ಹೆಜಮಾಡಿ: ಮಟ್ಟು ಗ್ರಾಮದ ಹೆಮ್ಮೆಯ ಯೋಧ ಚೇತನ್ ಶ್ರೀಯನ್ ರವರಿಗೆ ಕೋಟೆ ಮಟ್ಟು ಬಿಜೆಪಿ ವತಿಯಿಂದ ಸನ್ಮಾನ

ಹೆಜಮಾಡಿ: 79ನೇ ಸ್ವತಂತ್ರ ದಿನಾಚರಣೆಯ ಶುಭ ಸಂದರ್ಭದಲ್ಲಿ ಭಾರತೀಯ ಸೇನೆಯ ಆರ್ಟಿಲರಿ ವಿಭಾಗದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಮ್ಮ ಮಟ್ಟು ಗ್ರಾಮದ ಹೆಮ್ಮೆಯ ಯೋಧ ಚೇತನ್ ಶ್ರೀಯನ್ ರವರಿಗೆ ಕೋಟೆ ಮಟ್ಟು ಬಿಜೆಪಿ ವತಿಯಿಂದ ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀ ಗೋಪಾಲ್ ಕೃಷ್ಣ ರಾವ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಯೋಧ ಚೇತನ್ ಶ್ರೀಯನ್ ರವರ ಬಗ್ಗೆ ಕೋಟೆ ಪಂಚಾಯತ್ ಉಪಾಧ್ಯಕ್ಷರಾದ ಯೋಗೀಶ್ ಸುವರ್ಣ ರವರು ಕಿರುಪರಿಚಯ ಮಾಡಿದರು.
ಪಂಚಾಯತ್ ಉಪಾಧ್ಯಕ್ಷರಾದ ಯೋಗಿಶ್ ಸುವರ್ಣ,ಕೋಟೆ ಮಟ್ಟು ಶಕ್ತಿ ಕೇಂದ್ರದ ಹರ್ಷಿತ್ ಪೂಜಾರಿ ಮಟ್ಟು ವಾರ್ಡ್ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಹಾಗೂ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ ಇವರು ಗೌರವ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಡಲ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಸೇರಿಗರ್,
ಕಟಪಾಡಿ ಶಕ್ತಿ ಕೇಂದ್ರ ಪ್ರಾಮುಖ್ ಸಂತೋಷ ಕುಮಾರ್,ನಿತೇಶ್ ಪೂಜಾರಿ ಮಟ್ಟು,ಗುರುಪ್ರಸಾದ್ ಸೇರಿಗಾರ್,ಧನುಷ್, ನಿಹಾನ್ ಪೂಜಾರಿ, ವಿಹಾನ್ ಪೂಜಾರಿ ಉಪಸ್ಥಿತರಿದ್ದರು.
