ಮೂಡುಬಿದಿರೆ : ದರೋಡೆ ಮಾಡಲು ಸಂಚು ರೂಪಿಸಿದ್ದ ಐವರ ಗುಂಪಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಗುರುವಾರ ರಾತ್ರಿ ಬಡಗ ಮಿಜಾರಿನ ಬೆಳ್ಳೆಚ್ಚಾರಿನಲ್ಲಿ ಬಂಧಿಸಿದ್ದಾರೆ. ಮೂಡುಬಿದಿರೆ ಮಾರ್ಪಾಡಿ ಗ್ರಾಮ ಸುಭಾಸ್ ನಗರದ ಜಗದೀಶ( 29), ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಅಂಗರಕರಿಯ ನಿವಾಸಿ ಪ್ರಶಾಂತ್(27) ಬಂಧಿತ ಆರೋಪಿಗಳು.ಮೂಡುಬಿದಿರೆ ಪೊಲೀಸ್
ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲೆಂದು ಬದಿಗೆ ಇಳಿದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದು
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 63ನೇ ಸೇವಾ ಯೋಜನೆಯ ಅಂಗವಾಗಿ ಮೇ ತಿಂಗಳ 1ನೇ ಯೋಜನೆಯನ್ನು ದರೆಗುಡ್ಡೆ ಗ್ರಾಮದ ಆನೆಗುಡ್ಡೆ ಪರಿಸರದ ಅನಾರೋಗ್ಯ ಪೀಡಿತರಾಗಿರುವ ವಿಜಯ್ ಪೂಜಾರಿ ಅವರ ಚಿಕಿತ್ಸೆಗೆ ಆಥಿ೯ಕ ನೆರವನ್ನು ನೀಡಲಾಯಿತು.ಆನೆಗುಡ್ಡೆ ಪರಿಸರದ ವಿಜಯ್ ಪೂಜಾರಿ ಅವರು ಮುಂಬೈಯಲ್ಲಿ ಸಣ್ಣ ಉದ್ಯೋಗದಲ್ಲಿರುವಾಗ ಆಕ್ಸಿಡೆಂಟ್ ಆಗಿ ಕಾಲಿನ ಎಲುಬು ಮುರಿತವಾಗಿರುತ್ತದೆ. ಅವರಿಗೆ ಒಂದು ವರ್ಷ ಕೆಲಸಕ್ಕೆ
ಪಾಲಡ್ಕ ಗ್ರಾ. ಪಂ. ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆ, ಬೀಸಿದ ಗಾಳಿಗೆ ಕಡಂದಲೆ ಬಿಟಿ ರೋಡ್ ನಲ್ಲಿ ಯಶೋದಾ ಪಾಂಡು ಗೌಡ ಅವರ ಮನೆ ಮೇಲೆ ಸಂಜೆ 6 ಗಂಟೆ ಸುಮಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ.ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು. ಗ್ರಾ.ಪಂ. ಪಿಡಿಓ ರಕ್ಷಿತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಯಿತು. ಗ್ರಾಮ ಸಹಾಯಕ ರೀತೇಶ್,
ದಾರಿ ಕೇಳುವ ನೆಪದಲ್ಲಿ ವೃದ್ಧೆಯೋವ೯ರ ಕುತ್ತಿಗೆಯಿಂದ 3-4 ಪವನಿನ ಕರಿಮಣಿ ಸರವನ್ನು ಎಗರಿಸಿದ ಘಟನೆ ಬೆಳುವಾಯಿ ಸಮೀಪ ಸೋಮವಾರ ನಡೆದಿದೆ.ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ನಿವಾಸಿ ಎಪ್ಪತ್ತರ ಹರೆಯದ ಇಂದಿರಾ ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕನೊಬ್ಬ ಬೆಳುವಾಯಿಗೆ ಹೋಗುವ ದಾರಿ ಯಾವುದು ‘ ಎಂದು
ಮೂಡುಬಿದಿರೆ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಮನೆಯ ರಿಚಾರ್ಡ್ ನೊರೊನ್ಹ ಎಂಬ ಆರೋಪಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. 1999 ರಲ್ಲಿ ಮಾಣಿಲ ಮನೆಯಲ್ಲಿ ನಡೆದ ಹಲ್ಲೆ ಹಾಗೂ ಕೊಲೆ ಬೆದರಿಕೆಗೆ ಸಂಬಂಧಿಸಿ ತೆರೆಸಾ ಸಿಕ್ವೇರಾ ಅವರು ರಿಚಾರ್ಡ್ ಸಹಿತ ನಾಲ್ಕು ಮಂದಿಯ ವಿರುದ್ಧ ಮೂಡುಬಿದಿರೆ ಠಾಣೆಗೆ ದೂರು
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯ ಬಿ.ಸಿ.ಎ. ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಶ್ರೀರಾಮ್ ಇವರು 9ನೇ ರ್‍ಯಾಂಕ್ ಗಳಿಸಿರುತ್ತಾರೆ.ಇವರ ಸಾಧನೆಗೆ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಮತ್ತು ಸರ್ವ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಮೂಡುಬಿದಿರೆ: ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಅವರು ಲಾಡಿ ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್ ನ್ನು ಹರಿದು ಹಾನಿಗೊಳಿಸಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಕರೀಂ ಅವರು ದೂರು
ಮೂಡುಬಿದಿರೆ: ಕಳೆದ 3 ವರುಷಗಳಿಂದ ವಿವಿಧ ಕಡೆಗಳಲ್ಲಿರುವ 25 ಗೂಡಂಗಡಿಗಳಿಂದ ಅಂದಾಜು 3,55,000/- ಮೌಲ್ಯದ ವಸ್ತುಗಳನ್ನು ಕಳವುಗೈದಿರುವ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ನಿಡ್ಡೋಡಿಯ ನೀರುಡೆ ನಿವಾಸಿ ರೋಶನ್ ವಿಲ್ಸನ್ ಕ್ವಾಡ್ರಸ್, ಕೊಂಪದವು ನೆಲ್ಲಿ ತೀರ್ಥದ ನಿವಾಸಿ ನಿಶಾಂಕ್ ಪೂಜಾರಿ, ತೆಂಕು ಎಕ್ಕಾರು ಗ್ರಾಮದ ನಿವಾಸಿ ರೋಹಿತ್ ಮಸ್ಕರೇನಸ್ ಬಂಧಿತ ಕಳ್ಳರು. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್
ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ




























