ಬೈಲೂರು : ಸೈಬರ್ ಕ್ರೈಂ ಮಾಹಿತಿ ಶಿಬಿರ ಉದ್ಘಾಟನೆ
ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತಿದ್ದು ವಿದ್ಯಾವಂತ ನಿರುದ್ಯೋಗಿಗಳೆ ಇದರ ಟಾರ್ಗೆಟ್ ಆಗುತಿದ್ದಾರೆ ಎಂದು ಉಡುಪಿ ಜಿಲ್ಲಾ ಎ ಎಸ್ಪಿ ಸಿದ್ದಲಿಂಗಪ್ಪ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಸಹಯೋಗದೊಂದಿಗೆ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಹಾಲ್ಡಿನ್ ಗ್ಲಾಸ್ ಹಾಲ್ ನಲ್ಲಿ ಸೈಬರ್ ಕ್ರೈಂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪೆÇೀಲಿಸ್ ಇಲಾಖೆಗಳು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ, ಸೈಬರ್ ಕ್ರೈಮ್ ಗಳು ರಾಷ್ಟ್ರೀಯ ಮಟ್ಟಗಳಲ್ಲಿ ಹರಡಿಕೊಂಡಿರುವುದರಿಂದ ಪತ್ತೆಮಾಡಲು ತುಂಬಾ ಸಮಯ ಹಿಡಿಯುತ್ತಿದೆ. ಅದಕ್ಕಾಗಿ ಅಪರಾಧ ತಡೆಯಲು ಅರಿವು ಮೂಡಿಸುವುದೆ ನಮ್ಮ ಮೊದಲ ಆದ್ಯತೆಯಾಗಿದೆ.ಸೈಬರ್ ಕ್ರೈಮ್ ಮಾಹಿತಿ ಶಿಬಿರದ ಹಮ್ಮಿಕೊಂಡ ತಾಲೂಕು ಪತ್ರಕರ್ತರ ಸಂಘ ಕ್ಕೆ ಧನ್ಯವಾದ ತಿಳಿಸಿದರು.

ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ನಮ್ಮ ದೌರ್ಬಲ್ಯ ಗಳನ್ನು ಸೈಬರ್ ಕ್ರೈಮ್ ಅಪರಾಧಿಗಳು ಬಳಸಿಕೊಂಡು ವಂಚನೆ ಮಾಡುತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಜತ ಮಹೋತ್ಸವ ಸಮಿತಿ ಸಂಚಾಲಕ , ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ, ರಾಜ್ಯದಲ್ಲಿ ಶಾಲಾ ಕಾಲೇಜುಗಳೆ ಗಾಂಜಾ ವ್ಯಸನಿಗಳ ಟಾರ್ಗೆಟ್ ಆಗುತಿದ್ದಾರೆ. ಕಾರ್ಕಳ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲ ಸೈಬರ್ ಕ್ರೈಮ್ ಮಾಹಿತಿ ಹಾಗು ಡ್ರಗ್ಸ್ ಹಾವಳಿ ತಡೆಗಟ್ಟಲು ಮಾಹಿತಿ ಶಿಬಿರಗಳು ನಡೆಯಲಿವೆ ಎಂದರು.
ಕಾರ್ಕಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಶೆಟ್ಟಿ, ಮಣಿಪಾಲ ಪೆÇೀಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ, ಸಾರ್ವಜನಿಕರು ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.

ಲಯನ್ಸ್ ಗವರ್ನರ್ ಲ| ಡಾ. ನೇರಿ ಕರ್ನಾಲಿಯೋ ಬೆಳಕು ಸಂಯೋಜಕರ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಧರ್ಮರಾಜ್, ಜೆ. ಸುಧೀರ್ ಹೆಗ್ಡೆ ಬೈಲೂರು , ಸಂತೋಷ್ ವಾಗ್ಳೆ, ಲಯನ್ಸ್ ಕ್ಲಬ್ ನೀರೆ-ಬೈಲೂರು ಅಧ್ಯಕ್ಷ ಲ| ಕೆ. ಸುಜಯ್ ಜತ್ತನ್ನ, ಸ.ಪ.ಪೂ ಕಾಲೇಜು ಪ್ರಾಂಶುಪಾಲ
ಗುರುಮೂರ್ತಿ ಟಿ., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಪತ್ರಕರ್ತ ವಾಸುದೇವ ಭಟ್ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಬೈಲೂರು ಧನ್ಯವಾದ ವಿತ್ತರು.



















