ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಕಜೆಕ್ಕಾರ್ ವ್ಯಾಪ್ತಿಯಲ್ಲಿ ಟಾರ್ಪಲ್ ಶೀಟಿನ ಗುಡಿಸಲಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದ ಶ್ರೀಮತಿ ಭಾಗಿರ ಅವರಿಗೆ, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು
ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ನಿರಾಜೆ ಎಂಬಲ್ಲಿ ಪತಿ ಆತ್ಮ ಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೆ ಇತ್ತ ಪತ್ನಿ ಮತ್ತು ಮಗ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೊಹಿಲ ಗ್ರಾಮದ ಜನತ ಕಾಲೋನಿ ನಿವಾಸಿ ಮುನಿರ್ ಎಂಬವರ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರೆ ಇತ್ತ ಆತನ ಪತ್ನಿ ನೇಹಾ(೩೬) ಹಾಗೂ ಇವರ ಪುತ್ರ ಮಹಮ್ಮದ್ ನಿಹಾಲ್(೩.೫)
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮಾನ್ಯ ಉಪಾಧ್ಯಕ್ಷರಾದ ಶ್ರೀ ಡಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನ ಕುಮಾರ ಪಾರ್ಕ್‌ನ ಗಾಂಧಿ ಭವನದಲ್ಲಿ ಆಯೋಜಿಸಲಾದ “ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾನೂನಿನ ಆಶಯದಂತೆ ಕಾರ್ಯನಿರ್ವಹಿಸಲು ಅನುಕೂಲವಾಗುವ ವಾತಾವರಣ ಸೃಷ್ಟಿಸುವುದು” ಎಂಬ ವಿಷಯದ ಕುರಿತು ನಡೆದ ಮಹತ್ವದ ಸಭೆಯಲ್ಲಿ, ವಿಧಾನ
ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ – ಡ್ರೋನ್ ಹಾಗೂ ಸಿಸಿ ಕ್ಯಾಮರಾ ಮೂಲಕ ನಿಗಾ ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿಯುತ ಜಾತ್ರೋತ್ಸವ ನಡೆಸುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಸೂಕ್ಷ್ಮ ಕಣ್ಗಾವಲು ವ್ಯವಸ್ಥೆಯ ಭಾಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಈ ಬಾರಿ
ಕೊಕ್ಕಡ:ಲಾಯಿಲ ಗ್ರಾಮದ ಎಣಿಂಜೆ ನಿವಾಸಿ ಶಾರದ ಹಾಗೂ ಶೇಖರ ಶೆಟ್ಟಿ ದಂಪತಿಗಳ ಪುತ್ರಿ, ವಿಶ್ವದಾಖಲೆ ಸಾಧಕಿ ಕುಮಾರಿ ಶ್ರದ್ದಾ ಶೆಟ್ಟಿಯವರು ಜ.06ರಂದು ಶ್ರೀ ಕ್ಷೇತ್ರ ಸೌತಡ್ಕಕ್ಕೆ ಭೇಟಿ ನೀಡಿ, ತನಗೆ ಲಭಿಸಿದ ಪ್ರಶಸ್ತಿಯೊಂದಿಗೆ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನಲ್ಲಿ ಬಿ.ಇಡಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರದ್ದಾ ಶೆಟ್ಟಿಯವರು, ಹವ್ಯಾಸವಾಗಿ ಹೂವಿನ ರಂಗೋಲಿಗಳನ್ನು ಬಿಡಿಸುವ ಕಲೆಯಲ್ಲಿ
ಫೇಸ್‌ಬುಕ್ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ – ಮಂಡಲ ಬಿಜೆಪಿ ಖಂಡನೆ, ಉಗ್ರ ಪ್ರತಿಭಟನೆ ಎಚ್ಚರಿಕೆ ಸುಳ್ಯ : ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀರಾ ಅವಮಾನಕರ ಹಾಗೂ ಅಸಹ್ಯಕರ ಪೋಸ್ಟ್ ಹಾಕಿರುವ ಪ್ರಕರಣವನ್ನು ಸುಳ್ಯ ಮಂಡಲ ಬಿಜೆಪಿ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದೆ. ಬಿಲ್ಲವ ಸಂದೇಶ್ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ರೀತಿಯಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿರುವುದು
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.), ಸುಳ್ಯ ವತಿಯಿಂದ ಮಂಜೂರಾದ ಸಿಲಿಕಾನ್ ಚೇಂಬರ್ ಅನ್ನು ದಿನಾಂಕ 05.01.2026 ರಂದು ಊರಿನ ಗಣ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್. ರೈ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ
ಪಡುಬಿದ್ರಿ:ಮಂಗಳೂರು ನಗರದ ಟಿ ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಜನವರಿ 31 ಮತ್ತು ಫೆಬ್ರವರಿ1 ರಂದು ಜರುಗಲಿರುವ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ- ಆಯುಷ್ ಹಬ್ಬದ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನಕ್ಕೆ ಭಾನುವಾರದಂದು ಚಾಲನೆ ನೀಡಲಾಯಿತು. ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಆಯುಷ್ ವೃತ್ತಿನಿರತ ವೈದ್ಯರ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎ.ಎಫ್.ಐ
ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜನವರಿ 3, 2026 ಶನಿವಾರ, ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್)
ಉಚ್ಚಿಲ:ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರವಾದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಲುವಾಗಿ ರೂಪಿಸಿದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ




























