ಉಳ್ಳಾಲ:ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಲ್ಲಿ ನಡೆದಿದೆ.ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಿವಾಸಿ ನಿತಿನ್ ಪೂಜಾರಿ(36)ಆತ್ಮ ಹತ್ಯೆಗೈದ ಯುವಕ.ನಿತಿನ್. ಮನೆಯ ಕೋಣೆಯೊಳಗೆ ಸೇರಿದ್ದನೆನ್ನಲಾಗಿದೆ.ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ
ಮೂಡುಬಿದಿರೆ: ನಿಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಗಾರಿನಲ್ಲಿ ಭಾನುವಾರ ನಡೆದಿದೆ. ಪುರಸಭಾ ವ್ಯಾಪ್ತಿಯ ಅಲಂಗಾರು ಆಶ್ರಯ ಕಾಲನಿಯ ನಿವಾಸಿ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ (೨೧) ಆತ್ಮಹತ್ಯೆ ಮಾಡಿಕೊಂಡಾತ.ಹೆತ್ತವರು ಮನೆಯಲ್ಲಿ ಚನ್ನಾಗಿ ಓದುವಂತೆ ಬುದ್ಧಿಮಾತು ಹೇಳಿದ್ದು, ಅದರಂತೆ ಸಾತ್ವಿಕ್
ಬಂಟ್ವಾಳ: ಬಲತ್ಕಾರದ ಮತಾಂತರವನ್ನು ತಡೆಗಟ್ಟುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜನಪರವಾದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದಪಡಿ ರದ್ದತಿ, ಶಾಲಾ ಪಠ್ಯಪುಸ್ತಕದಿಂದ ಸಾವರ್ಕರ್ ಹಾಗೂ ಹೆಗಡೇವಾರ ಅವರ ವಿಷಯವನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಖಂಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದರು. ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿಒರ್ವ
ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಭಾನುವಾರ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಆತ್ಮ ಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32) ಎಂದು ಗುರುತಿಸಲಾಗಿದೆ. ಇವರು ಕೊಲ್ಲಿರಾಷ್ಟ್ರದ ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ
ವಿಟ್ಲ: ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಅಬೂಬಕ್ಕರ್ ಕೆ (46) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನಲ್ಲೇನಿದೆ?: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:13-05-2023 ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಬನ ಎಂಬಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದ ಅಪರಿಚಿತ
ಕೋಟ:ಉಡುಪಿ ಜಿಲ್ಲೆಯ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಟತಟ್ಟು ಗ್ರಾಮ ಪಂಚಾಯಿತಿನ ಬೂತ್ ನಂಬರ್ 165 ರಲ್ಲಿ ಸರತಿ ಸಾಲಿನಲ್ಲಿ ನಿಂತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮತದಾನ ಮಾಡಿದರು.
ಕಡಬ :ಕುಂತೂರಿನ ಮತಗಟ್ಟೆಯಲ್ಲಿ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮತ ಚಲಾಯಿಸಿದರು
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಮಣಿಪಾಲ್ ನಗರ ವ್ಯಾಪ್ತಿಯ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಯೂನಿಟ್ lV ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಲಾಲಾಜಿ ಮೆಂಡನ್ ರವರು ನನ್ನ ಅಧಿಕಾರದ ಅವಧಿಯಲ್ಲಿ ಕಾಪು ಕ್ಷೇತ್ರಕ್ಕಾಗಿ ಹಗಲಿರುಳು ದುಡಿದಿದ್ದೇನೆ ಇನ್ನು ಈ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ಚೆನ್ನಾಗಿ ನಿಭಾಯಿಸಲಿದ್ದಾರೆ
ಬಂಟ್ವಾಳ: ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ, ಸ್ಟಾರ್ ಪ್ರಚಾರಕ್ ಆಗಿರುವ ಯೋಗಿ ಆದಿತ್ಯನಾಥ್ ಅವರು ಮೇ.6ರಂದು ಶನಿವಾರ ಬಿ.ಸಿ.ರೋಡಿಗೆ ಆಗಮಿಸಲಿದ್ದು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು. ಅವರು ಗುರುವಾರ ಬಿಜೆಪಿ ಕಚೇರಿಯುಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಸಂಜೆ 4ಗಂಟೆಗೆ ಯೋಗಿಜೀ
ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಭರ್ಜರಿಯಾಗಿ ಪ್ರಚಾರ ನಡೆಸಿದರು. ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಅಮಿತ್ ಶಾ, ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಅದರಲ್ಲೂ, “ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಹೇಳಿದರು.




























