ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್ ಎಂಬ 5 ಭಕ್ತಿ ಗೀತೆಗಳ ಲೋಕಾರ್ಪಣೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಗೆಗೆ ತುಳು ಭಕ್ತಿ ಗೀತೆಯು ಬಿಡುಗಡೆಗೊಂಡಿತು.
ಕೂಳೂರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಜುಲೈ 18ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ನಾಗರೀಕ ಹಿತರಕ್ಷಣಾ ಸಮಿತಿಯ ಕೂಳೂರಿನ ಅಧ್ಯಕ್ಷರಾದ ವಿಜಿ ಗುರುಚಂದ್ರ ಹೆಗ್ಡೆ ಅವರು ಮಾತನಾಡಿ, ಎನ್‍ಹೆಚ್ 66ಲ್ಲಿ ಅವೈಜ್ಞಾನಿ ಕಾಮಗಾರಿಯಿಂದ ರಸ್ತೆ ಹೊಂಡ-ಗುಂಡಿಗಳಿಂದ ತುಂಬಿ ಹೋಗಿದೆ. ಇದರಿಂದ ಸ್ಥಳೀಯರ ನಾಗರಿಕೆರಿಗೆ, ವ್ಯಾಪಾರಸ್ತರಿಗೆ, ವಾಹನ ಚಾಲಕರಿಗೆ ಅಂಬ್ಯುಲೆನ್ಸ್,
ಮೂಡುಬಿದಿರೆ: ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಹಲಸು ಮತ್ತು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ `ಸಮೃದ್ಧಿ’ಯು ಸಮಾಪನಗೊಂಡಿತ್ತು. ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ
ವಿಟ್ಲ: ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ. ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯ ಒಳಗೆ ಮಹಿಳೆ ಮಲಗಿದ್ದ ಸಂದರ್ಭ ಘಟನೆಯಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ. ವಾಹನವನ್ನು ತೆರವು ಮಾಡದೆ ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ
ಬ್ರಹ್ಮಾವರದಲ್ಲಿ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬ್ರಹ್ಮಾವರ ರಥ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದಿದೆ. ಗೋಪಾಲ ಪೂಜಾರಿ ಎನ್ನುವವರ ಮನೆಯು ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ನೀರೀಕ್ಷಕ ಲಕ್ಷ್ಮೀ ಮೀನಾರಾಯಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿತಗೊಂಡ ಸಂದರ್ಭದಲ್ಲಿ ಗೋಪಾಲ ಪೂಜಾರಿಯವರ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪ್ಯ ಅಕ್ಷಯ ಕಾಲೇಜು ಬಳಿ ಹೊಸ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ಮಾಣದ ವೇಳೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಹೊಂಡ ಮುಚ್ಚಿರಲಿಲ್ಲ. ಈ ನಡುವೆ ವಾಹನಗಳು ಅಪಘಾತ ಉಂಟಾಗುವ ಸಂಭವ ಇರುವ ಕಾರಣ ಸಂಪ್ಯ ಬೂತ್ ಅಧ್ಯಕ್ಷರಾದ ಶಾಫಿ ಎಂಬವರು ಶಾಸಕರಿಗೆ ದೂರು ಸಲ್ಲಿಸಿದ್ದರು. ಶಾಸಕರ ಸೂಚನೆಯಂತೆ
ಹೋಟೆಲ್ ಡಿಂಕಿ ಡೈನ್‍ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನದ ವತಿಯಿಂದ ಆಟಿದ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿಯ ವಿತರಣಾ ಕಾರ್ಯಕ್ರಮ ಜುಲೈ 17ರಂದು ಹಮ್ಮಿಕೊಳ್ಳಲಾಗಿದೆ. ನಗರದ ಕದ್ರಿಯಲ್ಲಿರುವ ಡಿಂಕಿ ಡೈನ್ ಹೋಟೆಲ್‍ನ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ವಿತರಿಸಲಿದ್ದಾರೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತುಳು ವಾಗ್ಮಿ ದಯಾನಂದ ಕತ್ತಲ್‍ಸಾರ್ ತಿಳಿಸಿದ್ದಾರೆ
ಮೂಡುಬಿದಿರೆ ಆಡಳಿತ ಸೌಧದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತದಿಂದ ಜನ ಸಂಪರ್ಕ ಸಭೆ ನಡೆಯಿತು. ಎಸ್‍ಪಿ ಸೈಮನ್ ಸಿ.ಎ ಹಾಗೂ ಅಧಿಕಾರಗಳ ತಂಡವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10 ಅಹವಾಲುಗಳನ್ನು ಸ್ವೀಕರಿಸಿದರು. ಸರ್ವೆ(2), ಕಂದಾಯ (5) ಪಂಚಾಯತ್ (1) ಪುರಸಭೆ (1) ಕೇಂದ್ರ ಲೋಕಾಯುಕ್ತ(1) ಸಹಿತ ಒಟ್ಟು 10 ದೂರುಗಳು ಬಂದಿದ್ದು ಈ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ದೂರುಗಳು
ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿಕೊಂಡು ಅವುಗಳಲ್ಲಿ ಸಮಸ್ಯೆಗಳು ಉದ್ಬವವಾಗದಂತೆ ಮುನ್ನೆಚ್ಚರಿಕೆವಹಿಸುವ ಕಾರ್ಯ ಗ್ರಾಮ ಮಟ್ಟದಿಂದಲೇ ಆಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹೇಳಿದರು. ಅವರು ಕಡಬ ತಾಲೂಕು ಸೌಧದಲ್ಲಿ ಪ್ರಕೃತಿವಿಕೋಪ ಮುನ್ನೆಚ್ಚರಿಕೆ ಕ್ರಮವಹಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗ್ರಾಮ ಮಟ್ಟದಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಎಲ್ಲೆಲ್ಲಿ ಪ್ರಕೃತಿವಿಕೋಪಗಳು ನಡೆದ ಪ್ರದೇಶಗಳನ್ನು ಗುರುತಿಸಿ
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಜಿ. ಸಂತೋಷ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಕೃಷ್ಣಮೂರ್ತಿ ಅವರು ನಗರಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ಹುದ್ದೆಗೆ ವರ್ಗವಾದ ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಎನ್.ಮಾಣಿಕ್ಯ ಅವರು ಪ್ರಭಾರ ನೆಲೆಯಲ್ಲಿ ಈ ಹೊಣೆ ನಿಭಾಯಿಸುತ್ತಿದ್ದರು.ಸಂತೋಷ್ ಕುಮಾರ್ ಅವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಉಪ