ಕ್ರಿಸ್ಮಸ್ ಆಚರಣೆಯ ಪ್ರಯುಕ್ತ ಮರಳು ಶಿಲ್ಪಕಲಾವಿದರು ಪಣಂಬೂರು ಬೀಚ್‌ನಲ್ಲಿ ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಗಮನ ಸೆಳೆದಿದ್ದಾರೆ. ಮರಳು ಶಿಲ್ಪ ಕಲಾವಿದರಾದ ಪ್ರಸಾದ್ ಮಲ್ಯ ಸುರತ್ಕಲ್, ಪ್ರಣಮ್ ದೇವಾಡಿಗ ಉಡುಪಿ ಅವರು ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಪ್ರವಾಸಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21 ರಂದು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ ಆಕರ್ಷಕ ಕ್ರಿಸ್ಮಸ್ ಸ್ಕಿಟ್‌ನೊಂದಿಗೆ ಆಚರಣೆಯು ಪ್ರಾರಂಭವಾಯಿತು. ಕ್ರಿಸ್‌ಮಸ್ ಕ್ಯಾರೋಲ್‌ಗಳಿಗೆ
ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ವತಿಯಿಂದ ‘ಕ್ರಿಸ್ಮಸ್ ಟ್ರೋಫಿ-2023′ ಕ್ರೀಡಾಕೂಟ ಅಸೈಗೋಳಿ ಐಟಿಐ ಕಾಲೇಜು ಮೈದಾನದಲ್ಲಿ ನಡೆಯಿತು. ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಕ್ರಿಸ್ಮಸ್ ಟ್ರೋಫಿ-2023’ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಏಸು ಕ್ರಿಸ್ತನ ಜನ್ಮದಿನ ಪ್ರಯುಕ್ತ ಶಾಂತಿ, ಸೌಹಾರ್ದತೆ ಉದ್ದೇಶದಿಂದ ಕ್ರೀಡಾಕೂಟ ಅಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.