Home Posts tagged #bantwala (Page 33)

ಬಂಟ್ವಾಳ: ಮೇಗಿನ ಕುರಿಯಾಳದಲ್ಲಿ 13ನೇ ಶತಮಾನದ ಶಾಸನ‌ ಪತ್ತೆ

ಬಂಟ್ವಾಳ : ತಾಲೂಕಿನ ಮೇಗಿನ‌ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ‌ ನಿರ್ದೇಶಕ ಪ್ರೊ.ಎಸ್‌.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ)ಶಿಲೆಯಲ್ಲಿ

ಕಾರ್ಮಿಕ ಇಲಾಖೆ ನೀಡುವ ಆಹಾರ ಕಿಟ್‍ನಲ್ಲಿ ತಾರತಮ್ಯ : ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ

ಬಂಟ್ವಾಳ: ಕೆಎಸ್‍ಆರ್‍ಟಿಸಿಯ ಐಸಿಯು ಬಸ್ ಸೇವೆ, ಕೋವಿಡ್ ವ್ಯಾಕ್ಸಿನ್ ನೀಡಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಆಹಾರದ ಕಿಟ್‍ನಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಿ.ಸಿ. ರೋಡಿನ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸರಕಾರದ ಸೌಲಭ್ಯಗಳು ನೀಡಿಕೆಯಲ್ಲಿ ಕಾಂಗ್ರೆಸ್ ಹಾಗೂ

ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಬಂಟ್ವಾಳ: ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲು ಹಾಗೂ ಕಳ್ಳಿಗೆ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬುಧವಾರ ಶಾಲೆಯಲ್ಲಿ ನಡೆಯಿತು. ಮಾಜಿ ಸಚಿವ, ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಸಾಂಕೇತಿಕವಾಗಿ ಪುಸ್ತಕ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ ಪ್ರಗತಿಯ ಸಂಕೇತ ಆದರೆ ಹಿಂದೆಲ್ಲಾ ಎಲ್ಲರಿಗೂ ಶಿಕ್ಷಣ ಪಡೆಯುವ

1ನೇ ತರಗತಿಯಿಂದ ಶಾಲೆ ಆರಂಭಿಸಿ: ಪ್ರಕಾಶ್ ಅಂಚನ್ ನಿಯೋಗದಿಂದ ಶಿಕ್ಷಣ ಸಚಿವರಿಗೆ ಮನವಿ

ಬಂಟ್ವಾಳ: ಶಾಸಕ ರಾಜೇಶ್ ನಾಕ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಭೇಟಿ ಮಾಡಿತು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಒಂದನೇ ತರಗತಿಯಿಂದಲೇ ಆರಂಭಿಸಬೇಕು ಎನ್ನುವ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು 9 ಮತ್ತು 10ನೇ ತರಗತಿಗಳು ಆರಂಭಗೊಂಡ ಬಳಿಕ ಎರಡು ದಿನದಲ್ಲಿ

ಬಿ.ಸಿ ರೋಡ್‌ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗ ಕೋವಿಡ್ ಮಾರ್ಗಸೂಚಿಯನ್ವಯ ಸರಳವಾಗಿ ಆಚರಿಸಲಾಯಿತು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಕ್, ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಬಂಟ್ವಾಳ ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಗೃಹರಕ್ಷಕದಳ

ಬಂಟ್ವಾಳ: ವೇತನ ಪಾವತಿಯಾಗದ ಕಾರಣ ಕ್ಯಾಂಟೀನ್ ಬಂದ್‍ಗೊಳಿಸಿ ಪ್ರತಿಭಟನೆ

ವೇತನ ಪಾವತಿಯಾಗದ ಕಾರಣ ಕ್ಯಾಂಟೀನ್ ಬಂದ್ ಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳ ಸಂಕಷ್ಟಕ್ಕೆ ಸ್ಪಂದಿಸಿರುವ ಮಾಜಿ ಸಚಿವ ಬಿ. ರಮನಾಥ ರೈ ಆಹಾರದ ಕಿಟ್ ನೀಡುವ ಭರವಸೆ ನೀಡಿದ್ದಾರೆ. ಬುಧವಾರ ಕ್ಯಾಂಟೀನ್ ಗೆ ಭೇಟಿ ನೀಡಿದ ಅವರು ಇಂದಿರಾ ಕ್ಯಾಂಟೀನ್ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ ಎಸ್

ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲ್ ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಸೊರ್ನಾಡು ಎಂಬಲ್ಲಿ ಸಾರ್ವಜನಿಕ ಸ್ವಾಮ್ಯಕ್ಕೊಳಪಟ್ಟ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳವು ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸ್ಥಳೀಯ ಅರ್ಬಿ ನಿವಾಸಿ ಐವನ್ ಚಾರ್ಲ್ ಪಿಂಟೋ(43) ಹಾಗೂ ಆತನಿಗೆ ಸಹಕರಿಸಿದ ಆರೋಪದಡಿ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್

ಎಸೆಸೆಲ್ಸಿ ಫಲಿತಾಂಶ: ಬಂಟ್ವಾಳದ ಎನ್. ಪ್ರತೀಕ್ ಮಲ್ಯ ಪೂರ್ಣ ಅಂಕ

ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿರುವ ಎಸ್‌ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ 625 ಅಂಕ ಪಡೆದುಕೊಂಡು ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಇಲ್ಲಿನ ತ್ಯಾಗರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ಎನ್.ರಾಧಿಕ ಮಲ್ಯ ಅವರ ಪುತ್ರರಾಗಿರುವ ಪ್ರತೀಕ್ ಮುಂದೆ ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ

ಬೋರ್‍ವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂಬ ಆರೋಪ : ವ್ಯಕ್ತಿಯೋರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ

ಬಂಟ್ವಾಳ: ಬೊರೆವೆಲ್ ಕೊರೆಸುವ ವಾಹನ ಬಂದು ರಸ್ತೆ ಹಾಳಾಗಿದೆ ಎಂದು ಆರೋಪಿಸಿ ವ್ಯಕ್ತಿಯೊರ್ವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ ಘಟನೆ ಸಂಗಬೆಟ್ಟು ಗ್ರಾಮದ ಅಳಿಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಲ್ವಿನ್ ರಿಚರ್ಡ್ ಫಲೇರಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳೀಯ ನಿವಾಸಿ ಅನಿಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ರಿಚರ್ಡ್ ಫಲೇರಾ ತನ್ನ ತಂದೆಯಿಯೊಂದಿಗೆ ಅಳಿಕೆ ಎಂಬಲ್ಲಿ

ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಘೋಷಿಸಿದ ವೀಕೆಂಡ್ ಕರ್ಪ್ಯೂಗೆ ಬಂಟ್ವಾಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಟ್ಟುನಿಟ್ಟಿನ ಕರ್ಪ್ಯೂ ಪಾಲನೆಯಾಗದ ಹಿನ್ನಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ಸರಕಾರಿ ಅಂಗಡಿ, ಬಸ್, ಕಾರು, ರಿಕ್ಷಾ ಸಹಿತ ಖಾಸಗಿ ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಕೆಲವೊಂದು ಅಂಗಡಿ, ಕಚೇರಿಗಳು ಸ್ವಯಂ ಪ್ರೇರಿತರಾಗಿ ಬಂದ್ ಗೊಳಿಸಿ ವೀಕೆಂಡ್ ಕರ್ಪ್ಯೂಗೆ ಬೆಂಬಲ ನೀಡಿದ್ದಾರೆ. ಮೆಡಿಕಲ್,