Home Archive by category Fresh News (Page 61)

ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮವು ನಡೆಯಿತು.ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಜೇಶ್ ಕೆ.ವಿ., ಅವರು ಆಗಮಿಸಿ ‘ನಾಗರಿಕ ಶಿಷ್ಟಾಚಾರ’ದ ಕುರಿತು ಮಾಹಿತಿಯನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕಡಬ ತಾಲೂಕಿನ ವಕೀಲರಾದ ಶ್ರೀಮತಿ

ಕೊಕ್ಕಡ: ರದ್ದಾದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ!

ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ಬೇಬಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು.ಉಪಾಧ್ಯಕ್ಷ ಪ್ರಭಾಕರ ಗೌಡ ಹಾಗೂ ಎಲ್ಲ ಸದಸ್ಯರ ಉಪಸ್ಥಿತಿಯಲ್ಲಿ ಸಭೆಯು ಆರಂಭಗೊಂಡಿತ್ತು. ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಚ್ಚಾ ರಸ್ತೆಗಳ ದುರಸ್ತಿಗಾಗಿ ನವಂಬರ್ ತಿಂಗಳಿನಿಂದ ಪ್ರತಿ ತಿಂಗಳು ನಿರ್ಣಯ ಕೈಗೊಂಡರೂ ಈವರೆಗೆ ಅನುಷ್ಠಾನ ಆಗಿಲ್ಲ ಎಂದು ನಿಕಟ ಪೂರ್ವ ಅಧ್ಯಕ್ಷರಾದ ಹಾಲಿ ಸದಸ್ಯ ಯೋಗೀಶ್ ಅಲಂಬಿಲರವರು ಅಧ್ಯಕ್ಷರಲ್ಲಿ ಪ್ರಶ್ನೆ

ಕುಂದಾಪುರ: ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಕುಂದಾಪುರ:ಬೈಂದೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 4ನೇ ವರ್ಷದ ರಾಜ್ಯ ಮಟ್ಟದ 40 ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಹಗಲು ರಾತ್ರಿ ಪಂದ್ಯಾಟ ಬೈಂದೂರು ಟ್ರೋಫಿ-2024 ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು. ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅವರು ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಂಚಜನ್ಯ ಕೋಟೇಶ್ವರ ಪ್ರಥಮ ಸ್ಥಾನವನ್ನು ಪಡೆಯಿತು,ಶೆಟ್ಟಿ ಎಂಪಿಯರ್ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದೆ.ಪ್ರಥಮ ಬಹುಮಾನವಾಗಿ 1,00,006 ಹಾಗೂ

ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬಲಿಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಶ್ರೀ ದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ, ಉಳ್ಳಾಕುಲು ದೈವಕ್ಕೆ ಬೆಳ್ಳಿಯ ಆಭರಣ ಸಮರ್ಪಣೆ ನಡೆಯಿತು. ಶತಮಾನದ ಬಳಿಕ ದೇವಳಕ್ಕೆ ಬ್ರಹ್ಮರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಸುಮಾರು ಎಂಟು ಲಕ್ಷ ರೂ ವೆಚ್ಚದಲ್ಲಿ ದೇವಳದ ವತಿಯಿಂದ ಉತ್ಸವ ಬಿಂಬಕ್ಕೆ

ಬಂಟ್ವಾಳ: ನೆಚ್ಚಿನ ಶಿಕ್ಷಕಿಗೆ ನಿವೃತ್ತಿ ಸಂದರ್ಭ ಬಂಗಾರದ ಮಾಲೆ ನೀಡಿದ ಹಳೆ ವಿದ್ಯಾರ್ಥಿಗಳು

ಬಂಟ್ವಾಳ: ಕಳೆದ 3 ದಶಕಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಗೆ ಅವರ ನಿವೃತ್ತಿ ವೇಳೆ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಸುಮಾರು 2 ಲಕ್ಷ ಹತ್ತು ಸಾವಿರ ರೂ. ವೌಲ್ಯದ 33 ಗ್ರಾಂನ ಬಂಗಾರದ ಮಾಲೆ ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಪಾಣೆ ಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಜಯಲಕ್ಷ್ಮೀ ಆರ್. ಭಟ್ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ

ಹೃದಯಾಫಾತ ಸೂಚಕ ಕಿಣ್ವಗಳು

ಹೃದಯ ಎನ್ನುವುದು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗವಾಗಿದ್ದು, ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹಾ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ ಕರೆಯುತ್ತಾರೆ. ಹೃದಯಾಫಾತ ಆದ ಕೂಡಲೇ ಈ ಕಿಣ್ವಗಳು

ಕದ್ರಿ ಭೌಧದಿಂದ ಮಾಧ್ವಕ್ಕೆ

ಸಂಕ್ರಾಂತಿಯೊಂದಿಗೆ ನಾನಾ ದೈವ ದೇವರುಗಳ ಉತ್ಸವ ಗರಿಗೆದರುತ್ತದೆ. ಮಂಗಳೂರಿನ ಕದ್ರಿ ಆಲಯದಲ್ಲೂ ಉತ್ಸವದ ರಂಗು ಎದ್ದಿದೆ. ಹಿಂದೆಲ್ಲ ದೈವ ದೇವರುಗಳ ಉತ್ಸವ ಎಂದರೆ ಕೆಂಪು ಬಿಳಿಯ ಬಟ್ಟೆಯ ಅಲಂಕಾರ ಇರುತ್ತಿತ್ತು. ಈಗೆಲ್ಲ ಕೇಸರಿ ವಿಜಯ; ಭಗವಾ ಬಾವುಟ. ಕದ್ರಿ ಮಂಜುನಾಥ ಎಂದಾಗ ಕದರಿಕಾ ವಿಹಾರ ಎನ್ನುವರು. ಈ ಕದ್ರ, ಕದ್ರಾ, ಕದರಿ ಎಂಬ ಸ್ಥಳನಾಮ ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ, ಆಂಧ್ರದ ಹಲವು ಕಡೆ ಇವೆ. ಇವೆಲ್ಲ ಗುಡ್ಡದಿಂದ ಇಳಿದ ಕಡಿದು ಸ್ಥಳಗಳು. ಅದೇ ಕದ್ರಿ,

ಸಂಗಬೆಟ್ಟು: ಸಾರ್ವಜನಿಕ ರಸ್ತೆ ಸಂಚಾರಕ್ಕೆ ತಡೆ

ಬಂಟ್ವಾಳ: ಸಾರ್ವಜನಿಕ ರಸ್ತೆಗೆ ತಡೆವೊಡ್ಡಿದ ಪ್ರಕರಣವೊಂದು ಸಂಗಬೆಟ್ಟು ಗ್ರಾಮದಲ್ಲಿ ನಡೆದಿದ್ದು ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರದ ನಿವಾಸಿಗಳು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿ ಪಲ್ಕೆ ಮುಗೇರು ಎಂಬಲ್ಲಿ ನೂರಾರು ವರ್ಷಗಳ ಕಾಲದಿಂದ ಸಾರ್ವಜನಿಕರು, ಶಾಲಾ ಮಕ್ಕಳು, ನಿತ್ಯ ವ್ಯವಹಾರ ವಹಿವಾಟುಗಳಿಗೆ ಹೋಗುವವರು, ಸ್ಥಳೀಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ

ಹೆಮ್ಮಾಡಿ: ಆರ್ಯ ಬಿಲ್ಡ್ ಕೇರ್ ಸಂಸ್ಥೆ ಉದ್ಘಾಟನೆ

ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್

*ಬಂಟ್ವಾಳ: ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ತುಂಬೆ ನೇತ್ರಾವತಿ ನದಿ ತೀರದಲ್ಲಿ ಸುಮಾರು ೫ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.೧೩ರಿಂದ ೨೩ರವರೆಗೆ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಧ್ವಜಸ್ತಂಭ ಪ್ರತಿಷ್ಠೆ ಸಹಿತ ವಾರ್ಷಿಕ ಜಾತ್ರಾ ಮಹೋತ್ಸವವು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.