ಮಂಗಳೂರು: ನ.26ರಂದು ಮಾತಾ ಅಮೃತಾನಂದಮಯಿ ಮಠದಲ್ಲಿ ನವಗ್ರಹ ಶಾಂತಿ ಹೋಮ

ಮಂಗಳೂರು ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ನವೆಂಬರ್ 26ರಂದು ನವಗ್ರಹ ಶಾಂತಿ ಹೋಮವು ಮಠದ ಆವರಣದಲ್ಲಿ ಬೆಳಿಗ್ಗೆ7 ಗಂಟೆಗೆ ನಡೆಯಲಿದೆ.

ನವಗ್ರಹ ಶಾಂತಿ ಹೋಮವು ಒಬ್ಬ ವ್ಯಕ್ತಿಯ ಜಾತಕದಲ್ಲಿ ಪ್ರತಿಕೂಲ ಗ್ರಹ ಸ್ಥಾನಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಒಂಬತ್ತು ಗೃಹಗಳ ಶಾಂತಿಗಾಗಿ ನಡೆಸುವ ವೈದಿಕ ಆಚರಣೆಯಾಗಿದೆ. ಪ್ರಾರ್ಥನೆಗಳು, ಮಂತ್ರಗಳು, ತುಪ್ಪ, ಹೂವುಗಳು ಮತ್ತು ಧಾನ್ಯಗಳಂತಹ ನಿರ್ದಿಷ್ಠ ಅರ್ಪಣೆಗಳಿಂದ ಗೃಹಗಳನ್ನು ಶಾಂತಗೊಳಿಸುವ ಮೂಲಕ ಜೀವನದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಸಮತೋಲವನ್ನು ತರುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ 8951470744, 8129545497 ಸಂಪರ್ಕಿಸಬಹುದು

Related Posts

Leave a Reply

Your email address will not be published.