Home Archive by category mangaluru (Page 6)

ಮುಲ್ಕಿ ತಾಲೂಕು ಸೌಧವನ್ನು ತಕ್ಷಣ ಉದ್ಘಾಟಿಸಿ ಕೇಂದ್ರ ಸಚಿವ ಎಚ್. ಡಿ. ಕೆಗೆ ಮನವಿ

ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷರಾದ Er.ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಮುಲ್ಕಿ ಜನತೆಯ ಬಹುದಿನಗಳ ಕನಸಾದ ಮುಲ್ಕಿ ತಾಲೂಕು ಸೌಧವನ್ನು ತಕ್ಷಣ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಅರ್ಪಿಸುವಂತೆ, ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ

ತುಳು ಯಕ್ಷಗಾನ ಪ್ರಸಂಗ : ಬಂಗಾಡಿಯವರು ಅಗ್ರಗಣ್ಯರು; ಕೊಳ್ತಿಗೆ ನಾರಾಯಣ ಗೌಡ

ಮಂಗಳೂರು: ತನ್ನ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿ ಆ ಮೂಲಕ ಅಪಾರ ತುಳು ಪ್ರೇಕ್ಷಕ ವರ್ಗದ ಸೃಷ್ಟಿಗೆ ಕಾರಣವಾದವರು ಅನಂತರಾಮ ಬಂಗಾಡಿಯವರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರು ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷ ಪ್ರತಿಭೆ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾದ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡದಲ್ಲಷ್ಟೇ

4 ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವಪ್ರಸಾದ್ (55), ಕುಟ್ರುಪ್ಪಾಡಿ ಗ್ರಾಮ, ಕಡಬ ತಾಲೂಕು. ಅವರ ಹಿರಿಯ ಮಗಳು ಶಿಲ್ಪಾ (28) 4 ತಿಂಗಳ ಹಿಂದೆ ಮನೋಜ್‌ ಎಂಬಾತನೊಂದಿಗೆ ರೆಜಿಸ್ಟರ್‌ ಮದುವೆಯಾಗಿದ್ದಳು. ಮದುವೆಯ ನಂತರ ದಂಪತಿ ರಾಮಕುಂಜ ಗ್ರಾಮದಲ್ಲಿ ವಾಸವಿದ್ದು, ಶಿಲ್ಪಾ ಕೆಲಸಕ್ಕೆ ಕಡಬಕ್ಕೆ ಬರುತ್ತಿದ್ದಳು. 08.01.2026 ರಂದು ಸಂಜೆ ಶಿಲ್ಪಾ ವಿಷ ಸೇವಿಸಿದ್ದಾಗಿ ಮಾಹಿತಿ ಬಂದಿದ್ದು, ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆ, ವೆನ್ಲಾಕ್‌ ಹಾಗೂ ಎನೆಪೋಯ

ಶ್ರೀ ಗುರುಪರಾಶಕ್ತಿ ಮಠ, ಮರಕಡ ಮಡ್ಯಾರು ಕ್ಷೇತ್ರದಲ್ಲಿ ಸೋಮವಾರ ಮಹಾ ಆರಾಧನೋತ್ಸವ

ಮಂಗಳೂರು: ಮಡುಗಟ್ಟಿದ ಹೃದಯದೊಳಗೆ ‘ತಾಯಿ’ಋ ಎಂಬ ಎರಡಕ್ಷರದಿ ನಿತ್ಯ ಸಂಚಲನ ಮೂಡಿಸಿ, ಭಾವ ಪರವಶತೆಯ ಉತ್ತುಂಗತೆಯತ್ತ ಕೊಂಡೊಯ್ದು,ಅನಂತತೆಯ ಹೂರಣವೇ ತಾನಾದರೂ ನಮ್ಮನೊಡನಾಡಿಗಳಾಗಿಸಿ, ಮಾಯಾತೀತನೇ ತಾನಾಗಿ ಮಾಯೆಯೊಳಗಿನ ಸೊಗಡ ಬಿತ್ತರಿಸಿ, ಸಂಘತ್ವದೊಳಗೆ ನಿತ್ಯ ನಿರಂತರ ಪ್ರೀತಿಯ ಹೊನಲನ್ನೇ ಹರಿಸಿದ ಸ್ವಾಮಿ,ಆರಾಧ್ಯ ದೈವತ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ದಿವ್ಯ ಸಾನಿಧ್ಯ ನೆಲೆಗೊಂಡಿರುವ ಮಡ್ಯಾರು ಶ್ರೀ

ಶಿರಾಡಿ: ಮದ್ಯಪಾನ ವ್ಯಸನ ವ್ಯಕ್ತಿ ಪ್ಲಾಸ್ಟಿಕ್ ಬೆಲ್ಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಬರೆಮೇಲು ಎಂಬಲ್ಲಿ ಅಮಲು ಪದಾರ್ಥಗಳ ವ್ಯಸನಕ್ಕೆ ಮತ್ತೊಂದು ಜೀವ ಬಲಿಯಾದ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ವಿಪರೀತ ಮದ್ಯಪಾನ ಹಾಗೂ ಅಮಲು ಪದಾರ್ಥ ಸೇವನೆಯ ಚಟಕ್ಕೆ ಒಳಗಾಗಿದ್ದ ಮಂಜು ನಾಯ್ಕ (49) ಎಂಬವರು ಪ್ಲಾಸ್ಟಿಕ್ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಂಜು ನಾಯ್ಕ ಅವರು ಮನೆಯ ಮೇಲ್ಭಾಗದ ಸಿಮೆಂಟ್ ಕಿಟಕಿಯ ತೂತಿಗೆ ಪ್ಲಾಸ್ಟಿಕ್ ಬೆಲ್ಟ್‌ನ ಒಂದು ತುದಿಯನ್ನು ಕಟ್ಟಿ,

ಅಲೋಶಿಯಸ್ ವಿವಿಯಲ್ಲಿ ಕೌನ್ಸೆಲಿಂಗ್ ಮತ್ತು ಮನೋವಿಜ್ಞಾನ ಡಿಪ್ಲೊಮಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜೈಲು ಸಚಿವಾಲಯದ ಸ್ವಯಂಸೇವಕರಿಗಾಗಿ ವಿನ್ಯಾಸಗೊಳಿಸಲಾದ ‘ಕೌನ್ಸೆಲಿಂಗ್ ಮತ್ತು ಮನೋವಿಜ್ಞಾನ’ ದಲ್ಲಿ ನಾಲ್ಕು ತಿಂಗಳ ಆನ್‌ಲೈನ್ ಡಿಪ್ಲೊಮಾ ಕೋರ್ಸನ್ನು ಮಂಗಳೂರಿನ ಬಿಷಪ್ ರೆ. ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಜನವರಿ 5, 2026 ರಂದು ವಿವಿಯ ಸಭಾಂಗಣದಲ್ಲಿ ಉದ್ಘಾಟಿಸಿದರು. ಈ ಕೋರ್ಸನ್ನು ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಕಾರ್ಮೆಲಾರಾಮ್‌ನಲ್ಲಿರುವ ಭಾರತೀಯ

ಅಡ್ಡಹೊಳೆ: ಪಿಕಪ್ ಡಿಕ್ಕಿ – ಮಹಿಳೆ ಮೃತ್ಯು

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಪಿಕಪ್ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟ ದುರ್ಘಟನೆ ಜ.8ರಂದು ಸಂಜೆ ಸಂಭವಿಸಿದೆ. ಶಿರಾಡಿ ಗ್ರಾಮದ ಅಡ್ಡಹೊಳೆ ಅಂಬೇಡ್ಕರ್ ಕಾಲೋನಿ ನಿವಾಸಿ ದಿ.ಬಾಬು ಅವರ ಪತ್ನಿ ಲೀಲಾ (59) ಮೃತ ಮಹಿಳೆಯಾಗಿದ್ದಾರೆ. ಲೀಲಾ ಅವರು ಕೂಲಿ ಕೆಲಸ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಬದಿ ನಡೆದುಕೊಂಡು ಮನೆಗೆ

ಮೂಡುಬಿದಿರೆಯ ಯುವ ಲೇಖಕಿ ರೇಶಲ್ ಫೆರ್ನಾಂಡಿಸ್ ಗೆ ಅಂತರಾಷ್ಟ್ರೀಯ ಮನ್ನಣೆ

ಮೂಡುಬಿದಿರೆ: ಕರಾವಳಿಯ ಪ್ರತಿಭೆ, ಯುವ ಲೇಖಕಿ ಹಾಗೂ ವಾಗ್ಮಿ ರೇಶಲ್ ಫೆರ್ನಾಂಡಿಸ್ ಅವರು ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ನಡೆಸುತ್ತಿರುವ ನಿರಂತರ ಸಾಧನೆಗೆ ಈಗ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ರಾಜ್ಯಮಟ್ಟದ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಪುರಸ್ಕೃತರಾದ ಇವರು, ತಮ್ಮ ಸಾಹಿತ್ಯಿಕ ಕೊಡುಗೆಗಳ ಮೂಲಕ ಜಾಗತಿಕ ಗಮನ ಸೆಳೆಯುತ್ತಿದ್ದಾರೆ. ಪ್ರತಿಷ್ಠಿತ ಅಂತರರಾಷ್ಟ್ರೀಯ ಸಾಹಿತ್ಯಿಕ ಮ್ಯಾಗಜೀನ್ ‘ಲಿಟರೇಚರ್

65 ಲಕ್ಷ ರೂಪಾಯಿ ವೆಚ್ಚದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

ಕಾಪು:ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ದಿನಾಂಕ 07-01-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಸದಸ್ಯರಾದ ಜೀಯಾನಂದ ಹೆಗಡೆ, ಸತೀಶ್ ಶೆಟ್ಟಿ, ಸುಮಿತಾ ಹಾಗೂ ಸತೀಶ್ ಶೆಟ್ಟಿ, ಶಿವರಾಮ್