ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಇದರ 26ನೇ ಶಾಖೆಯ ಬೆಳ್ಳಾರೆಯ ಪ್ರಸಾದ್ ಟೆಕ್ಸ್ ಟೈಲ್ ಕಟ್ಟಡದ ನೆಲ ಮಹಡಿಯಲ್ಲಿ ಜೂನ್ 8ರಂದು ಉದ್ಘಾಟನೆಗೊಳ್ಳಲಿದೆ. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ೨೬ನೇ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೆ. ಜೈರಾಜ್
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮತ್ತು ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಹಕಾರಿ
ಬೆಳ್ಳಾರೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ’ಸುಸ್ಥಿರ ಕೃಷಿಗಾಗಿ’ ರೈತ ಸಂಗೋಷ್ಟಿ ಎಂಬ ಕಾರ್ಯಕ್ರಮವು ಮೇ.20ರಂದು ಬೆಳಿಗ್ಗೆ 9.30ಕ್ಕೆ ಬೆಳ್ಳಾರೆಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಂದೋರ್‌ನ ಶ್ರೀ ಸಿದ್ಧಿ ಅಗ್ರಿ ಕೋ ಪ್ರೈವೇಟ್ ಲಿಮಿಟೆಡ್‌ನ ಪೆರುವೋಡಿ ನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ.ಡಿ
ಕಳೆದ 16 ವರುಷಗಳಿಂದ ಹದೆಗೆಟ್ಟಿರುವ ಬೆಳ್ಳಾರೆ ಗ್ರಾಮದ ಬೀಡು-ಪಾಟಾಜೆ ರಸ್ತೆ ಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ನಮ್ಮ ಬೀಡು, ಪಾಟಾಜೆ ರಸ್ತೆ ದುರಸ್ತಿಗೊಳಿಸುವ ಭರವಸೆಯನ್ನು ಸರಕಾರ ಹಾಗೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೊಡದೇ ಹೋದಲ್ಲಿ ಇಲ್ಲಿನ ಎಲ್ಲಾ ನಿವಾಸಿಗಳು ರಸ್ತೆಗೆ ಇಳಿದು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ
ಬೆಳ್ಳಾರೆಯ ಹೋಟೆಲೊಂದರಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಅಪಾರ ನಷ್ಟವಾದ ಘಟನೆ ನ.12 ರಂದು ನಡೆದಿದೆ.ಬೆಳ್ಳಾರೆ ಮುಖ್ಯರಸ್ತೆ ಸಮೀಪವಿರುವ ತೃಪ್ತಿ ಹೋಟೆಲ್ ನಲ್ಲಿ ಗ್ಯಾಸ್ ಸ್ಟವ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹತ್ತಿರವಿದ್ದ ಪ್ರಿಡ್ಜ್ ಸಂಪೂರ್ಣ ಸುಟ್ಟುಹೋಗಿದೆ. ಪ್ರಿಡ್ಜ್ ಮೇಲಿದ್ದ ಎರಡು ಮೊಬೈಲ್ ಹಾಗೂ ಇನ್ನಿತರ ಹಲವು ವಸ್ತುಗಳು ಸುಟ್ಟುಹೋಗಿವೆ. ನೆರೆಕರೆಯ ಅಂಗಡಿಯವರು ಹಾಗೂ ರಿಕ್ಷಾ ಚಾಲಕರು ಮತ್ತಿತರರು ಬೆಂಕಿ ನಂದಿಸಲು ಸಹಕರಿಸಿದ್ದು ಹೆಚ್ಚಿನ
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ, ನಡೆದ ಸುಮಾರು ₹1,48,000 ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ ₹ 30,000/- ಸೇರಿ ಒಟ್ಟು ₹1,78,000/- ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಲಾಗಿ, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ
ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು ಕೊಳೆ ಶಂಕೆ ವ್ಯಕ್ತವಾಗಿದೆ.ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ಮಹಿಳೆಯ ಶವ ಪತ್ತೆಯಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಮೃತ ಮಹಿಳೆಯನ್ನು ಪಾಟಾಜೆಯ ನಳಿನಿ ಎಂದು ಗುರುತಿಸಲಾಗಿದೆ. ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಸುಳ್ಯ: ಬೆಳ್ಳಾರೆ ದಿನಾಂಕ 08-04-2024 ರಂದು ಬೆಳ್ಳಾರೆ ಪೋಲಿಸ್ ( ಹೆಡ್ ಕಾನ್ಸ್ಟೇಬಲ್ ) ಸತೀಶ್ ಪುತ್ತೂರು- ಸ್ಟೇಟ್ ಬ್ಯಾಂಕ್ ಬಸ್ಸಿನಲ್ಲಿ ಬಿದ್ದು ಸಿಕ್ಕಿದ 10.000/ ನಗದು ಹಾಗೂ ದಾಖಲೆಗಳನ್ನು ಒಳಗೊಂಡ ಪ್ಲಾಸ್ಟಿಕ್ ಲಕೋಟೆಯನ್ನು ಅದರ ವಾರಾಸುದಾರ ರುಕ್ಮಯ್ಯ ಗೌಡ ಪೈಚಾರುರವರ ಮೊಬೈಲ್ ನಂ. ಸಂಗ್ರಹಿಸಿ ಠಾಣೆಗೆ ಕರೆಸಿ ಈ ದಿನ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳ್ಳಾರೆ: ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದೆ.
ಬೆಳ್ಳಾರೆ. ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಮತ್ತು ಹೊಸ ನೋಂದಣಿಗೆ 28 ಫೆಬ್ರವರಿ 2024 ಕೊನೆಯ ದಿನಾಂಕವಾಗಿರುತ್ತದೆ. *ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಬೇಕಾಗಿರುವ ದಾಖಲೆಗಳು:*ಎಲ್ಲಾ ನೋಂದಾಯಿತ ಸದಸ್ಯರ ಫೋಟೋ*ಹೊಸ ಸದಸ್ಯರ ಸೇರ್ಪಡೆ ಇದ್ದಲ್ಲಿ ಅವರ ಆಧಾರ್ ಪ್ರತಿ ಹಾಗೂ ರೇಷನ್ ಕಾರ್ಡು ಪ್ರತಿ*ಹೊಸ ನೋಂದಣಿಗೆ ಬೇಕಾಗುವ ದಾಖಲೆಗಳು*ರೇಷನ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ ಆಧಾರ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ