Home Archive by category HASANA

ಪೌರ ಕಾರ್ಮಿಕರಿಗೆ ಸಂಸದರಿಂದ ಹೆಲಿಕಾಪ್ಟರ್ ಪ್ರವಾಸದ ವಿಶೇಷ ಅವಕಾಶ

ಹಾಸನ: ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರವಾಸದಲ್ಲಿ ನಗರ ಸ್ವಚ್ಛತೆಗೆ ದಿನರಾತ್ರಿ ಶ್ರಮಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾರ್ಮಿಕರನ್ನು ಸಂಸದ ಶ್ರೇಯಸ್ ಪಟೇಲ್ ಗೌರವಿಸಿದ್ದಾರೆ. ನಗರದ ಹೊಳಪಿಗಾಗಿ ಶ್ರಮಿಸುವ ಈ “ಮೌನ ಯೋಧರ” ಸೇವೆಗೆ ಕೃತಜ್ಞತೆಯ ಸೂಚಕವಾಗಿ, ಸಂಸದರು ನಾಲ್ವರು ಪೌರ

ಹಾಸನ : ಗಾಂಧಿಸ್ಮೃತಿ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್, ರಿ, ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ ಇವರ ಸಹಯೋಗದೊಂದಿಗೆ ಆಲೂರು ವೀರಶೈವ ಸಮುದಾಯ ಭವನದಲ್ಲಿ ಅಕ್ಟೋಬರ್ 02 ರ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿಸ್ಮೃತಿ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆಲೂರು ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಶ್ರೀ ಮಲ್ಲಿಕಾರ್ಜುನ್ ರವರು ದೀಪ ಬೆಳಗಿಸಿ ಧರ್ಮಸ್ಥಳ

ಹಾಸನ ಜಿಲ್ಲೆ:ಚಂದನಹಳ್ಳಿಯಲ್ಲಿ ಅಸಂಬದ್ಧ ಬಂಧ,ಮದುವೆಯಾದವನ ಸಂಗ ಒಲ್ಲದ ಮಹಿಳೆ ಕೆರೆಗೆ ವಾಹನ ನುಗ್ಗಿಸಿ ಒಲ್ಲದವಳ ಕೊಲೆ

ಕರ್ನಾಟಕದ ಹಾಸನ ಜಿಲ್ಲೆಯ ಚಂದನಹಳ್ಳಿಯಲ್ಲಿ ವಿವಾಹಿತನೊಬ್ಬನು ಮಹಿಳೆಯೊಬ್ಬಳ ಸಂಗ ಬಯಸಿದ್ದು, ಆಕೆ ನಿರಾಕರಿಸಿದಳೆಂದು ಕೆರೆಗೆ ವಾಹನ ನುಗ್ಗಿಸಿ ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.ಆರೋಪಿ ರವಿ ಮದುವೆಯಾಗಿರುವ ವ್ಯಕ್ತಿ. ಆತ ಬಯಸಿ ಆತನಿಂದ ಸಾವು ಕಂಡವಳು ತಿಳಿದವಳೇ ಆದ 32ರ ಶ್ವೇತಾ. ಗಂಡನಿಂದ ಬೇರಾಗಿರುವ ಶ್ವೇತಾ ತನ್ನ ಹೆತ್ತವರೊಂದಿಗೆ ಬದುಕುತ್ತಿದ್ದಳು. ಕಳೆದ ಕೆಲವು ತಿಂಗಳುಗಳಿಂದ ರವಿ ಆಕೆಯ ಬೆನ್ನು ಹತ್ತಿದ್ದ. ನನ್ನ ಲಿವಿಂಗ್ ಸಂಗಾತಿಯಾಗು.

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ

ಹಾಸನ: ನ.2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: ಐಜಿ ಡಾ. ಬೋರಲಿಂಗಯ್ಯ ಭೇಟಿ, ಪರಿಶೀಲನೆ

ಹಾಸನ: ನವೆಂಬರ್ 2ರಿಂದ ಆರಂಭವಾಗುವ ಹಾಸನಾಂಬೆ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಐಜಿ ಡಾ. ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.        ಹಾಸನ ಜಿಲ್ಲೆಯ ಡಿಸಿ ಸಿ. ಸತ್ಯಭಾಮ ಮತ್ತು ಎಸ್ಪಿ ಮಹಮದ್ ಸುಜೀತಾ ಹಾಗೂ ಉಪವಿಭಾಗಧಿಕಾರಿ ಮಾರುತಿ ಅವರಿಂದ ಮಾಹಿತಿ ಪಡೆದ ಮೈಸೂರು ದಕ್ಷಿಣ ವಲಯ ಐ.ಜಿ ಅವರು, ದೇವಸ್ಥಾನದ ಸರತಿ ಸಾಲು, ವಾಹನಗಳ ಪಾರ್ಕಿಂಗ್, ಭಕ್ತರು ಬಂದು ಹೋಗುವ ಸ್ಥಳ ಸೇರಿದಂತೆ ಇತರೆ ವ್ಯವಸ್ಥೆಯನ್ನು

ಅರಸೀಕೆರೆ: ಋಷಿಮುನಿಗಳು ಉಪಯೋಗಿಸುವ ಪಾದುಕೆ, ಕಮಂಡಲ ಪತ್ತೆ

ಹಾಸನ ಜಿಲ್ಲೆ ಅರಸೀಕೆರೆ ತಿಪಟೂರು ನ್ಯಾಷನಲ್ ಹೈವೆ ಪಕ್ಕದ ಹೊನ್ನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಋಷಿಮುನಿಗಳು ಉಪಯೋಗಿಸುವಂತ ವಸ್ತುಗಳು ಸರಿಸಮಾನವಾಗಿ ಜೋಡಿಸಿರುವ ರೀತಿಯಲ್ಲಿ ಕಂಡುಬಂದಿದೆ. ಬೋರೇಗೌಡ ಎಂಬರಿಗೆ ಸೇರಿದ ಜಮೀನಿನಲ್ಲಿ ಈ ವಿಸ್ಮಯ ಘಟನೆ ನಡೆದಿದೆ. ತಕ್ಷಣ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 12 ಜೊತೆ ಪಾದುಕೆಗಳು ಹಾಗೂ 28 ಕಮಂಡಲಗಳು ಪತ್ತೆಯಾಗಿವೆ. ಈ ಅಚ್ಚರಿಯ ಘಟನೆಯನ್ನು ವೀಕ್ಷಿಸಲು ಜನರು ಸಾಲು ಸಾಲಾಗಿ ಬರುತ್ತಿದ್ದರು.

ಸಕಲೇಶಪುರ: ಭೀಕರ ಅಪಘಾತ-ಬೈಕ್ ಸವಾರರಿಗೆ ಗಂಭೀರ ಗಾಯ

ಸಕಲೇಶಪುರ ನಗರದ ಬಿಎಂ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾದ ಘಟನೆ ನಡೆದಿದೆ. ನಂತರ ಲಾರಿಯನ್ನು ಬಾಳುಪೇಟೆಯ ಹತ್ತಿರ ತಡೆದು ನಿಲ್ಲಿಸಿಲಾಗಿದೆ.    ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದಂತ ಮಂಜುಗೆ ಗಂಭೀರ ಗಾಯವಾಗಿದ್ದು ಇನ್ನೊರ್ವ ಯುವರಾಜ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ಇವರು ಜಮ್ಮನಹಳ್ಳಿ ಹಾಗೂ ಬಂದಿಹಳ್ಳಿಯವರು ಎಂದು ತಿಳಿದು ಬಂದಿದೆ. ಮಂಜುನಾಥ್ ಸ್ಥಿತಿ

ಆನೆ ದಾಳಿಯಿಂದ ಸಾವಿಗೀಡಾದ ಯುವಕನ ಕುಟುಂಬಕ್ಕೆ ಸಾಂತ್ವಾನ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆನೆ ದಾಳಿಯಿಂದ ಸಾವಿಗೀಡಾದ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಗೋಪಾಲಯ್ಯ ಅವರು ಹಾಸನ ಜಿಲ್ಲೆಯ ಆನೆ ಮಾನವ ಸಂಘರ್ಷ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಹಿರಿಯ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ನಿಯಂತ್ರಣ ಕ್ರಮಗಳ ಕುರಿತು ವರದಿ