ಕಾರ್ಕಳ: ಪಡು ತಿರುಪತಿಯಲಿ ವಿಶ್ವರೂಪ ದರ್ಶನ
‘ಪಡು ತಿರುಪತಿ’ಎಂದೇ ಕೀರ್ತಿ ಪಡೆದ ಕಾರ್ಕಳದಲ್ಲಿ ಸೂರ್ಯೋದಯಕ್ಕೂ ಮೊದಲು ‘ವಿಶ್ವರೂಪ ದರ್ಶನ’ ನೆರವೇರಿದೆ. ಕಾರ್ಕಳದ ಭಕ್ತರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಾಗವಹಿಸುವ ಉತ್ಸವ ಇದು.
ಕಾರ್ತಿಕ ಮಾಸ ಬಂತೆಂದರೆ ಪಂಡರಾಪುರದ ವಿಠಲ ದೇವಸ್ಥಾನಕ್ಕೆ ಸಾವಿರಾರು ಭಜಕರು ಭಾರತದ ಮೂಲೆಮೂಲೆಗಳಿಂದ ಬಂದು ಸೇರಿ ಕುಣಿತ ಭಜನೆ ಮಾಡುವುದು, ವಿಠಲ ವಿಠಲ ಎಂದು ತಾಳ ಬಡಿಯುತ್ತಾ ಹಾಡುವುದು ತುಂಬಾ ಅದ್ಭುತ.
ಆಷಾಢ, ಕಾರ್ತಿಕ ಮಾಸಗಳಲ್ಲಿ ಪಂಡರಾಪುರದ ದೇವಸ್ಥಾನವು ಭೂ ವೈಕುಂಠ ಆಗಿ ಬಿಡುತ್ತದೆ. ಏಕಾದಶಿಯಂದು ಅಹೋರಾತ್ರಿ ಭಜನೆಯು ನಿಲ್ಲುವುದಿಲ್ಲ.
ಒಂದೇ ಒಂದು ವಿದ್ಯುದ್ದೀಪವೂ ಇಲ್ಲದೇ ಎಲ್ಲವೂ ನೈಸರ್ಗಿಕ ಮಣ್ಣಿನ ಹಣತೆಗಳ ಬೆಳಕಿನಲ್ಲಿ ವೆಂಕಟರಮಣ ದೇವಳವು ಮಿಂದೇಳುತ್ತದೆ. ಒಂದಿಷ್ಟೂ ಕೃತಕ ಬೆಳಕಿಲ್ಲದೇ ಸಹಜವಾದ ಬೆಳಕಿನಲ್ಲಿ ದೇವಾಲಯವನ್ನು ದೇವರನ್ನು ನೋಡುವುದೇ ಒಂದು ಭಾಗ್ಯ ಈ ಪರಿಯ ಸೊಬಗು ಬೇರೆಲ್ಲೂ ಕಾಣ ಸಿಗದು. ಸೂರ್ಯೋದಯದ ಮೊದಲು ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ಇಲ್ಲಿಯೇ ತಯಾರಾದ ತುಪ್ಪದ ತಿರುಪತಿಯ ಲಾಡು ಮತ್ತು ಫಲವಸ್ತುಗಳನ್ನು ನೀಡಲಾಗುತ್ತದೆ.