ಹಳೆಯಂಗಡಿ : ಆಕ್ಯುಪ್ರೆಷರ್ ಮತ್ತು ಸುಜೋಕ್ ಮ್ಯಾಗ್ನೆಟ್ ಚಿಕಿತ್ಸಾ ಶಿಬಿರ

ಹಳೆಯಂಗಡಿ : ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಪ್ರಾಯೋಜಕತ್ವದಲ್ಲಿ, ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಶ್ರೀ ಓಂಕಾರೇಶ್ವರ ಮಂದಿರ ತೋಕೂರು, ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಜಂಟಿ ಆಶ್ರಯದಲ್ಲಿ ಆಕ್ಯುಪ್ರೆಷರ್ ಮತ್ತು ಸುಜೋಕ್ ಮ್ಯಾಗ್ನೆಟ್ ಮತ್ತು ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರ ವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ ಹನುಮಾನ್ ಗಡ ರಾಜಸ್ಥಾನ ಇದರ ವೈದ್ಯಾಧಿಕಾರಿಯಾದ ಡಾಕ್ಟರ್ ರೂಪೇಶ್ ಚೌದರಿ ಮತ್ತು ಪ್ರಹ್ಲಾದ್, ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ ರೋಟೇರಿಯನ್ ಸುಧಾಕರ ಸಾಲ್ಯಾನ್, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀ ಜಯಕೃಷ್ಣ ಕೋಟ್ಯಾನ್, ಓಂಕಾರೇಶ್ವರಿ ಮಂದಿರ ತೋಕೂರು ಅಧ್ಯಕ್ಷರಾದ ಸದಾಶಿವ ಕುಂದರ್, ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಗಣೇಶ್ ಜಿ ಬಂಗೇರ, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ದಿನಕರ ಸಾಲ್ಯಾನ್, ಫೇಮಸ್ ಯೂತ್ ಕ್ಲಬ್ ನ ಗೌರವಾಧ್ಯಕ್ಷರಾದ ಶ್ರೀ ಗುರುರಾಜ ಎಸ್ ಪೂಜಾರಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರು ಮತ್ತು ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.


ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಕುಸುಮಾ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಅಮೀನ್ ರವರು ಸ್ವಾಗತಿಸಿ, ಮಹಮ್ಮದ್ ಶರೀಫ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

tree house school

Related Posts

Leave a Reply

Your email address will not be published.