Home Posts tagged #kadaba (Page 14)

ಕಡಬದ ಪೆರಾಬೆಯಲ್ಲಿ ಅನುಮಾನಸ್ಪದ ವ್ಯಕ್ತಿಯ ಬಂಧನ

ಕಡಬ ತಾಲೂಕಿನ ಪೆರಾಬೆ ಗ್ರಾಮದ ಮಾರ್ ಇವಾನಿಯೋಸ್ ಮಹಿಳಾ ಬಿಎಡ್ ಕಾಲೇಜಿನ ಕಟ್ಟಡದ ಹಿಂಬದಿಯಲಲ್ಲಿ ಮುಖಕ್ಕೆ ಬಟ್ಟೆಯನ್ನು ಕಟ್ಟಿ ವ್ಯಕ್ತಿಯ ಗುರುತು ಸಿಗದಂತೆ ಅಡಗಿ ಕುಳಿತುಕೊಂಡೊಬ್ಬನನ್ನು, ರಾತ್ರಿ ಗಸ್ತು ತಿರುಗುತ್ತಿದ್ದ ಕಡಬ ಠಾಣೆಯ ಸಹಾಯಕ ಉಪನರೀಕ್ಷಕರಾದ ಸುರೇಶ್ ಸಿಟಿಯವರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಶರತ್ (34) ಮರವೂರು, ಮಂಗಳೂರು

ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವನ ಸಂವರ್ಧನಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮ ಜರಗಿತು. ಶ್ರೀ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಸಂಬಂಧವಾಗಿ ಪ್ರಸ್ತಾಪಿತ ರಸ್ತೆಗಳ 14 ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ವಿವಿಧ ಸಸ್ಯಗಳನ್ನು ನೆಡುವ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವನ್ನು ಶ್ರೀ ದೇವಳದ ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ 14 ಕಡೆ ಏಕ ಕಾಲದಲ್ಲಿ ಗಿಡ ನೆಟ್ಟು ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾದ

ಕಡಬ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ‌ ದಿನಾಚರಣೆ:ಪತ್ರಿಕಾ ವಿತರಕ ಬಾಲಕೃಷ್ಣ ರೈ ಗೆ ಸನ್ಮಾನ

ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯು ಕಡಬ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಡಬ ಠಾಣಾ ಉಪನಿರೀಕ್ಷಕ ರುಕ್ಮನಾಯ್ಕ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ಭಾಗವಹಿಸಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಪತ್ರಿಕಾ ವಿತರಣಾ ಕ್ಷೇತ್ರದಲ್ಲಿನ ಸೇವೆಗಾಗಿ ಪತ್ರಿಕಾ ವಿತರಕ ಬಾಲಕೃಷ್ಣ ರೈ ಅವರನ್ನು

ಸುಬ್ರಹ್ಮಣ್ಯ-ಗುಂಡ್ಯ ರಸ್ತೆಯಲ್ಲಿ ವಾಹನ ಅಟ್ಟಾಡಿಸಿದ ಕಾಡಾನೆ

ಕಡಬ:ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ. ಈ ರಸ್ತೆಯ ಮೂಲಕ ತೆರಳುವವರು ಜಾಗ್ರತೆಯಿಂದ ಸಂಚರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.

ಕಡಬ: ಇಲಿ ಜ್ವರಕ್ಕೆ ಯುವಕ ಬಲಿ

ಕಡಬ ತಾಲೂಕು ಐತ್ತೂರು ಗ್ರಾಮದ ಯುವಕನೊಬ್ಬ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ.  ಪಂಜೋಡಿ ನಿವಾಸಿ ಶಿವಪ್ಪ ಗೌಡರ ಪುತ್ರ ಮೋಹಿತ್ (19) ಇಲಿ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಯುವಕ.ಕಳೆದ ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ

ಕಡಬದಲ್ಲಿ ಸ್ಕೂಟಿಗೆ ಓಮಿನಿ ಕಾರು ಢಿಕ್ಕಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

ಕಡಬ :ಬಲ್ಯ ಸಮೀಪ ಇಂದು ಬೆಳಿಗ್ಗೆ ಅಲಂಕಾರಿನಿಂದ ಕಡಬಕ್ಕೆ ಬರುತ್ತಿದ್ದ ಸ್ಕೂಟಿಗೆ ಬಲ್ಯ ಸಮೀಪ ಓಮಿನಿ ಮಾರುತಿ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿದ್ದು ಬೈಕ್ ಸವಾರರನ್ನು ಪ್ರಾಥಮಿಕ ಚಿಕಿತ್ಸೆಗೆ ಕಡಬ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಗಿದೆ. ಬೈಕ್ ಸವಾರರೊಬ್ಬರನ್ನು ಅಲಂಕಾರು ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದಿರುವ ಓಮಿನಿ ಕಾರು ಕಡಬದಿಂದ ಕುಂತೂರು ಕಡೆಗೆ

ಕಡಬದಲ್ಲಿ ಅಡಿಕೆ ಚೀಲ ಕದ್ದೊಯ್ದ ಪ್ರಕರಣ: ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ :ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಅಡಿಕೆ ಚೀಲದೊಂದಿಗೆ ರಂದು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ ಎಂಬವರ ಮನೆಯಿಂದ ಅಡಿಕೆ ಚೀಲ ಕಳವಾಗಿತ್ತು.ಆರೋಪಿ ಪರಮೇಶ್ವರ್ ಎಂಬಾತನನ್ನು ಇಂದು ಮುಂಜಾನೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಿ ಆತನು ಕಳವು ಮಾಡಿದ ಅಡಿಕೆಯನ್ನು ಮತ್ತು ಕಳವಿಗೆ ಉಪಯೋಗಿಸಿದ

ಸವಣೂರಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆ

ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಸವಣೂರು ಗ್ರಾ.ಪಂ.ನಲ್ಲಿ ಕೋವಿಡ್ ಕಾರ್ಯಪಡೆಯ ವರದಿ ಪರಿಶೀಲನೆ ನಡೆಸಿ ಮಾತನಾಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್ ಕೇರ್ ಸೆಂಟರ್ ಗೆ

ಕಡಬದಲ್ಲಿ ಕಾಡಾನೆ ಹಾವಳಿ: ಕೃಷಿ ತೋಟಗಳಿಗೆ ಹಾನಿ

ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಮಾಡಿ ಹಾನಿಯುಂಟು ಮಾಡುತ್ತಿವೆ. ಕೃಷಿ ತೋಟಗಳಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪಿಲಿಕಜೆ ಎಂಬಲ್ಲಿ ಪಿ.ಸಿ.ಸುಂದರ ಗೌಡ ಎಂಬುವರ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಕೆ, ತೆಂಗು, ಕೊಕ್ಕೋ, ಬಾಳೆ ಮೊದಲಾದ ಕೃಷಿಯನ್ನು ನಾಶಪಡಿಸಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ಭಾಗದ ರೈತರು

ಕಲ್ಲಾಜೆಯಲ್ಲಿ ತಬ್ಬಲಿ ಸಹೋದರರ ಮನೆಗೆ ವಿದ್ಯುತ್ ಸಂಪರ್ಕ

ಕಡಬ: ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿರುವ ತಬ್ಬಲಿ ಸಹೋದರರು ಇರುವ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅವರ ಮನೆ ಬೆಳಕು ನೀಡುವ ಮೂಲಕ ಕಡಬ ವಿಶ್ವ ಹಿಂದೂ ಪರಿಷತ್ ಸಂಘಟನೆ ಮಾನವೀಯತೆ ಮೆರೆದಿದೆ. ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ದಿ.ಗೋಪಾಲ ಗೌಡ, ದಿ. ಹೇಮಾವತಿ ದಂಪತಿಯ ಪುತ್ರರಾದ ಹಿತೇಶ್ ಹಾಗೂ ತೀರ್ಥಪ್ರಸಾದ್ ಅವರು ಕಳೆದ16 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರೆ. ಕಳೆದ 2 ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು.