ಕಾಪು ಕ್ಷೇತ್ರವನ್ನು ಗೆದ್ದು ಬೀಗಿದ ಭಾರತೀಯ ಜನತಾ ಪಾರ್ಟಿಯ ನೂರಾರು ಕಾರ್ಯಕರ್ತರು ಹಾಲಿ ಹಾಗೂ ಮಾಜಿ ಶಾಸಕರನ್ನು ಸೇರಿಕೊಂಡು ಕ್ಷೇತ್ರದ್ಯಾಂತ ರೋಡ್ ಶೋ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.ಹಾಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಹಾಗೂ ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್ ಉಪಸ್ಥಿತಿಯಲ್ಲಿ ಪಡುಕರೆಯಿಂದ ಚಾಲನೆಗೊಂಡ ರೋಡ್ ಶೋ ಉದ್ಯಾವರ, ಕಟಪಾಡಿ, ಶಿರ್ವ,
ವಿನಯ್ ಕುಮಾರ್ ಸೊರಕೆ ಉಡುಪಿಯ ಬಾಲಕಿಯರ ಸರಕಾರಿ ಕಾಲೇಜಿಗೆ ತಮ್ಮ ಕುಟುಂಬದದೊಂದಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಕುರಿತು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಕಿಡಿಕಾರಿದರು. ಅವರು ವಿ4 ನ್ಯೂಸ್ ನೊಂದಿಗೆ ಮಾತನಾಡಿ, ಬಜರಂಗದಳ ಸಂಘಟನೆಯ ಮುಖಾಂತರ ಅಕ್ರಮ ದನ ಸಾಗಾಟ ಹಾಗೂ ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. . ಇಂತಹ ಸಂಘಟನೆಯನ್ನು ನಿಷೇಧಕ್ಕೆ ಮುಂದಾಗುತ್ತಿರುವ ಸರಿಯಲ್ಲ.ಇದು ಕಾಂಗ್ರೆಸ್ ಅವನತಿ ಹೋಗುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ ಎಂದು ಅವರು
ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ಪರ ಗೆಲುವಿನ ವಾತಾವರಣ ಇದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಕಾಪುವಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾರ್ಯಕರ್ತರು ಅತೀ ಉತ್ಸಾಹದಲ್ಲಿದ್ದು, ಸುರೇಶ ಶೆಟ್ಟಿ ಗುರ್ಮೆ ಕಾಪುವಿನಲ್ಲಿ ವಿಜಯಪತಾಕೆ ಹಾರಿಸುವುದು ಖಚಿತವಾಗಿದೆ.ಕಾಪುವಿನ ಶಾಸಕ ಲಾಲಾಜಿ ಮೆಂಡನ್ ರವರು
ಕಾಪು ಪುರಸಭೆ ವ್ಯಾಪ್ತಿಯ ಕಾಪು ಪಡು ಗ್ರಾಮ ವ್ಯಾಪ್ತಿಯ ರಾಮನಗರ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರ ಚುನಾವಣೆ ಉಸ್ತುವಾರಿ ಸುಲೋಚನಾ ಭಟ್, ಹಿರಿಯರಾದ ಗಂಗಾಧರ್ ಸುವರ್ಣ, ಪುರಸಭೆ ಬಿಜೆಪಿ ಅಧ್ಯಕ್ಷರು ಸಂದೀಪ್ ಶೆಟ್ಟಿ, ಪುರಸಭೆ ಸದಸ್ಯರು ನಿತಿನ್ ಕುಮಾರ್,
ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಪು ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೇ ಸುರೇಶ್ ಶೆಟ್ಟಿ ಅವರ ಮಾಧ್ಯಮ ಕೇಂದ್ರ ಮತ್ತು ಕಾಲ್ ಸೆಂಟರ್ ಉದ್ಘಾಟಿಸಲಾಯಿತು. ರಾಜ್ಯ ಚುನಾವಣಾ ಸಹ ಉಸ್ತುವಾರಿಗಳಾದ ಕೆ. ಅಣ್ಣಾಮಲೈ ಹಾಗೂ ಶಾಸಕರಾದ ಲಾಲಾಜಿ ಮೆಂಡನ್ ಅವರು ಮಾಧ್ಯಮ ಕೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ನಯನಾ ಗಣೇಶ್, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಸ್ರಾರು ಕಾರ್ಯಕರ್ತರೊಂದಿಗೆ ಜಾಥದೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.ಅಭ್ಯರ್ಥಿ ವಿನಯಕುಮಾರ್ ಸೊರಕೆ ಕಟಪಾಡಿ ವಿಶ್ವನಾಥ ಕ್ಷೇತ್ರ, ಕಾಪು ಮಾರಿಯಮ್ಮ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಕಾಪು ಜನಾರ್ದನ ದೇವಸ್ಥಾನದಲ್ಲಿ ಅಂತಿಮವಾಗಿ ಪೂಜೆ ಸಲ್ಲಿಸಿ ಐದು ಸಾವಿರಕ್ಕೂ ಅಧಿಕ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಜಾಥದ ಮೂಲಕ ತೆರಳಿ
ಮನೆಯಲ್ಲಿ ನಿಲ್ಲಿಸಲಾಗಿದ್ದ ವಿದ್ಯುತ್ ಚಾಲಿತ ಬೈಕ್ ಇದಕ್ಕಿದಂತೆ ಹೊತ್ತಿ ಉರಿದು ಕರಕಲಾಗಿದ್ದು ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಶಂಕರಪುರ ಅರ್ಶಿಕಟ್ಟೆ ನಿವಾಸಿ ಜೋಸೆಫ್ ಎಂಬವರಿಗೆ ಸೇರಿದ ದ್ವಿಚಕ್ರವಾಹನ ಇದಾಗಿದ್ದು, ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಕರೀದಿ ಮಾಡಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆಮಂದಿ ಮಲಗಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಗೂಡಲ್ಲಿದ್ದ ಹಕ್ಕಿಗಳು ಕೂಡಾ ಬೆಂಕಿಯ ತೀವೃತೆಗೆ ಸುಟ್ಟು ಕರಗಲಾದ ದೃಶ್ಯ ಮನ ಕಲುವಂತ್ತಾಗಿದೆ.
ನನ್ನ ಕೊನೆಯ ಚುನಾವಣೆ ಇದಾಗಿದ್ದು, ಕ್ಷೇತ್ರದ ಜನತೆ ನನಗೆ ಗೆಲುವಿನ ವಿದಾಯ ಹೇಳಿ.. ಸೋಲಿನೊಂದಿಗೆ ಬೇಡ ಎಂಬುದಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ಅವರು ನಡೆಸಿದ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯೆ ನಾನು ನನ್ನ ಅಂತಿಮ ಚುನಾವಣೆ ಎಂದಿದ್ದೆ..ಆದರೆ ನಮ್ಮ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಿ ನಾನು ಸೋಲು ಕಂಡಿದ್ದೆ. ಸೊಲು ಕಂಡರೂ ನಾನು ಎಲ್ಲೊ ದೂರದ
ಕಾಪು ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ತ್ಯಾಜ್ಯ ದ ದುರ್ನಾತ ಪರಿಸರವೆಲ್ಲಾ ಪಸರಿಸಿದ್ದು ಜನ ರೋಗ ಭೀತಿಯ ಆತಂಕದಲ್ಲಿದ್ದಾರೆ.ಮೇಲ್ನೋಟಕ್ಕೆ ವಿದ್ಯುತ್ ಅವಘಢದಿಂದ ಬೆಂಕಿ ಹತ್ತಿಕೊಂಡಿರ ಬಹುದೆಂದು ಅಂದಾಜಿಸಲಾಗುತ್ತಿದೆ ಯಾದರೂ. ಮಾರಿಪೂಜೆಯ ಹಿನ್ನಲೆಯಲ್ಲಿ ಬಾರೀ ತ್ಯಾಜ್ಯಗಳು ಶೇಖರಣೆ ಗೊಳ್ಳುವ ಆತಂಕವಿದ್ದು, ಉದ್ದೇಶ ಪೂರ್ವಕವಾಗಿಯೇ ಯಾರೋ ಬೆಂಕಿ ಹಾಕಿದ್ದಾರೆಂಬ ಸಂಶಯ ಜನ ವ್ಯಕ್ತ ಪಡಿಸುತ್ತಿದ್ದಾರೆ. ಬೆಂಕಿಯ




























