Home Posts tagged #Karavali (Page 3)

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ:ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ (ರಿ.)ಇದರ ರಜತ ಮಹೋತ್ಸವವು ಮಾರ್ಚ್ 10ರಂದು ನಡೆಯಲಿದ್ದು, ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಉಡುಪಿ

ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯ ಗೌರವ. ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆಗಳ ತರಬೇತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ 2024ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯು

ಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ವಿಧಿವಶ

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ವಿದ್ವಾಂಸ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ

ಮಂಗಳೂರು: ಉದ್ಯಾನವನ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಉತ್ತರ 32ನೇ ವಾರ್ಡಿನ ಶರ್ಬತ್ ಕಟ್ಟೆಯ ಐಟಿಐ ಬಳಿ ಸರ್ಕಾರಿ ಜಾಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸ್ಥಳೀಯರ ಬಹುಬೇಡಿಕೆಯ ಉದ್ಯಾನವನವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟನೆಗೊಳಿಸಿದರು. ಹಿರಿಯರು, ಮಕ್ಕಳು, ಸ್ಥಳೀಯರು, ಸೇರಿದಂತೆ ಎಲ್ಲರಿಗೂ ಈ ಉದ್ಯಾನವನ ಉಪಯೋಗಕರವಾಗಲಿದ್ದು ಇಲ್ಲಿನ ಉತ್ತಮ ಗುಣಮಟ್ಟದ ವ್ಯವಸ್ಥೆಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ

ಮಂಗಳೂರು: ಕರ್ನಾಟಕ ಸರ್ಕಾರದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಸವಾದ್ ಸುಳ್ಯ

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಎಂ. ಸಿ ಸುಧಾಕರ್ ಅವರ ಸೂಚನೆಯಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸವಾದ್ ಸುಳ್ಯ ಮೂಲತ ಸುಳ್ಯ ನಗರದ ಗಾಂಧಿನಗರದವರು, ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ ಮುಗಿಸಿ 14 ನೇ ವಯಸ್ಸಿನಲ್ಲಿ ಸರಕಾರಿ ಪ್ರೌಢ ಶಾಲೆ ಗಾಂಧೀನಗರ ಸುಳ್ಯ ಇದರ ಚುನಾಯಿತ ಉಪನಾಯಕನಾಗಿ ಆಯ್ಕೆಗೊಂಡಿದ್ದು, 10

ಕುಂದಾಪುರ: ಜರ್ಮನಿಯ ಯುವತಿಯನ್ನು ವರಿಸಿದ ಕುಂದಾಪುರದ ಯುವಕ..!

ಜರ್ಮನಿ ಮೂಲದ ಯುವತಿಯೋರ್ವರು ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್

ಪುತ್ತೂರು : ಅಪಹರಣಕ್ಕೊಳಗಾದ ಯುವಕ ಕೊಲೆ ಶಂಕೆ

ಪುತ್ತೂರಿನಲ್ಲಿ ನಡೆದ ಯುವಕ ಹನುಮಂತ ಅಪಹರಣ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಪುತ್ತೂರಿನ ಕುಂಬ್ರ ಎಂಬಲ್ಲಿ ಜೆಸಿಬಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ನಿವಾಸಿ ಹನುಮಂತ (25) ಅವರನ್ನು ಮೂವರು ಅಪಹರಿಸಿ ಕೊಲೆ ಮಾಡಿ ಮೃತ ದೇಹವನ್ನು ಆಗುಂಬೆ ಘಾಟ್ ನಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಬಗ್ಗೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೆ ಮೃತ ದೇಹ ಎಸೆದಿರುವುದಾಗಿ ಹೇಳಲಾದ ಆಗುಂಬೆ

ಕಟೀಲು: ದಶಾವತಾರ ಯಕ್ಷಗಾನ ಮಂಡಳಿಯಿಂದ 6 ಮೇಳಗಳ ತಿರುಗಾಟ ಆರಂಭ

ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ತಿರುಗಾಟಕ್ಕೆ ದೇವಲಯದಲ್ಲಿ ಪ್ರಥಮ ಸೇವೆಯಾಟದೊಂದಿಗೆ ಪ್ರಾರಂಭವಾಯಿತು.ಈ ವೇಳೆ ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಯಕ್ಷಗಾನ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸಿದರು.ಗೆಜ್ಜೆ ಮುಹೂರ್ತದ ಮೊದಲು ಮೇಳಗಳ ಕಲಾವಿದರಿಂದ ತಾಳಮದ್ದಳೆ ನಡೆಯಿತು ನಂತರ ರಥಬೀದಿಯಲ್ಲಿ ಚೌಕಿ ಪೂಜೆ ನಡೆದು 6 ಮೇಳಗಳಿಂದಲು ದೇವಿ ಮಹಾತ್ಮೆ

ಉಡುಪಿ: ಹರಕೆ ಈಡೇರಿತೆಂದು ಕೊರಗಜ್ಜನಿಗೆ 1002 ಮದ್ಯದ ಬಾಟಲಿ ಅರ್ಪಿಸಿದ ವ್ಯಕ್ತಿ!

ತುಳುನಾಡ ಕೊರಗಜ್ಜ ಸ್ವಾಮಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು. ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ. ವ್ಯಕ್ತಿಯೊಬ್ಬರು ತಾನು ಹೊತ್ತ ಹರಕೆ ಈಡೇರಿಸಿದರು ಎಂಬ ಕಾರಣಕ್ಕೆ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮದ್ಯದ ಸಮಾರಾಧನೆ ಮಾಡಿದ್ದಾರೆ! ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮದ ಬಗ್ಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಕರಾವಳಿಯ ದೈವರಾದನೆಯು ಜನರ ನಂಬಿಕೆಯ ಮೇಲೆ ನಿಂತಿದೆ. ಭಕ್ತರ

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ