ಬ್ರಹ್ಮಾವರ: ಬಾರಕೂರಿನ ವಿವಿಧ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಮೂಡುಕೇರಿ ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನ, ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರೀ ದೇವಸ್ಥಾನ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಕಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಶ್ರೀ ಏಕನಾಥೇಶ್ವರೀ ದೇವಸ್ಥಾನ,
ಬ್ರಹ್ಮಾವರ : ವಿಶ್ವಕ್ಕೆ ಅಚ್ಚರಿ ಮೂಡಿಸಿದ ಭಾರತದ ಚಂದ್ರಯಾನದ ಯಶಸ್ಸಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.ಬ್ರಹ್ಮಾವರ ಫ್ರೆಂಡ್ಸ್ ಮತ್ತು ಡೈಮಂಡ್ ಜಿಮ್‍ನ ಸದಸ್ಯರು ಭಾರತದ ಹೆಮ್ಮೆಯ ವಿಜ್ಞಾನಿಗಳ ತಂಡದ ಶ್ರಮಕ್ಕೆ, ಇಸ್ರೋ ಸಂಸ್ಥೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಮತ್ತು ಭಾರತ ಮಾತೆಗೆ ಜೈ ಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ದೇವಾನಂದ ನಾಯಕ್, ಅರ್ಜುನ ಪ್ರಭು, ಮಧುಸೂಧನ
ಬ್ರಹ್ಮಾವರದ ಹಾನಸ ಅರೆಮಾದನಹಳ್ಳಿ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 41 ನೇ ಆರಾಧನಾ ಮಹೋತ್ಸವ ನಡೆಯಿತು. ಉಡುಪಿ ಜಿಲ್ಲೆಯ ಕೊಕ್ಕರ್ಣೆಬಳಿಯ ಶಾಖಾ ಮಠ ಕಜ್ಕೆಯಲ್ಲಿ ಗುರುಪರಂಪರೆಯ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆಚರಣೆಯ ಸಂದರ್ಭ ಜರುಗಿತು. ಈ ಸಂದರ್ಭ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಇತಿಹಾಸ ಇರುವ ಗುರು ಪರಂಪರೆಯಲ್ಲಿ, ಮೂಲ ಗುರುಗಳು ದೇಶದಾದ್ಯಂತ ನಡೆದಾಡಿದ ಮತ್ತು ಪವಾಡಗಳ ಕುರಿತು ಮತ್ತು ಹಾಸನದ ಬಳಿಯ
ಬ್ರಹ್ಮಾವರ: ಹಿಂದಿನ ಬಿಜೆಪಿ ರಾಜ್ಯ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ “ಅಗ್ನಿ ಪಥ್” ಸೇನಾಪೂರ್ವ ತರಬೇತಿಯ ಮರು ಚಾಲನೆಗೆ ಕಾಂಗ್ರೆಸ್ ರಾಜ್ಯ ಸರಕಾರ ಅಸ್ತು ಎಂದಿದೆ. ರಾಜ್ಯದ ಕರಾವಳಿಯ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಕಳೆದ ವರ್ಷ “ಅಗ್ನಿ ಪಥ್” ಸೇನಾ ಪೂರ್ವ ತರಬೇತಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ 2 ತಂಡ ತರಬೇತಿ ಮುಗಿಸಿ ಅವರಲ್ಲಿ ಅನೇಕರು ಸೇನೆ
ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು. ಬ್ರಹ್ಮಾವರ ವ್ಯವಸಾಯ ಸೇವಾ
ಬ್ರಹ್ಮಾವರದಲ್ಲಿ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬ್ರಹ್ಮಾವರ ರಥ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದಿದೆ. ಗೋಪಾಲ ಪೂಜಾರಿ ಎನ್ನುವವರ ಮನೆಯು ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ನೀರೀಕ್ಷಕ ಲಕ್ಷ್ಮೀ ಮೀನಾರಾಯಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿತಗೊಂಡ ಸಂದರ್ಭದಲ್ಲಿ ಗೋಪಾಲ ಪೂಜಾರಿಯವರ
ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್, ಬ್ರಹ್ಮಾವರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಜಶೇಖರ ವಂದಲಿ ಮಾತನಾಡಿ, ನಾನಾ ಮಾದಕ ವಸ್ತುಗಳ ಜಾಲಕ್ಕೆ ಯುವಜನರನ್ನೆ ಟಾರ್ಗೆಟ್ ಮಾಡಲಾಗುತ್ತಿರುವ ಕಾರಣ ಯುವಸಮೂಹ ಜಾಗೃತರಾಗ ಬೇಕಾಗಿದೆ. ಮೋಜು