ಮಂಗಳೂರು: ಇ-ಸಿಗರೇಟ್ ಅಕ್ರಮ ಮಾರಾಟ: ಸೊತ್ತು ಸಹಿತ ಮೂವರ ಬಂಧನ

ನಗರದ ಲಾಲ್‌ಬಾಗ್‌ನಲ್ಲಿರುವ ಕಾಂಪ್ಲೆಕ್ಸ್‌ವೊಂದರ ಅಂಗಡಿಯಲ್ಲಿ ಇ-ಸಿಗರೇಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 9,72,745 ರೂ.ಮೌಲ್ಯದ ಇ-ಸಿಗರೇಟ್ ಮತ್ತಿತರ ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂಗಡಿಯ ಮಾಲಕ ಶಿವು ದೇಶಕೋಡಿ, ಬಂಟ್ವಾಳ ತಾಲೂಕಿನ ಸಂತೋಷ್, ಕುದ್ರೋಳಿಯ ಇಬ್ರಾಹಿಂ ಯಾನೆ ಇರ್ಷಾದ್ ಬಂಧಿತ ಆರೋಪಿಗಳಾಗಿದ್ದಾರೆ.
ಆಮಂತ್ರಣ ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಸೋಮವಾರ ಸಂಜೆ ದಾಳಿ ನಡೆಸಿದ ಪೊಲೀಸರು ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳ ಸಹಿತ ಇ-ಸಿಗರೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಮತ್ತಿತರರು ಪಾಲ್ಗೊಂಡಿದ್ದರು.