Home Archive by category Fresh News (Page 88)

ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಇಂದು ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಧಾನಿಯವರಿಗೆ ವಿವರಿಸಿದ ಮುಖ್ಯಮಂತ್ರಿಗಳು ರೂ. 18,177.44 ಕೋಟಿ ರೂಪಾಯಿ ತಕ್ಷಣದ ಪರಿಹಾರಕ್ಕೆ ಮನವಿ ಮಾಡಿದರು. ಇನ್ಪುಟ್ ಸಬ್ಸಿಡಿ ರೂ. 4,663.12 ಕೋಟಿ ತುರ್ತು ಪರಿಹಾರ ರೂ. 12,577.86 ಕೋಟಿ,

ಸಂಸದರ ಅಮಾನತು 141ಕ್ಕೆ ಏರಿಕೆ

ಸಂಸತ್ ಭದ್ರತಾ ಲೋಪದ ಬಗೆಗೆ ಗೃಹ ಮಂತ್ರಿ ಅಮಿತ್ ಶಾರಿಂದ ವಿವರಣೆ ಬಯಸುತ್ತಿರುವ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸದ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ 49 ಲೋಕ ಸಭಾ ಸದಸ್ಯರನ್ನು ಅಮಾನತು ಮಾಡಿದರು. ಇದರಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 141ಕ್ಕೆ ಏರಿದೆ. ಉಕ್ಕಿನ ಮನುಷ್ಯನೋ ಸೊಕ್ಕಿನ ಮನುಷ್ಯನೋ ಎಂದು ಅಮಾನತುಗೊಂಡವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳನ್ನು ಟೀಕಿಸಿದ್ದಾಗಿಯೂ ಹೇಳಲಾಗಿದೆ. ಸಂಸತ್ತಿನ ಹೊರಗೆ ಅಮಾನತುಗೊಂಡ ಸರ್ವ

ಚೀನಾದ ಗನ್ಸು ಹೈಡಾಂಗ್ ಬಳಿ ಭೂಕಂಪ

ಚೀನಾದ ಗನ್ಸು ಪ್ರಾಂತ್ಯ ಮತ್ತು ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರಗಳ ನಡುವೆ ನೆಲನಡುಕ ಸಂಭವಿಸಿ 120ರಷ್ಟು ಜನರು ಜೀವ ತೆತ್ತುದಲ್ಲದೆ 400ಕ್ಕೂ ಹೆಚ್ಚು ಜನರು ಗಾಯಗೊಂಡರು. ಗನ್ಸು ಪ್ರಾಂತ್ಯದಲ್ಲಿ 105 ಜನರು ಪ್ರಾಣಕ್ಕೆ ಎರವಾದರೆ, ನೆರೆಯ ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರದಲ್ಲಿ 11 ಜನರು ಸಾವಿಗೀಡಾಗಿದ್ದಾರೆ. ಅಧಿಕೃತವಾಗಿ 116 ಜನರು ಸತ್ತುದಾಗಿಯೂ, 400ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವೆರಡೂ ಗುಡ್ಡಗಾಡು ಪ್ರಾಂತ್ಯವಾಗಿದ್ದು,

ಜೂಜಾಟದ ಕೋಳಿ ಅಂಕಕ್ಕೆ ದಾಳಿ : ಗ್ರಾಮ ಪಂಚಾಯತ್ ಸದಸ್ಯನ ಬಂಧನ

ಹಿರೇಬೆಟ್ಟು ಗ್ರಾಮದ ದೂಮಾವತಿ ದೈವಸಾನದ ಬಳಿಯ ಕಬ್ಯಾಡಿ ಕಂಬಳ ಗದ್ದೆಯ ಸೆರಗಲ್ಲಿ ಜೂಜು ಪಣವೊಡ್ಡಿ ಕೋಳಿ ಅಂಕ ನಡೆಸಿದ್ದ 11 ಮಂದಿಯನ್ನು ಮಣಿಪಾಲ ಠಾಣೆಯ ಪೋಲೀಸರು ಕೋಳಿಗಳ ಸಹಿತ ಬಂಧಿಸಿದ್ದಾರೆ. 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್‍ನ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಬಂಧಿತ ಆರೋಪಿಗಳು. ಇವರಿಂದ 5,450 ರೂಪಾಯಿ ಮೌಲ್ಯದ 10 ಹುಂಜ, ಜೂಜಾಡಿದ 2,800 ರೂಪಾಯಿ

ರಾಮ ಮಂದಿರ ಉದ್ಘಾಟನೆಗೆ ಬರಬೇಡಿ: ಅಡ್ವಾಣಿ, ಜೋಶಿಯವರಿಗೆ ಮಂದಿರ ಟ್ರಸ್ಟ್ ಮನವಿ

ರಾಮ ಮಂದಿರ ಉದ್ಘಾಟನೆಗೆ ದಯವಿಟ್ಟು ಬರಬೇಡಿ ಎಂದು ರಾಮ ಮಂದಿರ ಹೋರಾಟದ ಪ್ರಮುಖರು ಮತ್ತು ಬಿಜೆಪಿ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ರಾಮ ಮಂದಿರ ಟ್ರಸ್ಟ್. ಇದು ಸ್ವಲ್ಪ ವಿವಾದಕ್ಕೆ ಕಾರಣವಾಗುತ್ತಲೇ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅವರು ಇಬ್ಬರು ಹಿರಿಯರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಕ್ಷಗಟ್ಟಲೆ ಜನರು ಸೇರುವ ತಾಣದಲ್ಲಿ ಅವರನ್ನು ನೋಡಿಕೊಳ್ಳಲು

ಸಂಸತ್ತಿನ ಒಳಗೆ ಭದ್ರತಾ ವೈಫಲ್ಯದ ಬಗೆಗೇಕೆ ಮೂಕರು? : 78 ಸಂಸದರ ಅಮಾನತು ಮೂಲಕ ಬಿಜೆಪಿ ಉತ್ತರ

ಸಂಸತ್ ಭದ್ರತಾ ವೈಫಲ್ಯದ ಬಗೆಗೆ ಗೃಹ ಮಂತ್ರಿ ಸಂಸತ್ತಿನಲ್ಲಿ ಉತ್ತರ ನೀಡಲೇಬೇಕು ಎಂದು ಪ್ರತಿಪಕ್ಷಗಳವರು ಒತ್ತಾಯಿಸಿದ್ದರಿಂದ ಬಿಜೆಪಿಯ ಉತ್ತರವಾಗಿ ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಎಲ್ಲ ಸೇರಿ 91 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಇನ್ನೂ ಕೆಲವು ಹೇಳಿಕೆಗಳು ಹೊರಬಿದ್ದಿವೆ.ಲೋಕ ಸಭೆಯಿಂದ 33, ರಾಜ್ಯ ಸಭೆಯಿಂದ 45 ಎಂದು ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೋಯ್, ಟಿ. ಆರ್. ಬಾಲು, ಎ.

ನೆಲ್ಯಾಡಿ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರಿನಿಗೆ ಗಂಭೀರ ಗಾಯ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಚರ್ಚ್ ಬಳಿ ಕಾರು ಹಾಗೂ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಕೈಗೆ, ಕಾಲಿಗೆ ತೀವ್ರ ಸ್ವರೂಪದ ಗಾಂiÀÉ್ಗೂಂಡ ಘಟನೆ ನಡೆದಿದೆ. ಕಡಬ ತಾಲೂಕು ಬಲ್ಯ ಗ್ರಾಮದ ಕಂಚಿನಡ್ಕ ಮನೆಯ ಬೈಕ್ ಸವಾರ ಆನಂದ ಶೆಟ್ಟಿ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಬೈಕ್

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಮೃತರು. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಮಹೇಶ್ 43 ನಂಬರಿನ ಸಿಟಿ ಬಸ್‌ನಲ್ಲಿ ಚಾಲಕರಾಗಿದ್ದ ಇವರು,  ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ

ಅಗ್ರಾರ್ ದರ್ಬೆಯಲ್ಲೊಂದು ಅಪರೂಪದ  ದೈವೀ ತಾಣ

ಮಂಗಳೂರು: ತುಳುನಾಡು ಸತ್ಯ, ಧರ್ಮ, ನ್ಯಾಯ, ನೀತಿಗಳ ನೆಲೆಬೀಡು. ಈ ನಾಡೇ ಆರಾಧನಾಲಯಗಳ ತವರೂರು. ಅದೆಷ್ಟೋ ದೈವಸ್ಥಾನಗಳು, ದೇವಸ್ಥಾನಗಳು, ಮಠ, ಮಂದಿರ, ಗುಡಿ, ಗರಡಿಗಳು, ಮಾಡಗಳು, ಬನಗಳು ತನ್ನ ಕಲೆ ಕಾರ್ಣಿಕ ಮೆರೆಯುತ್ತಾ ತುಳುನಾಡಿನ ಧಾರ್ಮಿಕ ಪರಂಪರೆಗೆ ಕೀರ್ತಿ ತಂದಿದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳ ಪೈಕಿ ತುಳುನಾಡಿನಲ್ಲಿ ಪುರಾಣ ಕಾಲಘಟ್ಟದಲ್ಲಿ ಮತ್ತು ಇತಿಹಾಸದಲ್ಲಿ  ವೈಭವದಿಂದ ಮೆರೆದ ಸಾನಿಧ್ಯವೊಂದು ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪ ದ

ಉಡುಪಿ: ತುಳು ಜಾನಪದ ಲೋಕ ಬರೆದಿಟ್ಟ ಬಾಬು ಅಮೀನ್: 80ರ ಪ್ರಾಯದ ಅಭಿನಂದನಾ ಸಮಾರಂಭ

ಉಡುಪಿ ಬನ್ನಂಜೆಯ ನಾರಾಯಣ ಗುರು ಭವನದ ಕೆ. ತೋಮ ಶ್ಯಾನುಭೋಗ ವೇದಿಕೆಯಲ್ಲಿ ನಡೆದ ಬನ್ನಂಜೆ ಬಾಬು ಅಮೀನ್ ಅವರಿಗೆ ೮೦ರ ಪ್ರಾಯದ ಅಭಿನಂದನಾ ಸಮಾರಂಭ ನಡೆಯಿತು. ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ಬಾಬು ಅಮೀನರನ್ನು ಜಾನಪದ ಅಧ್ಯಯನ ವೀರ ಎಂದು ಬಣ್ಣಿಸಿದರು. ಬನ್ನಂಜೆಯವರ ಜಾನಪದ ಬರಹ ಸಂಪತ್ತು ಬೆಲೆ ಕಟ್ಟಲಾಗದ್ದು ಎಂದು ಅವರು ಕೊನೆಯಲ್ಲಿ ನಡೆದ ಅಭಿನಂದನಾ ನುಡಿ ಭಾಷಣದಲ್ಲಿ ಹೇಳಿದರು. ಬಾಬು ಅಮೀನರ ಮುದ್ರಿತ ಪುಸ್ತಕಗಳಿಂದಲೇ ಅವರ ಅಕ್ಷರ ತುಲಾಬಾರ