ಮೂಡುಬಿದಿರೆ: ಚರ್ಚ್ ಪತ್ರ ದುರುಪಯೋಗ: “ಫೋಕಸ್” ವಾಟ್ಸಪ್ ಗ್ರೂಪಿನಿಂದ 12 ಲಕ್ಷ ಕಲೆಕ್ಷನ್, ಅಡ್ಮಿನ್ ಪೊಲೀಸರ ವಶಕ್ಕೆ

ಮೂಡುಬಿದಿರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗುವಿನ‌ ನೆರವು ಕೋರಿ ಬ್ಯಾಂಕ್ ಖಾತೆಯ ಮಾಹಿತಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದು ಆಗ್ರೂಪ್ ನ ಅಡ್ಮಿನ್ ಅಕೌಂಟ್ ನಂಬರ್ ಅನ್ನು ಬದಲಾಯಿಸಿ ಹಣ ವಸೂಲಿ ಮಾಡಿದ್ದು, ಆತನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ವಿನೋದ್ ವಾಲ್ಟರ್ ಪಿಂಟೋ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.18 ರಂದು ತಾಕೋಡೆಯ ಹೋಲಿ ಕ್ರಾಸ್ ಚರ್ಚ್ ಸಮಿತಿಯ ಆರ್ಥಿಕ ಸಮಿತಿಯ ಸದಸ್ಯೆ ಐವಿ ಕ್ರಾಸ್ತಾ ಅವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ತಾಕೋಡೆ ಚರ್ಚ್ ಗುರು ಫಾ. ರೋಹನ್ ಲೋಬೊ ಅವರು ತಾಕೊಡೆಯ ಸುರ್ಲಾಯ್ ಯಲ್ಲಿ ವಾಸ್ತವ್ಯವಿರುವ ಹೆನ್ರಿ ನೊರೋನ್ಹಾ ಅವರ ಮಗ ಮರ್ವಿನ್ ನೊರೋನ್ಹಾ ಅವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ತಂದೆಯ ಕಿಡ್ನಿಯನ್ನು ವರ್ಗಾಯಿಸಲು ಆರ್ಥಿಕ ನೆರವನ್ನು ಕೋರಿ ಮರ್ವಿನ್ ನೊರೊನ್ಹಾ ಅವರ ಬ್ಯಾಂಕ್ ಖಾತೆ ಸಹಿತ ಒಂದು ಮನವಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದು, ಫೋಕಸ್ ಎಂಬ ವಾಟ್ಸಾಪ್ ಗ್ರೂಪಿನ ಅಡ್ಮಿನ್ ವಿನೋದ್ ವಾಲ್ಟರ್ ಪಿಂಟೊ ಎಂಬಾತನು ಚರ್ಚ್ ನ ಮನವಿ ಪತ್ರವನ್ನು ದುರುಪಯೋಗಪಡಿಸಿಕೊಂಡು ಮನವಿ ಪತ್ರದಲ್ಲಿದ್ದ ಖಾತೆಯ ವಿವರವನ್ನು ಅಳಿಸಿ ಹಾಕಿ ತನ್ನ ಬ್ಯಾಂಕ್ A/C No:64135690981 ನ ವಿವರವನ್ನು ಹಾಕಿ ಹಾಕಿ ಹಣ ಸಂಗ್ರಹ ಮಾಡಿಕೊಂಡು ಮೋಸ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ 128/2025 ಕಲಂ: 314, 318(4) ಬಿ.ಎನ್.ಎಸ್ (ಕಲಂ 403, 420 ಐ.ಪಿ.ಸಿ) ರಂತೆ ಪ್ರಕರಣ ದಾಖಲಾಗಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

add - BDG

Related Posts

Leave a Reply

Your email address will not be published.