ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಂದೇ ಕ್ಯಾಂಪಸ್ ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ: ಕಳೆದ ಭಾನುವಾರದಂದು ವಾಲ್ಪಾಡಿಯಲ್ಲಿ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಾಲ್ಪಾಡಿಯಲ್ಲಿ ಭಾನುವಾರ ಆಕ್ಟಿವಾ-ರಿಕ್ಷಾ ಮಧ್ಯೆ ಅಪಘಾತವಾಗಿದ್ದು ಇದರಲ್ಲಿ ಆಕ್ಟೀವಾ ಚಾಲಕ ವಾಲ್ಪಾಡಿ ನಿವಾಸಿ ಲೂವಿಸ್ ಡಿಕೋಸ್ತ (52)ಅವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಲೂವಿಸ್ ಅವರು ವಾಲ್ಪಾಡಿಯಲ್ಲಿ ಅಂಗಡಿ ನಡೆಸುತ್ತಿದ್ದು ಭಾನುವಾರ ಮಧ್ಯಾಹ್ನದ
ಮೂಡುಬಿದಿರೆ: ಇಲ್ಲಿನ ಜೈನ ಪ್ರೌಢ ಶಾಲೆಯ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣರಾಜ ಶೆಟ್ಟಿ ( 62) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಒಟ್ಟು 31 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅವರು ಜೈನ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಸಿದ್ದರು.ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಿತ ಹಲವೆಡೆ ಅವರು ಗೌರವಾದರಗಳಿಗೆ ಪಾತ್ರರಾಗಿದ್ದರು.ಕೆಲವು ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ
ಮೂಡುಬಿದಿರೆ: ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅವರು ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ 2023ನೇ
ಮೂಡುಬಿದಿರೆ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ.ಮೂಡುಬಿದಿರೆ ಮತ್ತು ಎಮ್.ಸಿ.ಲಿಯೋಡ್ ಫಾರ್ಮಾ ಇವುಗಳ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರವು ಬ್ಯಾಂಕಿನ ಸಭಾಭವನದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯದ ಬಗ್ಗೆ ನಾವು ಇಂದು ವಿಶೇಷವಾಗಿ ಗಮನ ಹರಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು
ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ ಕೊಡಮಾಡುವ ಶಿವರಾಮ ಕಾರಂತ ಪ್ರಶಸ್ತಿಗೆ ಕವಿ ಡಾ. ಚಿನ್ನಸ್ವಾಮಿ ಮೂಡ್ನಾಕೂಡು ಬೆಂಗಳೂರು, ಜಾನಪದ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರ, ಕನ್ನಡದ ಕೀಲಿಮಣೆ ವಿನ್ಯಾಸಕಾರ ಉಡುಪಿಯ ಕೆ.ಪಿ ರಾವ್ ಹಾಗೂ ಹೆಗ್ಗೋಡಿನ ನಿನಾಸಂ ಸಂಸ್ಥೆಗೆ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003 ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಕಾರ್ ಮ್ಯೂಸಿಯಂಗೆ ಸ್ವಾಮೀಜಿ ವಾಹನ ವರ್ಗಾವಣೆ ಸಹಿ ವರ್ಗಾಹಿಸಿದರು. 108 ಶಾಂತಿ ಸಾಗರ ಆಚಾರ್ಯ ಪಾದರೋಹಣ ಶತಾಬ್ದಿ ಮಹೋತ್ಸವ ಶ್ರೀ ಮಠದ ವತಿಯಿಂದ ವೇಣೂರು ಮಹಾ ಮಸ್ತಕಾಭಿಷೇಕ ಸಂಧರ್ಭ ನೆರವೇರಿಸಿದ ನೆನಪಿನಲ್ಲಿ ಶ್ರೀ ಡಿ ವೀರೇಂದ್ರ ಹೆಗ್ಗಡೆ
ಮೂಡುಬಿದಿರೆ: ರಾಸಾಯನಿಕ ಬಳಸಿದ ಹಣ್ಣುಗಳನ್ನು ವಾಹನಗಳಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದನ್ನು ಸಾರ್ವಜನಿಕರ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳ ತಂಡವು ಶುಕ್ರವಾರ ಮೂಡುಬಿದಿರೆಯಲ್ಲಿ ತಪಾಸಣೆ ನಡೆಸಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಕಳೆದ ಕೆಲವು ಸಮಯಗಳಿಂದ ವಿವಿಧ ಹಣ್ಣುಗಳ ಸೀಸನ್ ಸಮಯದಲ್ಲಿ ವಾಹನದಲ್ಲಿ ತಂದು ಮೂಡುಬಿದಿರೆ ಪೇಟೆಯ ರಸ್ತೆ ಬದಿಗಳಲ್ಲಿ ನಿಲ್ಲಿಸಿ ಹಾಗೂ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ್ದರು. ರಾಸಾಯನಿಕ
ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಟರಿ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 67 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಒರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಚಿತಾ ಎಸ್. ಸುವರ್ಣ 613
2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.




























