ಅಮೆರಿಕದಲ್ಲೇ ಬೆಳೆದ ಹಣ್ಣು ಪಾವ್ ಪಾವ್

ಪಾವ್ ಪಾವ್ ಹಣ್ಣಿನ ರುಚಿ ಮಾವು ಮತ್ತು ಬಾಳೆಹಣ್ಣು ತಿಂದಂತೆ ಇರುತ್ತದಂತೆ. ಒಳಗೆ ಬೀಜಗಳು ಇರುತ್ತವೆ. ಹೊರಗೆ ನೋಡಲು ಬೆಣ್ಣೆ ಹಣ್ಣಿನಂತೆ ಕಾಣುವ ಇದು ಹಸಿರು ಮತ್ತು ಹಳದಿ ಬಣ್ಣದಲ್ಲಿ ಸಿಗುತ್ತದೆ.ಮಧ್ಯ ಅಮೆರಿಕ ಮತ್ತು ತೆಂಕಣ ಅಮೆರಿಕದಲ್ಲಿ ಇದು ಕಾಡು ಹಣ್ಣಾಗಿಯೇ ಹೆಚ್ಚು ಪ್ರಸಿದ್ಧ. ಯುಎಸ್‌ಎ, ಕೆನಡಾದಗಳ ತೋಟಗಳಲ್ಲಿ ನಡು ನಡುವೆ ಬೆಳೆಸುವ ಮರವಾಗಿದೆ. ಹಾಗಾಗಿ ಪಾವ್ ಪಾವ್ ಹಣ್ಣು ಬುಡಕಟ್ಟು ಜನರನ್ನು ದಾಟಿ ಪೇಟೆಯವರಿಗೂ ಅಲ್ಲಿ ಸಿಗುತ್ತದೆ.ಅಮೆರಿಂಡಿಯನ್ ಮೂಲ ನಿವಾಸಿಗಳು ಈ ಹಣ್ಣು ಬಳಸುವುದು ಹೆಚ್ಚು. ಈ ಮರದ ತೊಗಟೆಯ ಒಳ ನಾರಿನಿಂದ ಅವರು ಹಗ್ಗ ತಯಾರಿಸುತ್ತಿದ್ದರು. ಅದು ನಾಗರಿಕ ಸಮಾಜಕ್ಕೂ ಹಬ್ಬಿದೆ.
