ಮೂಡುಬಿದರೆ: ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಪಿತೃ ವಿಯೋಗ
ಮೂಡುಬಿದಿರೆ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರ ತಂದೆ ರಮೇಶ್ ಶಾಂತಿ ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರು ಪೂಜೆಯ ಅರ್ಚಕರಾಗಿಯೂ, ಮೂಡುಬಿದಿರೆ ಅಯ್ಯಪ್ಪ ದೇವಸ್ಥಾನ ಸ್ಥಾಪಕರಾಗಿಯೂ ಸೇವೆ ಸಲ್ಲಿಸಿದವರು.

ಅಯ್ಯಪ್ಪ ಗುರುಸ್ವಾಮಿಯಾಗಿ ೫೧ ವರ್ಷಗಳ ಕಾಲವೂ ಯಾತ್ರೆ ಕೈಗೊಂಡ ಅಪರಿಮಿತ ಅಯ್ಯಪ್ಪ ಭಕ್ತರಾಗಿದ್ದರು. ಮಾತ್ರವಲ್ಲದೆ ಅಸಂಖ್ಯ ಮಾಲಾಧಾರಿಗಳಿಗೆ ಮಾಲೆ ಹಾಕಿದವರು.
೫೦೦ ಕ್ಕೂ ಅಧಿಕ ಮಂದಿಗೆ ವ್ರತದೀಕ್ಷೆಯನ್ನು ಇವರು ನೀಡಿದ್ದಾರೆ.ಅವರು ಸುದರ್ಶನ್ ಎಂ ಸಹಿತ ನಾಲ್ಕು ಜನ ಗಂಡು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

















