ್ಪಕ ವಿತರಣೆಗೆ ಕ್ರಮ ಜರುಗಿಸಲಾಗುವುದು ಮತ್ತು ಅಗತ್ಯವಿರು ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಭರವಸೆಯನ್ನು