ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಕಟ್ಟೆಮಾರ್ ಸಿನಿಮಾದ ಪ್ರೀಮಿಯರ್ ಶೋ

ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ಸಿನಿಮಾ ಕಟ್ಟೆಮಾರ್. ಜನವರಿ ೨೩ರಂದು ಕರಾವಳಿಯಾದ್ಯಂತ ಸಿನಿಮಾ ಬಿಡುಗಡೆಗೊಳಲ್ಲಿದೆ. ಅದಕ್ಕಿಂತ ಮುಂಚಿತವಾಗಿ ಮಂಗಳೂರು, ಪುತ್ತೂರು ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ ನಡೆಯಲಿದೆ.
ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಆಕ್ಷನ್ ಕಟ್ ನಿರ್ದೇಶನದಲ್ಲಿ ಮೂಡಿ ಬಂದಿದರುವ ಕಟ್ಟೆಮಾರ್ ಈಗಾಗಲೇ ತನ್ನ ಪೋಸ್ಟರ್, ಹಾಡುಗಳಿಂದ ಸಖತ್ ಕುತೂಹಲ ಹುಟ್ಟಿಸಿದೆ. ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಬಗೆಯ ಕಥೆಯನ್ನು ಹೇಳಲು ರೆಡಿಯಾಗಿರುವ ಚಿತ್ರ, ಈಗ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಾಗಿಸಿದೆ.

ನೆತ್ತೆರೆಕೆರೆ ಖ್ಯಾತಿಯ ಸ್ವರಾಜ್ ಶೆಟ್ಟಿ ರಗಡ್ ಮತ್ತು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಸು ಫ್ರಮ್ ಸೋ ಖ್ಯಾತಿಯ ಜೆಪಿ ತುಮಿನಾಡ್ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರೆ. ಅಲ್ಲದೆ ನಿರ್ಮಾಪಕ ಲಂಚುಲಾಲ್ ಕೆಎಸ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಸ್ತ್ರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಲಂಚುಲಾಲ್ ಕೆಎಸ್ ನಿರ್ಮಾಣ ಮಾಡಿರುವ ಕಟ್ಟೆಮಾರ್ ಚಿತ್ರವು ಜ.೨೩ರಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಪ್ರೀಮಿಯರ್ ಶೋ ನಡೆಸಲು ಚಿತ್ರತಂಡ ಮುಂದಾಗಿದೆ. ಜ.19ರಂದು ಪುತ್ತೂರು, ಜ.20ರಂದು ಮಂಗಳೂರು ಮತ್ತು ಜ.22ರಂದು ಉಡುಪಿಯಲ್ಲಿ ರಾತ್ರಿ ೭.೩೦ಕ್ಕೆ ಕಟ್ಟೆಮಾರ್ ಪ್ರೀಮಿಯರ್ ಶೋಗಳು ನಡೆಯಲಿದೆ.ದೈವ ಮತ್ತು ಅದರ ನಂಬಿಕೆಯ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಈಗಾಗಲೇ ಟ್ರೇಲರ್ ಗೆ ಜನ ಮೆಚ್ಚುಗೆ ಸಿಕ್ಕಿದ್ದು, 2026ರ ಮೊದಲ ತುಳು ಚಿತ್ರವಾಗಿ ಕಟ್ಟೆಮಾರ್ ತೆರೆಗೆ ಬರಲಿದೆ.

ಕಟ್ಟೆಮಾರ್ ಸಿನಿಮಾ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು ಅದ್ಭುತವಾಗಿ ಮೂಡಿಬಂದಿದೆ. ಪ್ರೀಮಿಯರ್ ಶೋ ಈಗಾಗಲೇ ಹೌಸ್‌ಫುಲ್ ಆಗಿದ್ದು, ಟಿಕೆಟ್ ಬುಕ್ಕಿಂಗ್ ಮಾಡದವರು ಈಗಲೇ ಬುಕ್ಕಿಂಗ್ ಮಾಡಿಕೊಂಡು ಸಿನಿಮಾವನ್ನು ರಿಲೀಸ್‌ಗೆ ಮೊದಲೇ ಪ್ರೀಮಿಯರ್ ಶೋ ಮೂಲಕ ವೀಕ್ಷಿಸಬಹುದು.

Related Posts

Leave a Reply

Your email address will not be published.