13 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ
ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆ ಜುಮಾದಿ ದೈವಸ್ಥಾನದಿಂದ ಅಚ್ಚಡ ಬಡಗು ಮನೆ ವರೆಗೆ ರಸ್ತೆ ಅಭಿವೃದ್ಧಿಗೆ 13 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 14-12-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್, ಯತೀಶ್, ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಶಾಲಿನಿ ಚಂದ್ರಶೇಖರ್ ಹಾಗೂ ಸ್ಥಳ ದಾನಿಗಳಾದ ಶ್ರೀನಿವಾಸ ಶೆಟ್ಟಿ, ರಮೇಶ್ ದೇವಾಡಿಗ, ಲೀಲಾ ಸೆರ್ವೇಗಾರ್ ಹಾಗೂ ಸ್ಥಳೀಯರಾದ ಮನೋಹರ್ ಉಪಸ್ಥಿತರಿದ್ದರು.


















