ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ನಾಟಕ ಪ್ರದರ್ಶನ

ಬೆಂಗಳೂರು:ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಬನ್ನೇರುಘಟ್ಟ ಲಯನ್ಸ್ ಕ್ಲಬ್ ವತಿಯಿಂದ ಕಿರು ನಾಟಕ ಪ್ರದರ್ಶನ ಬೆಂಗಳೂರಿನ ಟಿ.ಜಾನ್ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಯಿತು.


ವೃತ್ತಿಪರ ರಂಗಭೂಮಿ ಕಲಾವಿದರು ಪ್ರದರ್ಶಿಸಿದ ಈ ನಾಟಕವು ಒತ್ತಡ, ಗಲಾಟೆ ಹಾಗೂ ಮನೋವೈಕಲ್ಯಗಳಂತಹ ವಿಷಯಗಳು ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವವನ್ನು ಮನಮುಟ್ಟುವಂತೆ ತೋರಿಸಿತು.
ಸುಮಾರು 300 ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಲಯನ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು ಎಂದು ಬನ್ನೇರುಘಟ್ಟ ಲಯನ್ಸ್ ಕ್ಲಬ್ ಮುಖಂಡರಾದ ರೇಣುಕಾ ಪ್ರಕಾಶ್ ಅವರು ತಿಳಿಸಿದರು.