Home Posts tagged #china

ಅತಿ ಹೆಚ್ಚು ಚಪ್ಪರೆ ಬದನೆ ಬೆಳೆಯುವ ದೇಶ ಮತ್ತುಅತಿ ಹೆಚ್ಚು ಟೊಮ್ಯಾಟೊ ರಫ್ತು ಮಾಡುವ ದೇಶ

ಮಧ್ಯ ಅಮೆರಿಕ ಮೂಲದ ಟೊಮ್ಯಾಟೊ ಇಲ್ಲವೇ ಚಪ್ಪರಬದನೆ ಯುರೋಪಿನಲ್ಲಿ ಹೆಚ್ಚು ಬಳಸುವರು ಹಾಗೂ ಏಶಿಯಾದಲ್ಲಿ ಹೆಚ್ಚು ಬೆಳೆಯುವರು.ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿದೆ ಚೀನಾ. ಕ್ಸಿಂಜಿಯಾಂಗ್ ಟೊಮ್ಯಾಟೊ ತೋಟಗಾರಿಕೆ ಪ್ರಾಂತ್ಯವಾಗಿದೆ ಭಾರತ ಎರಡನೆಯ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಕರ್ನಾಟಕ ಹೆಚ್ಚು ಬೆಳೆಯುವ ರಾಜ್ಯಗಳಾಗಿವೆ. ಚೀನಾವು

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಶತಮಾನದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ || Olympic Games Paris 2024

ಒಲಿಂಪಿಕ್ಸ್ ಬೆಳಕಿನ ಪಂಜು ಗ್ರೀಸಿನ ಅಥೆನ್ಸ್‍ನಿಂz 12 ದಿನಗಳ ಸಾಗರ ಪಯಣದ ಬಳಿಕ ಫ್ರಾನ್ಸಿನ ಮಾರ್ಸೆಲ್ ಬಂದರು ತಲುಪಿದೆ. ಸಾವಿರ ದೋಣಿಗಳು ಕವಾಯತಿನ ನಡುವೆ ಒಲಿಂಪಿಕ್ಸ್ ದೊಂದಿ ತಂದ 1896ರ ಬೆಲೆಮ್ ವ್ಯಾಪಾರಿ ಹಡಗನ್ನು ಮಾರ್ಸೆಲ್‍ನಲ್ಲಿ ಸ್ವಾಗತಿಸಲಾಯಿತು. ಕಳೆದ ಮೂರು ಒಲಿಂಪಿಕ್ಸ್‍ಗಳಲ್ಲಿ ಮಾರ್ಸೆಲ್‍ನವರೇ ಇದ್ದ ಫ್ರಾನ್ಸಿನ ಹುಟ್ಟು ಹಾಕು ತಂಡವು ಚಿನ್ನ ಗೆದ್ದಿತ್ತು. ಮಾಜೀ ಒಲಿಂಪಿಕ್ಸ್ ಆಟಗಾರ ಟೋನಿ ವಿಸ್ಟಾಂ ಸಕಲ ಸೇನಾ, ಪೋಲೀಸು, ನಾಗರಿಕ

ಗುಕೇಶ್ ದೊಮ್ಮರಾಜು ಲೋಕ ದಾಖಲೆ ಬಾಲಕ

ಗುಕೇಶ್ ಎಂಬ ಹದಿನೇಳರ ಭಾರತದ ಬಾಲಕನು ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗಿ ಇತಿಹಾಸ ಬರೆದಿದ್ದಾನೆ. 17 ಸುತ್ತಿನ ಹೋರಾಟದಲ್ಲಿ ಗುಕೇಶ್ ದೊಮ್ಮರಾಜು ಅತಿ ಚಿಕ್ಕ ಎಂದರೆ 17 ವರುಷ ಹತ್ತು ತಿಂಗಳಲ್ಲಿ ಫಿಡೆ 2024ರ ಕ್ಯಾಂಡಿಡೇಟ್ಸ್ ವಿಜಯಿಯಾಗಿದ್ದಾನೆ. ಆ ಮೂಲಕ ಗುಕೇಶ್‍ಗೆ ಚೆಸ್ ವಿಶ್ವ ಚಾಂಪಿಯನ್ ಜೊತೆ ಸ್ಪರ್ಧಿಸಿ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಲು ಬಾಗಿಲು ತೆರೆದಂತಾಗಿದೆ. ರಶಿಯಾದ ಗ್ಯಾರಿ ಕಾಸ್ಪರೋವ್ 20 ವರುಷ 11 ತಿಂಗಳಲ್ಲಿ, ನಾರ್ವೆಯ ಮ್ಯಾಗ್ನಸ್

ಮಂಗನಿಂದ ಸೇತುವೆ ಕಟ್ಟಲು ಕಲಿತ ಮಾನವ

ಮಹಾರಾಷ್ಟ್ರದ ಸಚಿವ ಸಂಪುಟ ಸಭೆ ಸೇರಿ ಹೊಸ ಉದ್ಘಾಟನೆ ಆಗಲಿರುವ ಸಮುದ್ರ ಸೇತುವೆಗೆ 250 ರೂಪಾಯಿ ಸುಂಕ ನಿರ್ಧಾರ ಮಾಡಿತು. ವಾಹನಗಳಿಗೆ 250 ರೂಪಾಯಿ ಸುಂಕವನ್ನು ಹಲವು ಸಮಾಜ ಸೇವಕರು ಖಂಡಿಸಿದರು. ಚುನಾವಣೆ ಬರುವಾಗ ಇಷ್ಟು ಸುಂಕವಾದರೆ ಚುನಾವಣೆ ಮುಗಿದ ಮೇಲೆ ಸುಂಕ ದುಪ್ಪಟ್ಟು ಮಾಡುವ ದುರಾಲೋಚನೆ ನಿಮ್ಮದು ಎಂದು ಕೆಲವರು ಕೀಟಲೆ ಮಾಡಿದ್ದೂ ಆಯಿತು. ಭಾರತದ ಅತಿ ಉದ್ದದ ಸೇತುವೆಯಾದ ಇದನ್ನು ಪ್ರಧಾನಿ ಮೋದಿಯವರು ಮುಂದಿನ ವಾರ ಉದ್ಘಾಟನೆ ಮಾಡಲಿರುವರು. ಮುಂಬಯಿ

ಚೀನಾದಲ್ಲಿ ಧಾರಕಾರ ಮಳೆ: 12 ಮಂದಿ ಸಾವು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯ ಸ್ಥಳಾಂತರ

ಚೀನಾದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಇದುವರೆಗೂ 12 ಮಂದಿ ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಹೆನ್ನಾನ್ ಪ್ರಾಂತ್ಯದ ಝೆಂಗ್ಜು ಪ್ರದೇಶದಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ 201.9 ಮಿ,ಮೀ ಮಳೆಯಾಗಿದೆ. ಝೆಂಗ್ಜು ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ಹರಿಯುತ್ತಿದ್ದು, ನೂರಾರು ಮನೆ ಮಠಗಳು ನಾಶವಾಗಿವೆ. ಇದುವರೆಗೂ 12 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಮುಂಜಾಗೃತಾ