ಮಂಗಳೂರಿನ ಪೂಮಾ ಮಳಿಗೆ ಶುಭಾರಂಭ

ಮಂಗಳೂರಿನ ಬಂಟ್ಸ್‍ಹಾಸ್ಟೆಲ್‍ನಲ್ಲಿರುವ ಮೆರೈನ್ ಪ್ಯಾರಡೈಸ್ ಪ್ಲಾಜಾದಲ್ಲಿ ಪೂಮಾ ಮಳಿಗೆ ಶುಭಾರಂಭಗೊಂಡಿತು. ಒಂದೇ ಸೂರಿನಡಿಯಲ್ಲಿ ಪೂಮಾ ಕಂಪೆನಿಯ ವಸ್ತ್ರಗಳು ಮತ್ತು ಶೂಷ್, ಆಕ್ಸೆಸಸರೀಸ್‍ಗಳು ಲಭ್ಯವಿದೆ. ನೂತನ ಮಳಿಗೆಯನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಂಗ್ಯೋ ಐಸ್‍ಕ್ರೀಮ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ಜಿ.ಪೈ ಅವರು ಮಾತನಾಡಿ, ಪುಮಾ ಎನ್ನುವುದು ಜರ್ಮನಿಯಲ್ಲಿ ಅಂತರಾಷ್ಟೀಯ ಬ್ರಾಂಡ್ ಆಗಿದೆ. ಅದರಲ್ಲೂ ಶ್ರೇಯಸ್ ಮಾರ್ಕೆಟಿಂಗ್ ಪುಮಾ ಪ್ರಾಂಚೈಸಿಯಲ್ಲಿ ಆರಂಭಿಸಲಾಗಿದ್ದು, ಅತ್ಯದ್ಭುತವಾದ ಶೋರೊಂ ಇದಾಗಿದೆ ಎಂದು ಹೇಳಿದರು.

ನಂತರ ಆ್ಯಟಮ್ ಫಿಟ್ನೆಸ್ ಕ್ಲಬ್‍ನ ಮ್ಯಾನೇಜಿಂಗ್ ಎಡ್‍ವೈಸರ್ ರಾಷ್ಟೀಯ ಕ್ರೀಡಾಪಟು ವಿಕಾಸ್ ಪುತ್ರನ್ ಅವರು ಮಾತನಾಡಿ, ಪುಮಾ ವಿಶ್ವದಲ್ಲೇ ನಂಬರ್ ಒನ್ ಎಂದು ಹೆಸರು ಪಡೆದಿದೆ. ಇದೊಂದು ಕ್ರೀಡಾ ಬ್ರಾಂಡ್ ಇದಾಗಿದ್ದು, ಕ್ರೀಡಾಳುಗಳು ಒಮ್ಮೆ ಆದರೂ ಭೇಟಿ ನೀಡಿ ಖÀರೀದಿಸಿ ಎಂದು ಹೇಳಿದರು. ಶ್ರೇಯಸ್ ಮಾರ್ಕೆಟಿಂಗ್ ಪುಮಾ ಪ್ರಾಂಚೈಸಿಯ ಪಾಲುದಾರರಾದ ಆನಂದ್ ಕುಮಾರ್ ಪೈ ಅವರು ಮಾತನಾಡಿ, ಪುಮಾ ಶೋರುಂನಲ್ಲಿ ವಿಶೇಷ ಪೂಮಾ ಉತ್ಪನ್ನಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ. ಎಲ್ಲಾ ತರಹದ ಬ್ರಾಂಡೆಡ್ ಲೇಡಿಸ್ ಫೂಟ್‍ವೇರ್, ಉಡುಪುಗಳು ಹಾಗೂ ಕ್ರೀಡಾಪಟುಗಳಿಗೆ ಬೇಕಾದಂತಹ ಸ್ಪೋಟ್ರ್ಸ್ ಶೂಸ್ ಇಲ್ಲಿ ಲಭ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೇಯಸ್ ಮಾರ್ಕೆಟಿಂಗ್ ಪುಮಾ ಪ್ರಾಂಚೈಸಿಯ ಪಾಲುದಾರರಾದ ಎಸ್. ಉಮೇಶ್ ಶೈಣೈ, ಎಸ್.ಉಮೇಶ್ ಪೈ ಉಪಸ್ಥಿತರಿದ್ದರು. ಇನ್ನು ಪೂಮಾ ಮಳಿಗೆಯಲ್ಲಿ ಪೂಮಾ ಕಂಪನಿಯ ಪುರುಷ ಮತ್ತು ಮಹಿಳೆಯರ ವಸ್ತ್ರಗಳು, ಶೂಷ್, ಬ್ಯಾಗ್‍ಗಳು, ಕ್ಯಾಪ್ಸ್, ಜಾಕೆಟ್ ಸೇರಿದಂತೆ ಇತರ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ.
