Home Archive by category Fresh News (Page 65)

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಹಿಳಾ ಶಕ್ತಿ ಪಯಣ ಹೆಚ್ಚಳ

ಮಂಗಳೂರು ಮತ್ತು ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಶಕ್ತಿ ಯೋಜನೆಯ ಅನುಕೂಲ ಪಡೆದು 7 ತಿಂಗಳಲ್ಲಿ ಪಯಣಿಸಿದ ಮಹಿಳೆಯರಿಗೆ 2.8 ಕೋಟಿ ಟಿಕೆಟ್ ನೀಡಿಕೆ ಆಗಿದೆ. ಈ ಟಿಕೆಟ್‌ಗಳ ಒಟ್ಟು ದರ 9.15 ಕೋಟಿ ರೂಪಾಯಿ. ಆರಂಭದ ಜೂನ್ ತಿಂಗಳಿನಲ್ಲಿ 20,87,658 ಇದ್ದ ಟಿಕೆಟ್ ನೀಡಿಕೆ ಹೆಚ್ಚುತ್ತ ಬಂದಿದ್ದು ಜನವರಿ ತಿಂಗಳಲ್ಲಿ ತಿಂಗಳು ಮುಗಿಯುವುದಕ್ಕೆ

ಮಂಗಳೂರು: ಕುಳಾಯಿ ಕಿರುಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಭೇಟಿ, ಪರಿಶೀಲನೆ

ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿಯು ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಬ್ರೇಕ್ ವಾಟರ್ ನಿರ್ಮಾಣ ಅವೈಜ್ನಾನಿಕವಾಗಿದ್ದು, ನಾಡದೋಣಿಕೆ ಪೂರಕವಾಗಿ ನಿರ್ಮಿಸಲಾಗುತ್ತಿಲ್ಲ. ಮೀನುಗಾರರು ಪ್ರಾಣ ಭೀತಿಯಲ್ಲಿದ್ದಾರೆ ಎಂದು ನಾಡದೋಣಿ ಮೀನುಗಾರರು ಹಾಗೂ ಸಾಂಪ್ರದಾಯಿಕ ಮೂಲ ಮೀನುಗಾರರ ಸಂಘಟನೆಗಳು ಸಂಸದ ನಳಿನ್ ಕುಮಾರ್ ಕಟೀಲ್ ಮುಂದೆ ಅಸಮಾಧಾನ ತೋಡಿಕೊಂಡರು. ಕುಳಾಯಿಯ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್

ಯಶಸ್ವಿನಿ ಆರೋಗ್ಯ ವಿಮೆ ನವೀಕರಣಕ್ಕೆ ಫೆ.28 ಕೊನೆಯ ದಿನಾಂಕ

ಬೆಳ್ಳಾರೆ. ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಮತ್ತು ಹೊಸ ನೋಂದಣಿಗೆ 28 ಫೆಬ್ರವರಿ 2024 ಕೊನೆಯ ದಿನಾಂಕವಾಗಿರುತ್ತದೆ. *ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಬೇಕಾಗಿರುವ ದಾಖಲೆಗಳು:*ಎಲ್ಲಾ ನೋಂದಾಯಿತ ಸದಸ್ಯರ ಫೋಟೋ*ಹೊಸ ಸದಸ್ಯರ ಸೇರ್ಪಡೆ ಇದ್ದಲ್ಲಿ ಅವರ ಆಧಾರ್ ಪ್ರತಿ ಹಾಗೂ ರೇಷನ್ ಕಾರ್ಡು ಪ್ರತಿ*ಹೊಸ ನೋಂದಣಿಗೆ ಬೇಕಾಗುವ ದಾಖಲೆಗಳು*ರೇಷನ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ ಆಧಾರ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ

ಆಲಂಕಾರು: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ಸೈನ್ಸ್ ಕಾರ್ಯಾಗಾರ

ಆಲಂಕಾರು :ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಪುತ್ತೂರು ಇದರ ಸಹಯೋಗದಲ್ಲಿ, ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿ ಮತ್ತೆ ಮತ್ತು ಡಾಟಾ ಸೈನ್ಸ್ ನ ಕುರಿತಾದ ಕಾರ್ಯಾಗಾರ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಜೀವಿತ್, ಆಕಾಶ್ ಪಿ, ಧನುಷ್ ಕುಮಾರ್, ಗಗನ್ ಕೆ, ಅಶ್ವಿಜ ಯು ಪೈ ಹಾಗೂ ಅನುಶ್ರೀ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸುಮಾರು 64

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೈದ್ಯಕೀಯ ನೆರವು

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕಡಬ ತಾಲೂಕು ನೆಲ್ಯಾಡಿ ವಲಯ, ಮಾದೇರಿ ಒಕ್ಕೂಟದ, ನೇತ್ರ ಶ್ರೀ ತಂಡದ ಸದಸ್ಯರಾದ ಶ್ರೀ ಲತಾರವರಿಗೆ ಅನಾರೋಗ್ಯ ನಿಮಿತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 25000/- ರೂಪಾಯಿ ಸಹಾಯಧನದ ಮಂಜೂರಾತಿ ಪತ್ರವನ್ನು, ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿನ್ ಪಿ.ಜೆ ರವರು ಶ್ರೀಲತಾರವರ ಪರವಾಗಿ ಅವರ ಪತಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಲಯ

ಪುತ್ತೂರು: ಅನಾರೋಗ್ಯದಿಂದ ಪುತ್ತೂರಿನ ಯುವತಿ ಮೃತ್ಯು

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಪುತ್ತೂರು ನೆಹರೂನಗರದ ದಿ. ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29) ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದರು.ಲಿವರ್ ಸಮಸ್ಯೆಯಿಂದಾಗಿ ಐಶ್ವರ್ಯ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಿವರ್ ಬದಲಾವಣೆಯಿಂದ ಮಾತ್ರ ಐಶ್ವರ್ಯಳ ಜೀವ ಉಳಿಸಲು ಸಾಧ್ಯ ಎಂದು

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ನೋಟೀಸು

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ಹೆಚ್ಚುವರಿ ಸಂಬಳ ಹಿಂತಿರುಗಿಸುವಂತೆ ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ನೋಟೀಸು ನೀಡಿರುವುದು ಸುದ್ದಿ. ಆದರೆ ಆದಾಯ ತೀರಾ ವ್ಯತ್ಯಾಸದ ಹಲವು ಆಲಯಗಳಿಗೆ ನೋಟೀಸು ನೀಡಿರುವುದು ಕಂಡು ಬಂದಿದೆ. ಕಣ್ಣನ್ ಅರ್ಚಕರಾಗಿರುವ ಆಲಯದ ವಾರ್ಷಿಕ ಆದಾಯ ಕೊನೆ ದರ್ಜೆ ದೇವಾಲಯದ ಆದಾಯಕ್ಕಿಂತಲೂ ಕಡಿಮೆ ಇದೆ. ಆದ್ದರಿಂದ ರೂ. 7,500 ರೂಪಾಯಿ ಸಂಬಳ ಪಡೆಯುವ ಅವರು ಹೆಚ್ಚುವರಿ ತಿಂಗಳ ರೂ. 4,500 ಒಟ್ಟು 4,74,000

ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ

ಜನವರಿ 24 ಸಮಾಜವಾದಿ ಕರ್ಪೂರಿ ಠಾಕೂರ್ ಬದುಕಿದ್ದರೆ ನೂರು ವರುಷ. ಅದರ ಮೊದಲ ದಿನ ಜನವರಿ 23ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದರು. 1954ರ ಜನವರಿ 2ರಲ್ಲಿ ಆರಂಭವಾದುದು ಭಾರತ ರತ್ನ ಪ್ರಶಸ್ತಿ. ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದೆ. 1966ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡುವುದು ಆರಂಭವಾಗಿ ಕರ್ಪೂರಿ ಠಾಕೂರ್ ಸೇರಿ 15 ಮಂದಿಗೆ

ಉಡುಪಿ: ಬನ್ನಂಜೆ ಬಿಲ್ಲವ ಸಂಘಕ್ಕೆ ನಿಂದನೆ: ಕ್ರಮಕ್ಕೆ ಒತ್ತಾಯಿಸಿ ಎಸ್‍ಪಿಗೆ ಮನವಿ

ಉಡುಪಿಯ ಬನ್ನಂಜೆ ಬಿಲ್ಲವ ಸಂಘದ ವಿರುದ್ದ ಕಿಡಿಗೇಡಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದ್ದು, ಬಿಲ್ಲವ ಸಮಾಜ ಬಾಂಧವರು ಇದರಿಂದ ಆಕ್ರೋಶ ಗೊಂಡಿದ್ದು, ಕೃತ್ಯ ಎಸಗಿದ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ, ಉಡುಪಿ ಪೆÇಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಭಾಜೋನ್ಯಾಯಾ ಅಸ್ಸಾಂ ಯಾತ್ರೆ ರಾಹುಲ್‍ ಗಾಂಧಿಯಿಂದ ಮತ್ತೆ ಬಿಜೆಪಿ ಖಂಡನೆ

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಗೌಹತಿಯಲ್ಲಿ ಪೋಲೀಸರು ರಾಹುಲ್ ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಭಾರತ್ ಜೋಡೋ ನ್ಯಾಯ ಯಾತ್ರೆಯು ಬುಧವಾರ ಬಾರ್‍ಪೇಟ್‍ನತ್ತ ಮುನ್ನಡೆಯಿತು. ರಾಹುಲ್ ಗಾಂಧಿ ಅವರಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮೊದಲಾದವರ ವಿರುದ್ಧ ಹಿಂಸೆಗೆ ಪ್ರಚೋದನೆ, ಉದ್ದೇಶಪೂರ್ವಕ ಟ್ರಾಫಿಕ್ ಜಾಮ್, ಸಾರ್ವಜನಿಕ ಆಸ್ತಿಗೆ ಹಾನಿ ಎಂದೆಲ್ಲ ಅಸ್ಸಾಂ