ಅಯೋಧ್ಯೆಯಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಮುಖಂಡರು
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದಲ್ಲೂ ರಾಮಮಂದಿರದ ಉದ್ಘಾಟನೆ ಸಂಭ್ರಮ ಮನೆ ಮಾಡಿದೆ. ರಾಮಲಲ್ಲಾ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರಿನಿಂದ ಬಿಜೆಪಿಯ ಜಿಲ್ಲಾ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿಯವರೂ ತೆರಳಿದ್ದಾರೆ. ಅವರ ಜೊತೆಗೆ ಡಾ. ಡಿ ವಿರೇಂದ್ರ ಹೆಗ್ಗಡೆ, ಡಾ. ಕಲ್ಲಡ್ಕ ಪ್ರಭಾಕರ್ ಭಟ್, ನಿಟ್ಟೆ ಸಂಸ್ಥೆಯ ವಿಶಾಲ್ ಹೆಗ್ಡೆ, ಎಂ.ಬಿ. ಪುರಾಣಿಕ್ ದಂಪತಿ, ಸೇರಿದಂತೆ ಜಿಲ್ಲೆಯ ಎಲ್ಲಾ ಮಠಗಳ ಸ್ವಾಮೀಜಿಗಳು ಪಾಲ್ಗೊಳ್ಳಲು ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ.
ಈ ಬಗ್ಗೆ ವಿ4 ನ್ಯೂಸ್ ಗೆ ಮಾಹಿತಿ ನೀಡಿದ ಲೋಟಸ್ ಪ್ರಾಪರ್ಟಿಸ್ ನ ಬಿಲ್ಡರ್ ಹಾಗೂ ಬಿಜೆಪಿಯ ಜಿಲ್ಲಾ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿ ಅವರು, ರಾಮಲಲ್ಲಾನ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದೇನೆ. ಸುಮಾರು 500 ವರ್ಷಗಳಿಂದ ಕಾಯುತ್ತಿರುವ ಸನಾತನ ಹಿಂದೂ ಧರ್ಮೀಯರ ಕನಸು ನನಸಾಗುತ್ತಿರುವ ಅದ್ಬುತ ಕ್ಷಣಗಳಲ್ಲಿ ಭಾಗಿಯಾಗುತ್ತಿರುವುದು ಸಂತಸತಂದಿದೆ. ರಾಮಲಲ್ಲಾನ ಪ್ರತಿಷ್ಠಾಪನೆಯ ಸಮಯ ಪ್ರತಿ ಮನೆಮನೆಗಳಲ್ಲಿ ದೀಪವನ್ನು ಬೆಳಗಿಸಿ, ಉತ್ತರಾಭಿಮುಖವಾಗಿ ಪ್ರಾಥನೆಯನ್ನು ಸಲ್ಲಿಸಿ ಶ್ರೀರಾಮಚಂದ್ರನ ಕೃಪೆಗೆ ಪಾತ್ರರಾಗಿ ಎಂದರು.



















